ಒಂದೇ ಚಿತೆಯಲ್ಲಿ ರಾವತ್ ದಂಪತಿ ಅಂತ್ಯಸಂಸ್ಕಾರ: ಹೆಣ್ಣುಮಕ್ಕಳಿಂದ ಅಂತಿಮ ವಿಧಿವಿಧಾನ

ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಅವರ ಅಂತ್ಯಸಂಸ್ಕಾರವನ್ನು ಅವರ ಇಬ್ಬರು ಹೆಣ್ಣುಮಕ್ಕಳು ಶುಕ್ರವಾರ ನೆರವೇರಿಸಿದರು. ಸಕಲ ಸೇನಾ ಗೌರವಗಳೊಂದಿಗೆ 17 ಸುತ್ತು ಗುಂಡು ಹಾರಿಸಿ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಒಂದೇ ಚಿತೆಯಲ್ಲಿ ರಾವತ್ ದಂಪತಿ ಅಂತ್ಯಸಂಸ್ಕಾರ: ಹೆಣ್ಣುಮಕ್ಕಳಿಂದ ಅಂತಿಮ ವಿಧಿವಿಧಾನ
Linkup
ಹೊಸದಿಲ್ಲಿ: ವಾಯುಪಡೆ ಹೆಲಿಕಾಪ್ಟರ್ ಅಪಘಾತದಲ್ಲಿ ಬುಧವಾರ ಮೃತಪಟ್ಟ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ (General ) ಮತ್ತು ಅವರ ಪತ್ನಿ ಮಧುಲಿಕಾ ರಾವತ್ (Madhulika Rawat) ಅವರ ಅಂತ್ಯಕ್ರಿಯೆ ದಿಲ್ಲಿಯ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಶುಕ್ರವಾರ ಸಕಲ ಸೇನಾ ಗೌರವಗಳೊಂದಿಗೆ ನೆರವೇರಿತು. ರಾವತ್ ಅವರ ಇಬ್ಬರು ಹೆಣ್ಣುಮಕ್ಕಳು ಅಂತ್ಯಕ್ರಿಯೆ ವಿಧಿ ವಿಧಾನಗಳನ್ನು ನೆರವೇರಿಸಿದರು. ರಾಜಕೀಯ ನಾಯಕರು ಮತ್ತು ಸೇನಾ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ತಂದೆ ಮತ್ತು ತಾಯಿ ಇಬ್ಬರಿಗೂ ಒಂದೇ ಬಾರಿಗೆ ಅವರ ಹೆಣ್ಣುಮಕ್ಕಳಾದ ಕೃತಿಕಾ ಮತ್ತು ತಾರಿಣಿ ನೆರವೇರಿಸುವ ದುರಂತ ಹಾಗೂ ಅತ್ಯಂತ ದುಃಖದ ಸನ್ನಿವೇಶಕ್ಕೆ ದೇಶ ಸಾಕ್ಷಿಯಾಯಿತು. ಈ ವೇಳೆ ಭಾರತೀಯ ಸೇನೆ 17 ಸುತ್ತು ಗುಂಡು ಹಾರಿಸುವ ಮೂಲಕ ಜನರಲ್ ಬಿಪಿನ್ ರಾವತ್ ಅವರಿಗೆ ಸೇನಾ ಗೌರವ ಸಲ್ಲಿಸಿತು. ಸೇನಾ ವಾದ್ಯಗಳು ಮೊಳಗುವಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎದ್ದು ನಿಂತು ರಾವತ್ ಅವರಿಗೆ ನಮನ ಸಲ್ಲಿಸಿದರು. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಹಿರಿಯ ಸೇನಾ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಇದೇ ಸ್ಥಳದಲ್ಲಿ ಬೆಳಿಗ್ಗೆ ರಾವತ್ ಅವರ ಸಹಾಯಕ ಬ್ರಿಗೇಡಿಯರ್ ಲಖ್ವಿಂದರ್ ಲಿಡ್ಡೆರ್ ಅವರ ಅಂತ್ಯಕ್ರಿಯೆ ನಡೆದಿತ್ತು. ರಾವತ್ ಅವರ ಅಂತ್ಯಸಂಸ್ಕಾರದ ವೇಳೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಗಿತ್ತು. 800 ಯೋಧರು ಅಂತಿಮ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ರಾವತ್ ಅವರ ಅಸ್ಥಿಯನ್ನು ಶನಿವಾರ ಹರಿದ್ವಾರಕ್ಕೆ ಕೊಂಡೊಯ್ಯಲು ಕುಟುಂಬದ ಸದಸ್ಯರು ಉದ್ದೇಶಿಸಿದ್ದಾರೆ. ಉತ್ತರಾಖಂಡ ಮೂಲದ ರಾವತ್ ಅವರ ಅಸ್ಥಿಯನ್ನು ತವರು ನೆಲದಲ್ಲಿ ವಿಸರ್ಜಿಸುವ ಸಾಧ್ಯತೆ ಇದೆ. ರಾವತ್, ಅವರ ಪತ್ನಿ ಹಾಗೂ ಇತರೆ 11 ಮಂದಿಯ ಮೃತದೇಹಗಳನ್ನು ಗುರುವಾರ ರಾತ್ರಿ ದಿಲ್ಲಿಗೆ ಸಿ130-ಜೆ ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನದಲ್ಲಿ ಕರೆತರಲಾಗಿತ್ತು. ಬಳಿಕ ರಾವತ್ ಅವರ ನಿವಾಸದಲ್ಲಿ ಬೆಳಿಗ್ಗೆಯಿಂದ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಜನರು ರಾವತ್ ಅವರಿಗೆ ಅಶ್ರುತರ್ಪಣ ಸಲ್ಲಿಸಿದರು. ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶದ ಹಿರಿಯ ಸೇನಾ ಕಮಾಂಡರ್‌ಗಳು ಕೂಡ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಈವರೆಗೂ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ, ಬ್ರಿಗೇಡಿಯರ್ ಎಲ್‌ ಎಸ್ ಲಿಡ್ಡೆರ್ ಮತ್ತು ಲ್ಯಾನ್ಸ್ ನಾಯ್ಕ್ ವಿವೇಕ್ ಕುಮಾರ್ ಅವರ ಮೃತದೇಹಗಳನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ. ಸುಟ್ಟುಹೋಗಿರುವ ಉಳಿದವರ ದೇಹಗಳನ್ನು ಗುರುತಿಸಲು ಕುಟುಂಬದವರ ಡಿಎನ್‌ಎ ಪರೀಕ್ಷೆಗಳನ್ನು ನಡೆಸಬೇಕಿರುವುದರಿಂದ ದಿಲ್ಲಿಯ ಸೇನಾ ನೆಲೆ ಆಸ್ಪತ್ರೆಯಲ್ಲಿ ಇರಿಸಲಾಗಿದೆ.