'ಆಗ ಕೋವಿಡ್‌ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದೆವು, ಈಗ ಉಕ್ರೇನ್': ಪ್ರಧಾನಿ ಮೋದಿ ಸಂತಸ

ಭಾರತವು ಯಶಸ್ವಿಯಾಗಿ ಕೋವಿಡ್ ಅನ್ನು ನಿಭಾಯಿಸಿತ್ತು. ಈಗ ಉಕ್ರೇನ್‌ ಪರಿಸ್ಥಿತಿಯನ್ನು ಕೂಡ ಸಮರ್ಥವಾಗಿ ನಿರ್ವಹಣೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ವರ್ಚಸ್ಸಿನ ಕಾರಣದಿಂದ ಇದು ಸಾಧ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.

'ಆಗ ಕೋವಿಡ್‌ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದೆವು, ಈಗ ಉಕ್ರೇನ್': ಪ್ರಧಾನಿ ಮೋದಿ ಸಂತಸ
Linkup
ಪುಣೆ: ಸಂಘರ್ಷಪೀಡಿತ ಉಕ್ರೇನ್‌ನಿಂದ ನಾಗರಿಕರನ್ನು ಸ್ಥಳಾಂತರ ಮಾಡಲು ಭಾರತಕ್ಕೆ ಸಾಧ್ಯವಾಗಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವದ ಸೂಚನೆಯಾಗಿದೆ ಎಂದಿರುವ ಪ್ರಧಾನಿ , ಕೊರೊನಾ ವೈರಸ್ ಸನ್ನಿವೇಶವನ್ನು ಸರ್ಕಾರ ನಿರ್ವಹಣೆ ಮಾಡಿದ ರೀತಿಗೆ ಆಪರೇಷನ್ ಗಂಗಾದ ಯಶಸ್ಸನ್ನು ಹೋಲಿಕೆ ಮಾಡಿದ್ದಾರೆ. "ನಾವು ಕೋವಿಡ್ ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಈಗ ಉಕ್ರೇನ್‌ನಲ್ಲಿನ ಪರಿಸ್ಥಿತಿ; ನಾವು ನಮ್ಮ ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದೇವೆ... ದೊಡ್ಡ ದೇಶಗಳು ಕೂಡ ಈ ಕೆಲಸ ಮಾಡುವುದರಲ್ಲಿ ಕಷ್ಟ ಎದುರಿಸುತ್ತಿವೆ. ಆದರೆ ಭಾರತದ ಹೆಚ್ಚುತ್ತಿರುವ ವರ್ಚಸ್ಸು ಸಾವಿರಾರು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲು ನೆರವಾಗಿದೆ" ಎಂದು ಮಹಾರಾಷ್ಟ್ರದ ಪುಣೆಯ ಸಿಂಬಿಯೋಸಿಸ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದರು. "ಭಾರತದ ಬೆಳೆಯುತ್ತಿರುವ ಪ್ರಭಾವಳಿಯು ಉಕ್ರೇನ್‌ನ ಯುದ್ಧ ವಲಯದಿಂದ ಸಾವಿರಾರು ವಿದ್ಯಾರ್ಥಿಗಳನ್ನು ಅವರ ತಾಯ್ನಾಡಿಗೆ ಕರೆತರಲು ಕಾರಣವಾಗಿದೆ" ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 11,400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 12 ಕಿಮೀ ಉದ್ದದ ಪುಣೆ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದರು. ಆದರೆ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗೈರಾಗಿದ್ದರು. ಅವರ ನಡೆಗೆ ಶಿವಸೇನಾ ಯಾವುದೇ ಕಾರಣ ನೀಡಿಲ್ಲ. ಆದರೆ, ಸ್ವತಃ ಪ್ರಧಾನಿ ಬಂದಿದ್ದರೂ, ಅವರ ಕಾರ್ಯಕ್ರಮಕ್ಕೆ ಹಾಜರಾಗದ ಮೂಲಕ ಮಹಾರಾಷ್ಟ್ರ ಸರ್ಕಾರ ಸಚಿವರ ವಿರುದ್ಧದ ಕೇಂದ್ರದ ನಡೆಯನ್ನು ಖಂಡಿಸಿ ತೀಕ್ಷ್ಣ ಸಂದೇಶ ರವಾನಿಸಲು ಈ ರೀತಿ ಮಾಡಿದ್ದಾರೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಉದ್ಘಾಟನೆ ಬಳಿಕ ಮೋದಿ ಅವರು ಮೆಟ್ರೋ ರೈಲು ಟಿಕೆಟ್ ಖರೀದಿಸಿ ಮಕ್ಕಳ ಜತೆ ಪ್ರಯಾಣಿಸಿದರು. ವಿಶೇಷಚೇತನ ಮಕ್ಕಳ ಜತೆ ತೆರಳಿದ ಮೋದಿ, ಅವರೊಂದಿಗೆ ಸಂವಾದ ನಡೆಸಿದರು. ಮೋದಿ ಎದುರೇ ರಾಜ್ಯಪಾಲರಿಗೆ ಟೀಕೆಉನ್ನತ ಹುದ್ದೆಯಲ್ಲಿ ಇರುವ ಕೆಲವು ವ್ಯಕ್ತಿಗಳು ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ರಾಜ್ಯದ ಜನತೆ ಒಪ್ಪಿಕೊಳ್ಳುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಉದ್ದೇಶಿಸಿ ನೀಡಿದ ಹೇಳಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲ ಕೋಶ್ಯಾರಿ ಅವರ ಎದುರೇ ಪವಾರ್ ವಾಗ್ದಾಳಿ ನಡೆಸಿದರು. "ನಾನು ಪ್ರಧಾನಿಯವರ ಗಮನಕ್ಕೆ ಒಂದು ಸಂಗತಿಯನ್ನು ತರಲು ಬಯಸುತ್ತೇನೆ. ಮಹತ್ವದ ಹುದ್ದೆಗಳಲ್ಲಿ ಇರುವ ಕೆಲವು ವ್ಯಕ್ತಿಗಳು ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ಮಹಾರಾಷ್ಟ್ರ ಮತ್ತು ಅದರ ಜನತೆ ಒಪ್ಪಿಕೊಳ್ಳುವುದಿಲ್ಲ" ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಮರ ನಿರಂತರವಾಗಿ ನಡೆಯುತ್ತಿದೆ.