ಗೋಗ್ರಾ ಪ್ರದೇಶದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಭಾರತ, ಚೀನಾ ಒಪ್ಪಂದ

ಭಾರತ ಮತ್ತು ಚೀನಾಗಳು ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿನ ಗೋಗ್ರಾ ಸಂಘರ್ಷ ಪ್ರದೇಶದಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಕೊಂಡಿವೆ. ಉಭಯ ದೇಶಗಳು ಆರು ಸ್ಥಳಗಳಲ್ಲಿ ನಾಲ್ಕು ಸ್ಥಳಗಳಿಂದ ಸೇನೆ ತೆರವುಗೊಳಿಸಿದಂತೆ ಆಗಲಿದೆ.

ಗೋಗ್ರಾ ಪ್ರದೇಶದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಭಾರತ, ಚೀನಾ ಒಪ್ಪಂದ
Linkup
ಹೊಸದಿಲ್ಲಿ: ಪೂರ್ವ ಲಡಾಖ್‌ನ ಗೋಗ್ರಾ ಪ್ರದೇಶದಿಂದ ತಮ್ಮ ತಮ್ಮ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಮತ್ತು ಪರಸ್ಪರ ಒಪ್ಪಿಕೊಂಡಿವೆ. ಈ ಮೂಲಕ ಭಾಗದಲ್ಲಿ ವಾಸ್ತವ ನಿಯಂತ್ರಣ ರೇಖೆಯ () ಮರುಸ್ಥಾಪನೆಗೆ ಮುಂದಾಗಿವೆ ಎಂದು ಭಾರತ ಸರಕಾರ ಶುಕ್ರವಾರ ತಿಳಿಸಿದೆ. ನೆರೆಹೊರೆಯ ದೇಶಗಳ ನಡುವೆ ಇತ್ತೀಚೆಗೆ ನಡೆದ ಮಾತುಕತೆ, ಈ ಮಹತ್ವದ ನಡೆಯ ಫಲಿತಾಂಶ ನೀಡಿದೆ. ಕಳೆದ ವರ್ಷ ಉಭಯ ದೇಶಗಳ ನಡುವಿನ ಸೇನಾ ಸಂಘರ್ಷ ತೀವ್ರಗೊಂಡ ಸಂದರ್ಭದಲ್ಲಿ ಈ ಭಾಗಗಳಲ್ಲಿ ನಿರ್ಮಿಸಲಾಗಿದ್ದ ಎಲ್ಲ ತಾತ್ಕಾಲಿಕ ರಚನೆಗಳನ್ನೂ ನಾಶಪಡಿಸಲು ಒಪ್ಪಿಕೊಳ್ಳಲಾಗಿದೆ. ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪ್ರಕ್ರಿಯೆಯಾಗಿದೆ ಎಂದು ಅದು ತಿಳಿಸಿದೆ. ಗೋಗ್ರಾ ನಿರ್ಣಯದೊಂದಿಗೆ ಭಾರತ ಮತ್ತು ಚೀನಾ, ಆರು ಸಂಘರ್ಷಮಯ ಪ್ರದೇಶಗಳ ಪೈಕಿ ನಾಲ್ಕರಿಂದ ಸೇನೆ ವಾಪಸಾತಿ ಪ್ರಕ್ರಿಯೆ ನಡೆಸಿದಂತಾಗಲಿದೆ. ಗಲ್ವಾನ್, ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ಪಡೆಗಳು ವಾಪಸಾಗಿವೆ. ಆದರೆ ದೇಪ್ಸಂಗ್ ಮತ್ತು ಹಾಟ್ ಸ್ಪ್ರಿಂಗ್ಸ್‌ಗಳಲ್ಲಿನ ಬಿಕ್ಕಟ್ಟು ಮುಂದುವರಿದಿದೆ. ಎರಡೂ ದೇಶಗಳ ಸೇನಾ ಪಡೆಗಳ ನಡುವೆ ನಡೆದ 12ನೇ ಸುತ್ತಿನ ಮಾತುಕತೆಯಲ್ಲಿ, ಗೋಗ್ರಾ ಎಂದು ಕರೆಯಲಾಗುವ ಗಸ್ತು ಕೇಂದ್ರ 17ಎ ಪ್ರದೇಶದಿಂದ ಸೇನಾ ಹಿಂತೆಗೆತಕ್ಕೆ ಒಪ್ಪಿಗೆ ಸೂಚಿಸಲಾಯಿತು. ಕಳೆದ ವರ್ಷದ ಮೇ ತಿಂಗಳಲ್ಲಿ ಈ ಪ್ರದೇಶದಲ್ಲಿ ಉಭಯ ಸೇನೆಗಳು ಸಂಘರ್ಷ ಸ್ಥಿತಿಯನ್ನು ಎದುರಿಸಿದ್ದವು.