ಅಮೆರಿಕ ಪುರುಷರ ಸಿಂಗಲ್ಸ್ ಓಪನ್: ಮೆಡ್ವೆಡೆವ್ ಮಣಿಸಿ 24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಚ್!

ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್ ಗೆಲುವು ಸಾಧಿಸಿದ್ದಾರೆ. ಭಾರೀ ಪೈಪೋಟಿಯಿಂದ ನಡೆದ ಪಂದ್ಯದಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು 6-3, 7-6 (5), 6- 3 ಸೆಟ್‌ಗಳಿಂದ ಮಣಿಸಿದ ಜೊಕೊವಿಚ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ನ್ಯೂಯಾರ್ಕ್: ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್ ಗೆಲುವು ಸಾಧಿಸಿದ್ದಾರೆ. ಭಾರೀ ಪೈಪೋಟಿಯಿಂದ ನಡೆದ ಪಂದ್ಯದಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು 6-3, 7-6 (5), 6- 3 ಸೆಟ್‌ಗಳಿಂದ ಮಣಿಸಿದ ಜೊಕೊವಿಚ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಈ ಮೂಲಕ 4ನೇ ಅಮೆರಿಕ ಓಪನ್ ಮತ್ತು 24ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದ್ದಾರೆ. ಸರ್ಬಿಯಾದ 36 ವರ್ಷದ ಜೊಕೊವಿಚ್ ಅವರು ಸೆರೆನಾ ವಿಲಿಯಮ್ಸ್ ಅವರ ಸಮ್ಮುಖದಲ್ಲಿ ಒಂದು ಪ್ರಮುಖ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ 1968ರಲ್ಲಿ ವೃತ್ತಿಪರ ಟೆನಿಸ್ ಆರಂಭವಾದ ಬಳಿಕ 24 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಮೊದಲ ಆಟಗಾರನೆನಿಸಿದರು. ಮಾರ್ಗರೇಟ್ ಕೋರ್ಟ್ ಸಹ 24 ಪ್ರಶಸ್ತಿಗಳನ್ನು ಗೆದ್ದಿದ್ದು, ವೃತ್ತಿ ಪರ ಟೆನಿಸ್ ಆರಂಭಕ್ಕೂ ಮುನ್ನವೇ ಅವರು 13 ಪ್ರಶಸ್ತಿ ಗೆದ್ದಿದ್ದರು.
ಇದು ಜೊಕೊವಿಚ್ ಅವರ ನಾಲ್ಕನೇ ಯುಎಸ್ ಓಪನ್ ಪ್ರಶಸ್ತಿಯಾಗಿದ್ದು, ಈ ಗೆಲುವಿನೊಂದಿಗೆ ಅವರು ಟೆನಿಸ್ ಇತಿಹಾಸದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ದಾಖಲೆಯನ್ನು ಸರಿಗಟ್ಟಿದರು.
ಇದನ್ನೂ ಓದಿ: ಇಂಡೋನೇಷ್ಯಾ ಮಾಸ್ಟರ್ಸ್ 2023: ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಭಾರತದ ಕಿರಣ್ ಜಾರ್ಜ್
ಈ ಹಿಂದೆ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ದಂತಕಥೆ ಮಾರ್ಗರೆಟ್ ಕೋರ್ಟ್ ಅವರು 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಬರೆದಿದ್ದರು.
2021ರ ಫೈನಲ್‌ನಲ್ಲಿ ಜೊಕೊವಿಚ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ್ದ ಮೆಡ್ವೆಡೆವ್, 1969ರಲ್ಲಿ ರಾಡ್ ಲೇವರ್ ನಂತರ ಒಂದೇ ವರ್ಷದಲ್ಲಿ ಎಲ್ಲಾ ನಾಲ್ಕು ಗ್ರ್ಯಾನ್ ಸ್ಲ್ಯಾಮ್‌ಗಳನ್ನು ಜಯಿಸಿದ ಸಾಧನೆ ಮಾಡುವ ಅವಕಾಶವನ್ನು ಕಸಿದಿದ್ದರು.