ಗವಿಗಂಗಾಧರೇಶ್ವರ ದೇವಾಲಯದಲ್ಲಿ ಜ.14ರಂದೇ ಸೂರ್ಯರಶ್ಮಿ ಸ್ಪರ್ಶ; ಭಕ್ತರಿಗೆ ಪ್ರವೇಶವಿಲ್ಲ!

ಶಿವನನ್ನು ಸೂರ್ಯ ರಶ್ಮಿ ಸ್ಪರ್ಶಿಸುವ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿರುತ್ತಾರೆ. ಆದರೆ ಕೋವಿಡ್‌ ತೀವ್ರತೆ ಹಿನ್ನೆಲೆಯಲ್ಲಿ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ದೇವಾಲಯದ ಪ್ರಧಾನ ಅರ್ಚಕ ಡಾ. ಸೋಮಸುಂದರ ದೀಕ್ಷಿತ್‌ ತಿಳಿಸಿದರು. ಮೋಡ ಅಡ್ಡ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಸೂರ್ಯರಶ್ಮಿ ಸ್ಪರ್ಶಿಸಿದ್ದು ಕಾಣಲಿಲ್ಲ. ಈ ಬಾರಿಯೂ ಕೋವಿಡ್ ಕಾರಣದಿಂದ ಈ ಅವಕಾಶ ತಪ್ಪಲಿದೆ.

ಗವಿಗಂಗಾಧರೇಶ್ವರ ದೇವಾಲಯದಲ್ಲಿ ಜ.14ರಂದೇ ಸೂರ್ಯರಶ್ಮಿ ಸ್ಪರ್ಶ; ಭಕ್ತರಿಗೆ ಪ್ರವೇಶವಿಲ್ಲ!
Linkup
ಬೆಂಗಳೂರು: ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಒಂದು ದಿನ ಮೊದಲು ಅಂದರೆ ಜ.14ರಂದು ಸಂಜೆ 5.14ಕ್ಕೆ ಸೂರ್ಯಾಭಿಷೇಕವಾಗಲಿದೆ. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಹೀಗಾಗಿ ಗವಿಗಂಗಾಧರೇಶ್ವರನ ಮೇಲೆ ಬೀಳುವ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗದೆ ನಿರಾಸೆ ಅನುಭವಿಸುವಂತಾಗಿದೆ. ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ. ಆದರೆ ಪಂಚಾಂಗದ ಪ್ರಕಾರ ಒಂದು ದಿನ ಮೊದಲು ಅಂದರೆ ಜ. 14ರಂದು ಸಂಜೆ 5.14 ರಿಂದ 5.17ರವರೆಗೆ ಅಂದರೆ ಮೂರು ನಿಮಿಷಗಳ ನಡುವೆ ಸೂರ್ಯ ರಶ್ಮಿ ಗವಿಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸಲಿದೆ. ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಾಗುವ ಸೂರ್ಯ ದೇವ ಶಿವದರ್ಶನ ಪಡೆಯುವ ಸಮಯವದು. ಈ ವೇಳೆ ಶಿವನ ವಿಗ್ರಹಕ್ಕೆ ಎಳನೀರು ಮತ್ತು ಕ್ಷೀರದಿಂದ ಅಭಿಷೇಕ ಮಾಡಲಾಗುತ್ತದೆ. ನಂತರ ಆಲಯದಲ್ಲಿ ಸಂಕಲ್ಪ ಪೂಜೆ ಮಾಡಲಾಗುವುದು. ಶಿವನನ್ನು ಸೂರ್ಯ ರಶ್ಮಿ ಸ್ಪರ್ಶಿಸುವ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿರುತ್ತಾರೆ. ಆದರೆ ಕೋವಿಡ್‌ ತೀವ್ರತೆ ಹಿನ್ನೆಲೆಯಲ್ಲಿ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ದೇವಾಲಯದ ಪ್ರಧಾನ ಅರ್ಚಕ ಡಾ. ಸೋಮಸುಂದರ ದೀಕ್ಷಿತ್‌ ತಿಳಿಸಿದರು. ಮೋಡ ಅಡ್ಡ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಸೂರ್ಯರಶ್ಮಿ ಸ್ಪರ್ಶಿಸಿದ್ದು ಕಾಣಲಿಲ್ಲ. ಪ್ರತಿ ವರ್ಷ ಭಕ್ತರಿಗೆ ಸೂರ್ಯರಶ್ಮಿ ವೀಕ್ಷಣೆಗೆ ಅನುಕೂಲವಾಗುವಂತೆ ದೇವಾಲಯದ ಹೊರಾಂಗಣದಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿತ್ತು. ಈ ಬಾರಿ ಅದ್ಯಾವುದನ್ನೂ ಅಳವಡಿಸುತ್ತಿಲ್ಲ.