ಓಮಿಕ್ರಾನ್ ಸೋಂಕಿತರ ಜತೆ ಸಂಪರ್ಕ ಹೊಂದಿದ್ದ 200 ಮಂದಿಯನ್ನು ಪತ್ತೆ ಹಚ್ಚಲಾಗಿದೆ: ಗೌರವ್ ಗುಪ್ತಾ

ಯಾರು ಲಸಿಕೆ ತೆಗೊಂಡಿಲ್ಲ ಅವರಿಗೆ ಹಂತ ಹಂತವಾಗಿ ಸೇವೆಗಳನ್ನು ‌ಕಟ್ ಮಾಡ್ತೀವಿ ಎಂದರು. ಇನ್ನು ಇದೇ ಸಂದರ್ಭದಲ್ಲಿ ಓಮಿಕ್ರಾನ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಇರುವುದಿಲ್ಲ

ಓಮಿಕ್ರಾನ್ ಸೋಂಕಿತರ ಜತೆ ಸಂಪರ್ಕ ಹೊಂದಿದ್ದ 200 ಮಂದಿಯನ್ನು ಪತ್ತೆ ಹಚ್ಚಲಾಗಿದೆ: ಗೌರವ್ ಗುಪ್ತಾ
Linkup
ಬೆಂಗಳೂರು: ಓಮಿಕ್ರಾನ್ ಸೋಂಕು ಪಾಸಿಟಿವ್‌ ಬಂದವರ ಜತೆ ಸಂಪರ್ಕ ಹೊಂದಿದ್ದ 200 ಮಂದಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ. ಶುಕ್ರವಾರ ಮಾತನಾಡಿದ ಅವರು,ಓಮಿಕ್ರಾನ್ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜತೆಗೆ ಈಗಾಗಲೇ ಸಭೆ ನಡೆಸಿದ್ದೇವೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ನಿಗಾ ಇಡಲಾಗಿದೆ ಎಂದು ತಿಳಿಸಿದರು. ಬೆಂಗಳೂರು ನಗರಕ್ಕೆ ಬರುವವರ ಮೇಲೆ ನಿಗಾ ಇಡಲಾಗುವುದು. ಹಾಗೂ ಕೋವಿಡ್ ತಪಾಸಣೆಯನ್ನು ಕೂಡ ಹೆಚ್ಚು ಹೆಚ್ಚು ಮಾಡ್ತೀವಿ. ಹೊರಗಡೆಯಿಂದ ಬರುವವರನ್ನು ಟ್ರೇಸ್ ಮಾಡುತ್ತೇವೆ. ಈವರೆಗೆ ಬಂದವರನ್ನು ತಪಾಸಣೆ ಒಳಪಡಿಸಲಾಗಿದೆ ಎಂದು ತಿಳಿಸಿದರು. ಓಮಿಕ್ರಾನ್ ವೈರಸ್ ಇರುವವರ ಜೊತೆಗೆ ಇದ್ದವರ 200 ಜನರನ್ನು ಟ್ರೇಸ್ ಮಾಡಿದ್ದೇವೆ, ಐದು ಜನರ ಜಿನೋಮ್ ಸೀಕ್ವೆನ್ಸಿಂಗ್ ವರದಿ ಬರಲು ಎರಡು ಮೂರು ದಿನ ಆಗುತ್ತೆ ಎಂದು ತಿಳಿಸಿದ ಅವರು, ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು. ಅಪಾರ್ಟ್‌ಮೆಂಟ್‌ ಮಾಲೀಕರ ಜತೆಗೆ ಚರ್ಚೆ ಮಾಡಿ ಲಸಿಕೆ ಹಾಗೂ ಟೆಸ್ಟಿಂಗ್ ಕಡ್ಡಾಯ ಮಾಡುತ್ತೇವೆ. ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಎರಡೂ ಡೋಸ್ ಪಡೆಯವಂತೆ ಕಡ್ಡಾಯ ಮಾಡುತ್ತೇವೆ, ಮಕ್ಕಳ ಪೋಷಕರಿಗೆ, ಸಿನಿಮಾ ಮಂದಿರಗಳಿಗೆ ಹೋಗುವವರಿಗೆ, ಮಾಲ್ ಹೋಗುವವರಿಗೆ ಡಬಲ್ ಡೋಸ್ ಲಸಿಕೆ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು. ಯಾರು ಲಸಿಕೆ ತೆಗೊಂಡಿಲ್ಲ ಅವರಿಗೆ ಹಂತ ಹಂತವಾಗಿ ಸೇವೆಗಳನ್ನು ‌ಕಟ್ ಮಾಡ್ತೀವಿ ಎಂದರು. ಇನ್ನು ಇದೇ ಸಂದರ್ಭದಲ್ಲಿ ಓಮಿಕ್ರಾನ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಇರುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಗೌರವ್‌ ಗುಪ್ತಾ ಸ್ಪಷ್ಟಪಡಿಸಿದರು. ಈ ನಡುವೆ ವೈರಸ್‌ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ. ಅದರಂತೆ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಅದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.