![](https://vijaykarnataka.com/photo/85176575/photo-85176575.jpg)
ಹೊಸದಿಲ್ಲಿ: ಜಾರ್ಖಂಡ್ನಲ್ಲಿ ನಡೆದ ನ್ಯಾಯಾಧೀಶರ ಹತ್ಯೆ ಪ್ರಕರದ ತನಿಖೆಯ ಮೇಲ್ವಿಚಾರಣೆಯನ್ನು ನಡೆಸಲಿದೆ ಎಂದು ಸೋಮವಾರ ಹೇಳಿದ್ದು, ತನ್ನ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಲಿದೆ ಎಂದು ತಿಳಿಸಿದೆ.
ಸಿಬಿಐ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ವರದಿಯ ಬಗ್ಗೆ ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, “ಮುಚ್ಚಿದ ಲಕೋಟೆಯಲ್ಲಿ ಏನೂ ಇಲ್ಲ. ನಮಗೆ ಗಟ್ಟಿಯಾಗಿರುವುದು ಏನಾದರೂ ಬೇಕು. ರಾಜ್ಯದ ಕಡೆಯಿಂದ ಬಂಧನ, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಉದ್ದೇಶ, ಕಾರಣ ಏನು ಎಂಬ ಬಗ್ಗೆ ನೀವು (ಸಿಬಿಐ) ಏನನ್ನೂ ಸೂಚಿಸಿಲ್ಲ,” ಎಂದು ತರಾಟೆಗೆ ತೆಗೆದುಕೊಂಡರು.
ಸಿಬಿಐ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ತನಿಖೆ ನಡೆಯುತ್ತಿದೆ ಮತ್ತು ಕೆಲವರನ್ನು ಬಂಧಿಸಲಾಗಿದೆ. ಆದರೆ ಈ ಸಮಯದಲ್ಲಿ ಹೆಚ್ಚಿನದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಿದರು.
49 ವರ್ಷದ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಅವರನ್ನು ಜುಲೈ 28 ರಂದು ಹತ್ಯೆ ಮಾಡಲಾಗಿತ್ತು. ಬೆಳಗ್ಗಿನ ನಡಿಗೆಯಲ್ಲಿದ್ದ ಅವರಿಗೆ ರಿಕ್ಷಾವೊಂದು ಗುದ್ದಿ ಓಡಿತ್ತು.
ಆರಂಭದಲ್ಲಿ ಇದನ್ನು ಹಿಟ್ ಆಂಡ್ ರನ್ ಪ್ರಕರಣ ಎಂದುಕೊಳ್ಳಲಾಗಿತ್ತು. ಆದರೆ ಸಿಸಿಟಿವಿ ನೋಡಿದಾಗ, ಆಟೋ ರಿಕ್ಷಾ ಬೇಕೆಂದೇ ನ್ಯಾಯಾಧೀಶರಿಗೆ ಗುದ್ದಿ ಓಡಿ ಹೋಗಿರುವುದು ತಿಳಿದು ಬಂದಿತ್ತು. ಜುಲೈ 30 ರಂದು ಸುಪ್ರೀಂ ಕೋರ್ಟ್ ಸ್ವತಃ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.
ಧನ್ಬಾದ್ನಲ್ಲಿ ನಡೆದ ಹಲವು ಮಾಫಿಯಾ ಕೊಲೆಗಳ ಬಗ್ಗೆ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದರು. ಇಬ್ಬರು ಗ್ಯಾಂಗ್ಸ್ಟರ್ಗಳಿಗೆ ಅವರು ಜಾಮೀನನ್ನೂ ನಿರಾಕರಿಸಿದ್ದರು. ಇದರ ಜತೆಗೆ ಎಂಎಲ್ಎ ಆಪ್ತರೊಬ್ಬರು ನಡೆಸಿದ ಕೊಲೆಯ ಬಗ್ಗೆಯೂ ಅವರು ತನಿಖೆ ನಡೆಸುತ್ತಿದ್ದರು.
ಆರಂಭದಲ್ಲಿ ಜಾರ್ಖಂಡ್ ಹೈಕೋರ್ಟ್ನ ಸೂಚನೆ ಮೇರೆಗೆ ಸರಕಾರ ರಚಿಸಿದ ವಿಶೇಷ ತನಿಖಾ ತಂಡ (ಎಸ್ಐಟಿ) ಈ ಪ್ರಕರಣದ ವಿಚಾರಣೆಗೆ ಇಳಿದಿತ್ತು. ನಂತರ ಆಗಸ್ಟ್ 4 ರಂದು ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.