ಕಾರಿನ ಮೇಲೆ ನಾಯಿ ಮೂತ್ರ ವಿಸರ್ಜನೆ..! ಶ್ವಾನದ ಮಾಲೀಕನ ಮೇಲೆ ಕಲ್ಲಿನಿಂದ ಹಲ್ಲೆ

ನಾಯಿಯ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬಾಣಸವಾಡಿಯಲ್ಲಿ ವೃದ್ಧನ ಮೇಲೆ ಕಲ್ಲಿನಿಂದ ಹಲ್ಲೆ ನಡೆದಿದೆ. ಕಾರು ಟಯರ್‌ಗೆ ನಾಯಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಕಾರು ಮಾಲೀಕ ನಾಯಿ ಮಾಲೀಕ 71 ವರ್ಷದ ವೃದ್ಧನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಕಾರಿನ ಮೇಲೆ ನಾಯಿ ಮೂತ್ರ ವಿಸರ್ಜನೆ..! ಶ್ವಾನದ ಮಾಲೀಕನ ಮೇಲೆ ಕಲ್ಲಿನಿಂದ ಹಲ್ಲೆ
Linkup
ಟಯರ್‌ಗೆ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ. ಆದರೆ, ಇದೇ ವಿಚಾರ ರಾಜಧಾನಿ ಬೆಂಗಳೂರಿನಲ್ಲಿ ಗಲಾಟೆಗೆ ಕಾರಣವಾಗಿದ್ದು, ಬಾಣಸವಾಡಿಯಲ್ಲಿ 71 ವರ್ಷದ ವೃದ್ಧನ ಮೇಲೆ ಕಲ್ಲಿನಿಂದ ನಡೆಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಪತ್ತೆಯಾಗಿರುವ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಪ್ಪ ಲೇಔಟ್‌ನಲ್ಲಿ ಭಾನುವಾರ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಗೇರಿ ರೋಜಾರಿಯೋ ಎಂಬ ವೃದ್ಧ ತನ್ನ ನಾಯಿಯನ್ನು ಆಚೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಎದುರು ಮನೆ ನಿವಾಸಿ ಚಾರ್ಲ್ಸ್ ಎಂಬಾತನ ಕಾರಿನ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡಿದೆ. ನಾಯಿ ಮೂತ್ರ ವಿಸರ್ಜನೆ ಮಾಡಿರುವುದನ್ನು ನೋಡಿದ ಚಾರ್ಲ್ಸ್‌ ವೃದ್ಧನ ಮೇಲೆ ಕೋಪಗೊಂಡಿದ್ದಾನೆ. ಇದರಿಂದ ಗೇರಿ ರೋಜಾರಿಯೊ ಹಾಗೂ ಚಾರ್ಲ್ಸ್ ಮಾತಿನ ಚಕಮಕಿ ನಡೆದಿದೆ. ಬಳಿಕ ಚಾರ್ಲ್ಸ್ ಇದ್ದಕ್ಕಿದ್ದಂತೆ ತನ್ನ ಮೊದಲನೇ ಮಹಡಿಯಿಂದ ವೃದ್ಧನ ಮೇಲೆ ಕಲ್ಲು ಎಸೆದಿದ್ದು, ಕಲ್ಲು ವೃದ್ಧನ ಮುಖಕ್ಕೆ ಬಿದ್ದು 2 ಹಲ್ಲುಗಳು ಮುರಿದಿವೆ. ಮುಖಕ್ಕೆ ಕಲ್ಲು ಬಿದ್ದ ತಕ್ಷಣ ಕೆಳಗೆ ಕುಸಿದು ಬಿದ್ದ ವೃದ್ಧ ಗೇರಿ ರೋಜಾರಿಯೋನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ವೃದ್ಧ ಚೇತರಿಸಿಕೊಂಡಿದ್ದು, ವೃದ್ಧನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಆರೋಪಿ ಸದ್ಯ ಚಾರ್ಲ್ಸ್ ನಾಪತ್ತೆಯಾಗಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ಟಯರ್‌ಗೆ ನಾಯಿ ಮೂತ್ರ ಮಾಡಿದ್ದಕ್ಕೆ ಜಗಳ ನಡೆದಿತ್ತು. ಈ ಹಿಂದೆಯೂ ಹಲವು ಬಾರಿ ನಮ್ಮ ಜೊತೆ ಚಾರ್ಲ್ಸ್ ಜಗಳ ಮಾಡಿದ್ದರು. ಗಲಾಟೆ ನಡೆದ ದಿನ ಮನೆಯಲ್ಲಿ ಅತ್ತೆ ಮತ್ತು ಮಾವ ಇಬ್ಬರೇ ಇದ್ರು. ಆದರೆ, ಭಾನುವಾರ ಕಲ್ಲಿನಿಂದ ಹಲ್ಲೆ ಮಾಡಿದ್ದಕ್ಕೆ ದೂರು ದಾಖಲಿಸಿದ್ದೇವೆ. ನಮ್ಮ ಮನೆ ಮೇಲೆ ಬಾಡಿಗೆಗೆ ಇರುವ ಅರುಣ್ ಎಂಬುವರು ಕೂಡಲೇ ಗೇರಿ ರೋಜಾರಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಗೇರಿ ರೋಜಾರಿಯಾ ಸೊಸೆ ಮಾರಿಯಾ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈ ಸಂಬಂಧ ಗೇರಿ ರೋಜರಿಯಾ ಕುಟುಂಬ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಲ್ಲಿನಿಂದ ಹೊಡೆದು, ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಗೇರಿ ರೋಜಾರಿಯಾ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಚಿತ್ರದುರ್ಗದಲ್ಲಿ ನಾಯಿ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ ಇಂತಹದ್ದೇ ಘಟನೆ ವಾರದ ಹಿಂದೆ ಚಿತ್ರದುರ್ಗದಲ್ಲಿ ನಡೆದಿದ್ದು, ನಾಯಿ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಚಿತ್ರದುರ್ಗದ ಜಾಲಿಕಟ್ಟೆ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಮನೆಯ ಮುಂದೆ ನಾಯಿ ವಿಚಾರಕ್ಕೆ ಜಗಳ ಆರಂಭವಾಗಿದ್ದು, ಮಹಂತೇಶ್ ಎಂಬಾತ ಕೊಲೆಯಾಗಿದ್ದ.