ಕೃಷ್ಯುತ್ಪನ್ನಗಳ ರಫ್ತಿಗೆ ನಿಷೇಧದ ಹೊರತಾಗಿಯೂ 1 ಮಿಲಿಯನ್‌ ಟನ್‌ ಗೋಧಿ ರಫ್ತಿಗೆ ಅವಕಾಶ!

Wheat Export Ban: ಈ ಹಿಂದೆ ಈ ಆರ್ಥಿಕ ವರ್ಷದಲ್ಲಿ ಸುಮಾರು 10 ಮಿಲಿಯನ್‌ ಟನ್‌ನಷ್ಟು ಗೋಧಿಯನ್ನು ರಫ್ತು ಮಾಡಲು ಭಾರತ ನಿರ್ಧರಿಸಿತ್ತು. ಅದಕ್ಕಾಗಿ ತ್ವರಿತ ಕ್ರಮಗಳನ್ನು ತೆಗೆದುಕೊಂಡಿದ್ದ ಸರ್ಕಾರ, ವ್ಯಾಪಾರ ಪ್ರತಿನಿಧಿಗಳನ್ನು ಮಧ್ಯಪ್ರಾಚ್ಯದ 9 ರಾಷ್ಟ್ರಗಳಿಗೆ ಕಳುಹಿಸಕೊಟ್ಟಿತ್ತು. ಇದರ ಬೆನ್ನಲ್ಲೇ, ಆಹಾರ ಉತ್ಪನ್ನಗಳ ಕೊರತೆ ಹಾಗೂ ಹಣದುಬ್ಬರಿಂದಾಗಿ ಕೃಷಿ ಉತ್ಪನ್ನಗಳ ರಫ್ತಿಗೆ ಮೇ 13 ರಂದು ಕೇಂದ್ರ ಸರ್ಕಾರ ನಿಷೇಧ ಹೇರಿತ್ತು. ಮೇ 13 ಕ್ಕೆ ಮೊದಲು ಸ್ವೀಕಾರ ಮಾಡಲಾಗದ ಆರ್ಡರ್‌ಗಳ ರಫ್ತಿಗೆ ಮಾತ್ರ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಇದೀಗ ಗೋಧಿ ರಫ್ತಿಗೆ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಶೀಘ್ರವೇ ಗೋಧಿ ರಫ್ತು ಆರಂಭವಾಗಲಿದೆ.

Linkup