ಕೋವಿಡ್ ಅಟ್ಟಹಾಸದ ನಡುವೆಯೂ ಬೆಂಗಳೂರಿನಲ್ಲಿ ಬೆಡ್ ಬ್ಲಾಕ್ ಮಹಾ ದಂಧೆ!

ಎಲ್ಲರನ್ನು ಬೆಚ್ಚಿ ಬೀಳಿಸುವ ಸುದ್ದಿ ಇಲ್ಲಿದೆ. ಹೌದು, ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಬೆಡ್ ದಂಧೆ ನಡೆಯುತ್ತಿದೆ. ಕೋವಿಡ್ ಸೋಂಕಿತರಾಗಿ ಐಸೋಲೇಷನ್ ಆದವರ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕ್ ಮಾಡಲಾಗುತ್ತಿದೆ.

ಕೋವಿಡ್ ಅಟ್ಟಹಾಸದ ನಡುವೆಯೂ ಬೆಂಗಳೂರಿನಲ್ಲಿ ಬೆಡ್ ಬ್ಲಾಕ್ ಮಹಾ ದಂಧೆ!
Linkup
: ಕೋವಿಡ್ ಸೋಂಕಿತರಿಗೆ ತುರ್ತು ಚಿಕಿತ್ಸೆ ಪಡೆಯಲು ಬೆಂಗಳೂರಿನಲ್ಲಿ ಬೆಡ್ ಸಿಗುತ್ತಿಲ್ಲ. ಬೆಡ್ ಗಾಗಿ ಫೋನ್ ಕರೆ ಮಾಡಿದರೂ ಆಸ್ಪತ್ರೆಗಳಿಂದ, ಸಹಾಯವಾಣಿಯಿಂದ ಒಂದೇ ಉತ್ತರ ಬೆಡ್ ಇಲ್ಲ. ಆದರೆ, ಎಲ್ಲರನ್ನು ಬೆಚ್ಚಿ ಬೀಳಿಸುವ ಸುದ್ದಿ ಇಲ್ಲಿದೆ. ಹೌದು, ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಬೆಡ್ ದಂಧೆ ನಡೆಯುತ್ತಿದೆ. ಕೋವಿಡ್ ಸೋಂಕಿತರಾಗಿ ಐಸೋಲೇಷನ್ ಆದವರ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕ್ ಮಾಡಲಾಗುತ್ತಿದೆ. ಸಂಸದ ತೇಜಸ್ವಿ ಸೂರ್ಯ ಅವರ ತಂಡ ನಡೆಸಿದ ಬೆಡ್ ಆಡಿಟ್ ನಲ್ಲಿ ಈ ವಿಚಾರ ಬಯಲಾಗಿದೆ. ಕೋವಿಡ್ ಸೋಂಕಿತರಾಗಿ ಮನೆಯಲ್ಲಿ ಐಸೋಲೇಷನ್ ಆಗಿರುವವರ ಹೆಸರಿನಲ್ಲಿ ಬೆಡ್ ಬುಕ್ ಮಾಡಿರುವುದು ಬಹಿರಂಗಗೊಂಡಿದೆ. ಈ ಕುರಿತಾಗಿ ತೇಜಸ್ವಿ ಸೂರ್ಯ ತಂಡದ ಸದಸ್ಯರು ಬೆಡ್ ಬ್ಲಾಕ್ ಆದವರಿಗೆ ಫೋನ್ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಬೆಡ್ ಬುಕ್ ಆಗಿದೆ, ನೀವು ಬೆಡ್ ಬುಕ್ ಮಾಡಿದ್ದೀರಾ ಎಂದು ಪ್ರಶ್ನಿಸಿದರೆ ಅವರಿಗೆ ಗೊತ್ತೇ ಇಲ್ಲ. ಹೀಗೆ ಸಾಕಷ್ಟು ಸೋಂಕಿತರ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡಲಾಗಿದೆ. ಆದರೆ ಇದನ್ನು ಯಾರಿಗೆ ನೀಡಲಾಗುತ್ತದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಸೌತ್ ಝೋನ್ ನಲ್ಲಿ ಸುಮಾರು ಹತ್ತು ಸಾವಿರ ಬೆಡ್ ತಮಗೆ ಬೇಕಾದವರಿಗೆ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬೆಡ್ ಗಳನ್ನು ವಿವಿಐಪಿಗಳು , ಆಪ್ತರು, ಕ್ಷೇತ್ರದ ಪ್ರಭಾವಿಗಳು ಹೇಳಿದವರಿಗಷ್ಟೇ ನೀಡಲಾಗುತ್ತಿದೆ. ಕೋವಿಡ್ ಸೋಂಕಿತರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ 75 ಶೇ ಬೆಡ್ ಗಳನ್ನು ಖಾಸಗಿ ಆಸ್ಪತ್ರೆಗಳಿಂದ ಸರ್ಕಾರ ಪಡೆದುಕೊಂಡಿದೆ. ‌ಆದರೆ ಜನಸಾಮಾನ್ಯರಿಗೆ ಬೆಡ್ ಸಿಗುತ್ತಿಲ್ಲ. ಬೆಡ್ ಇಲ್ಲದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಬೆಡ್ ಸಿಗದೆ ಪ್ರಾಣ ಕಳೆದುಕೊಂಡ ಘಟನೆಗಳು ವರದಿ ಆಗಿವೆ. ಆದರೆ ಇಂತಹ ಸಂದರ್ಭವನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಅ ಆಘಾತಕಾರಿ.