Ukraine: ಪ್ರತಿಪಕ್ಷಗಳಿಗೆ ಉಕ್ರೇನ್‌ ಪರಿಸ್ಥಿತಿ ಬಗ್ಗೆ ಜೈಶಂಕರ್‌ ಮಾಹಿತಿ! ಅತ್ಯುತ್ತಮ ಸಭೆ ಎಂದ ಶಶಿ ತರೂರ್‌

ಉಕ್ರೇನ್‌ನಲ್ಲಿನ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಗುರುವಾರ ಸಂಸದೀಯ ಸಮಿತಿಗೆ ವಿವರಿಸಿದೆ. ಕೇಂದ್ರದ ಮಾಹಿತಿ ಬಗ್ಗೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಮೆಚ್ಚುಗೆ ಸೂಚಿಸಿದ್ದು, ಅತ್ಯುತ್ಯಮ ಸಭೆ ಎಂದು ಟ್ವೀಟ್‌ ಮಾಡಿದ್ದಾರೆ. ಪ್ರತಿಪಕ್ಷಗಳ ಬೆಂಬಲಕ್ಕೆ ಜೈಶಂಕರ್‌ ಕೂಡ ಧನ್ಯವಾದ ತಿಳಿಸಿದ್ದಾರೆ.

Ukraine: ಪ್ರತಿಪಕ್ಷಗಳಿಗೆ ಉಕ್ರೇನ್‌ ಪರಿಸ್ಥಿತಿ ಬಗ್ಗೆ ಜೈಶಂಕರ್‌ ಮಾಹಿತಿ! ಅತ್ಯುತ್ತಮ ಸಭೆ ಎಂದ ಶಶಿ ತರೂರ್‌
Linkup
ಉಕ್ರೇನ್‌ನಲ್ಲಿನ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಗುರುವಾರ ಸಂಸದೀಯ ಸಮಿತಿಗೆ ವಿವರಿಸಿದೆ. ಉಕ್ರೇನ್‌ನ ಪರಿಸ್ಥಿತಿ ನಿರ್ವಹಣೆ, ವಿದ್ಯಾರ್ಥಿಗಳ ರಕ್ಷಣೆ ಹಾಗೂ ವಿಶ್ವಸಂಸ್ಥೆಯಲ್ಲಿ ಮತದಾನದ ವಿಚಾರವಾಗಿ ವಿದೇಶಾಂಗ ಇಲಾಖೆಯನ್ನು ಪ್ರತಿಪಕ್ಷಗಳು ಟೀಕಿಸುತ್ತಿರುವ ಸಮಯದಲ್ಲಿ ಸಂಸದೀಯ ಸಮಿತಿಗೆ ಉಕ್ರೇನ್‌ ಪರಿಸ್ಥಿತಿ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಮಾಹಿತಿ ನೀಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಲಹಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್‌ ನಾಯಕರಾದ ಶಶಿ ತರೂರ್‌, ಮತ್ತು ಆನಂದ್‌ ಶರ್ಮಾ ಉಪಸ್ಥಿತರಿದ್ದರು. ಸಭೆ ಬಳಿಕ ಟ್ವೀಟ್‌ ಮಾಡಿರುವ ಇದು ಉತ್ತಮ ಸಭೆಯಾಗಿದ್ದು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸಭೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇನ್ನು, ಸಭೆ ಬಳಿಕ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಟ್ವೀಟ್‌ ಮಾಡಿದ್ದು, ಸಮರ್ಥ ಬೆಂಬಲ ಮತ್ತು ಸರ್ವಾನುಮತದ ಸಂದೇಶ ಎಂದು ಪ್ರತಿಪಕ್ಷಗಳ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ನೇತೃತ್ವದ 21 ಸದಸ್ಯರ ಸಮಿತಿ ಉಕ್ರೇನ್‌ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದೆ. ಇದರಲ್ಲಿ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಧಿ ಹರ್ಷ ವರ್ಧನ ಶ್ರಿಂಗ್ಲಾ ಕೂಡ ಇದ್ದರು. ಇನ್ನು ಸಭೆಯಲ್ಲಿ 6 ಪಕ್ಷಗಳಿಂದ 9 ಸಂಸದರು ಉಪಸ್ಥಿತರಿದ್ದರು. ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರವನ್ನು ಪ್ರಶ್ನಿಸುತ್ತಿರುವ ಶಿವಸೇನೆಯ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಬಳಿಕ ಟ್ವೀಟ್‌ ಮಾಡಿರುವ ಶಶಿ ತರೂರ್‌, ಉಕ್ರೇನ್‌ ಪರಿಸ್ಥಿತಿ ಬಗ್ಗೆ ಗುರುವಾರ ವಿದೇಶಾಂಗ ವ್ಯವಹಾರಗಳ ಸಲಹಾ ಸಮಿತಿ ಸಭೆ ಅತ್ಯುತ್ತಮವಾಗಿತ್ತು. ನಮ್ಮ ಪ್ರಶ್ನೆಗಳಿಗೆ ಸಮಗ್ರ ಮಾಹಿತಿ ಹಾಗೂ ಪ್ರಾಮಾಣಿಕ ಪ್ರತಿಕ್ರಿಯೆ ನೀಡಿರುವ ಡಾ ಎಸ್ ಜೈಶಂಕರ್ ಮತ್ತು ಅವರ ಸಹೋದ್ಯೋಗಿಗಳಿಗೆ ನನ್ನ ಧನ್ಯವಾದಗಳು. ವಿದೇಶಾಂಗ ನೀತಿಯನ್ನು ನಡೆಸಲು ಇದು ಅತಿ ಅವಶ್ಯ ಎಂದು ಸಭೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಕೂಡ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಉಕ್ರೇನ್‌ನಲ್ಲಿನ ಬೆಳವಣಿಗೆಗಳ ಕುರಿತು ಎಂಇಎ ಸಲಹಾ ಸಮಿತಿಯ ಸಭೆ ಮುಕ್ತಾಯವಾಗಿದೆ. ಅಲ್ಲಿನ ಪರಿಸ್ಥಿತಿಯ ಬಗ್ಗೆ ಕಾರ್ಯತಂತ್ರ ಮತ್ತು ಮಾನವೀಯ ಅಂಶಗಳ ಬಗ್ಗೆ ಉತ್ತಮ ಚರ್ಚೆಯಾಗಿದ್ದು, ಉಕ್ರೇನ್‌ನಿಂದ ಎಲ್ಲಾ ಭಾರತೀಯರನ್ನು ಮರಳಿ ಕರೆತರುವ ಪ್ರಯತ್ನಗಳಿಗೆ ಬೆಂಬಲ ಇದೆ ಎಂಬ ಸರ್ವಾನುಮತದ ಸಂದೇಶ ಸಭೆ ನೀಡಿದೆ ಎಂದು ಹೇಳಿದ್ದಾರೆ. ಇನ್ನು, ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಟ್ವಿಟರ್‌ನಲ್ಲಿ ಕಿಡಿಕಾರಿದ್ದರು. ಮಂಗಳವಾರ ಉಕ್ರೇನ್‌ನ ಖಾರ್ಕಿವ್‌ನಲ್ಲಿ ಹಾವೇರಿ ವಿದ್ಯಾರ್ಥಿ ಶೆಲ್ ದಾಳಿಗೆ ಬಲಿಯಾದ ಬಳಿಕ ಟ್ವೀಟ್‌ ಮಾಡಿದ್ದ ರಾಹುಲ್‌ ಗಾಂಧಿ, ಮುಂದಿನ ದುರಂತ ತಪ್ಪಿಸಲು ಇದುವರೆಗೂ ಎಷು ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ. ಇನ್ನು ಎಷ್ಟು ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ. ಪ್ರದೇಶವಾರು ರಕ್ಷಣಾ ಕಾರ್ಯಾಚರಣೆಯ ವಿವರಣಾತ್ಮಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದರು. ಅದಲ್ಲದೇ ಶಶಿ ತರೂರ್‌ ವಿಶ್ವಸಂಸ್ಥೆಯಲ್ಲಿ ಭಾರತ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದನ್ನು ಟೀಕಿಸಿದ್ದರು. ಹಲವು ದೇಶಗಳು ಭಾರತ ಇತಿಹಾಸದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸುತ್ತಿವೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದರು.