'ಟ್ವಿಟ್ಟರ್‌' ಹೊಸ ಐಟಿ ನಿಯಮಗಳನ್ನು ಪಾಲಿಸಲಿ: ದಿಲ್ಲಿ ಹೈಕೋರ್ಟ್‌ ಸೂಚನೆ

ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮ (ಐಟಿ ರೂಲ್ಸ್‌) ಗಳನ್ನು ಟ್ವಿಟರ್ ಪಾಲಿಸಬೇಕು ಎಂದು ದಿಲ್ಲಿ ಹೈಕೋರ್ಟ್‌ ಸೋಮವಾರ ತಿಳಿಸಿದೆ. ಹೈಕೋರ್ಟ್‌ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಈ ಸೂಚನೆ ನೀಡಿದ್ದಾರೆ.

'ಟ್ವಿಟ್ಟರ್‌' ಹೊಸ ಐಟಿ ನಿಯಮಗಳನ್ನು ಪಾಲಿಸಲಿ: ದಿಲ್ಲಿ ಹೈಕೋರ್ಟ್‌ ಸೂಚನೆ
Linkup
ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮ (ಐಟಿ ರೂಲ್ಸ್‌) ಗಳನ್ನು ಟ್ವಿಟರ್ ಪಾಲಿಸಬೇಕು ಎಂದು ಸೋಮವಾರ ತಿಳಿಸಿದೆ. ಹೈಕೋರ್ಟ್‌ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಈ ಸೂಚನೆ ನೀಡಿದ್ದಾರೆ. ಜತಗೆ ಸಂಸ್ಥೆಯು ಹೊಸ ಐಟಿ ನಿಯಮಗಳನ್ನು ಪಾಲಿಸುತ್ತಿಲ್ಲ' ಎಂದು ವಕೀಲ ಅಮಿತ್ ಆಚಾರ್ಯ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ಟ್ವಿಟ್ಟರ್‌ಗೆ ನೋಟಿಸ್‌ ಜಾರಿಗೊಳಿಸಿದರು. ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಹಾಜರಾದ ಟ್ವಿಟ್ಟರ್‌, 'ನಾವು ನಿಯಮಗಳನ್ನು ಪಾಲಿಸುತ್ತಿದ್ದೇವೆ ಮತ್ತು ಇದಕ್ಕೆ ಸಂಬಂಧಿಸಿಂತೆ ಕುಂದುಕೊರತೆ ಆಲಿಸಲು ಅಧಿಕಾರಿಯನ್ನು ನೇಮಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರವು ತಮ್ಮ ಹೇಳಿಕೆಯನ್ನು ವಿವಾದವಾಗಿಸಿದೆ' ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ಸರ್ಕಾರದ ಪರ ವಕೀಲ ರಿಪುದಮನ್‌ ಸಿಂಗ್ ಭಾರದ್ವಾಜ್ ಅವರು ಈ ವಾದವನ್ನು ಅಲ್ಲಗಳೆದರು. ಹೊಸ ಐಟಿ ನಿಯಮಗಳು ಫೆಬ್ರವರಿ 25 ರಿಂದ ಜಾರಿಗೆ ಬಂದಿವೆ. ಅವುಗಳನ್ನು ಅನುಸರಿಸಲು ಕೇಂದ್ರವು ಟ್ವಿಟರ್ ಸೇರಿದಂತೆ ಪ್ರತಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ ಎಂದು ಆಚಾರ್ಯ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ದಿಲ್ಲಿ ಹೈಕೋರ್ಟ್‌ನಲ್ಲಿ ವಾಟ್ಸಾಪ್‌ ಪ್ರಕರಣ ಹೊಸ ಐಟಿ ನೀತಿ ವಿರುದ್ಧ ವಾಟ್ಸಾಪ್ ಸಂಸ್ಥೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ವಾಟ್ಸಾಪ್‌ ಸಂದೇಶಗಳನ್ನು ಟ್ರೇಸ್‌ ಮಾಡಲು ಅವಕಾಶ ಕೇಳಿರುವುದು, ಪ್ರತಿಯೊಬ್ಬರ ಫಿಂಗರ್‌ ಪ್ರಿಂಟ್‌ಗಳನ್ನು (ಬೆರಳಚ್ಚು) ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಸಮ. ಇದು ಜನತೆಯ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬುದು ವಾಟ್ಸಾಪ್‌ ವಾದವಾಗಿದೆ. ಆದರೆ, ಕೇಂದ್ರ ಸರಕಾರ ಸ್ಪಷ್ಟನೆ ನೀಡಿದ್ದು, ಹೊಸ ಐಟಿ ನಿಯಮಗಳು ವಾಟ್ಸಾಪ್‌ನ ಕಾರ್ಯನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಬಳಕೆದಾರರ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ.