National Games 2022: ಭವಾನಿ ದೇವಿಗೆ ಹ್ಯಾಟ್ರಿಕ್ ಚಿನ್ನ, ದಾಖಲೆ ಬರೆದ ದಿನಗೂಲಿ ಕಾರ್ಮಿಕನ ಮಗಳು

ಟೋಕಿಯೊ ಒಲಿಂಪಿಕ್ ಫೆನ್ಸರ್ ಭವಾನಿ ದೇವಿ ಅವರು ಶುಕ್ರವಾರ ಗುಜರಾತ್ ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆದ ನ್ಯಾಷನಲ್ ಗೇಮ್ಸ್ 2022 ರ ಕ್ರೀಡಾಕೂಟದಲ್ಲಿ ಮಹಿಳೆಯರ ಸೇಬರ್ ಸ್ಪರ್ಧೆಯಲ್ಲಿ ಗೆದ್ದು ದಾಖಲೆಯ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗಳಿಸಿದ್ದಾರೆ. ಗಾಂಧಿನಗರ: ಟೋಕಿಯೊ ಒಲಿಂಪಿಕ್ ಫೆನ್ಸರ್ ಭವಾನಿ ದೇವಿ ಅವರು ಶುಕ್ರವಾರ ಗುಜರಾತ್ ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆದ ನ್ಯಾಷನಲ್ ಗೇಮ್ಸ್ 2022 ರ ಕ್ರೀಡಾಕೂಟದಲ್ಲಿ ಮಹಿಳೆಯರ ಸೇಬರ್ ಸ್ಪರ್ಧೆಯಲ್ಲಿ ಗೆದ್ದು ದಾಖಲೆಯ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗಳಿಸಿದ್ದಾರೆ.
ತಮಿಳುನಾಡಿನ ಭವಾನಿ ದೇವಿ ಫೈನಲ್ನಲ್ಲಿ 15-3ರಲ್ಲಿ ಪಂಜಾಬ್ನ ಜಗ್ಮೀತ್ ಕೌರ್ ಅವರನ್ನು ಮಣಿಸಿದರು. ಅವರು 2011 ಮತ್ತು 2015 ರ ಆವೃತ್ತಿಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಉಳಿದಂತೆ ಕೇರಳದ ಕ್ರಿಸ್ಟಿ ಜೋಸ್ ಜೋಸ್ನಾ ಬೆಳ್ಳಿ ಮತ್ತು ಮಣಿಪುರದ ಲೈಶ್ರಾಮ್ ಅಬಿ ದೇವಿ ಕಂಚಿನ ಪದಕ ಗೆದ್ದರು.
ಇದನ್ನೂ ಓದಿ: 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ಚಾಲನೆ: ಸ್ವಜನಪಕ್ಷಪಾತ, ಭ್ರಷ್ಟಾಚಾರ ದೇಶದಲ್ಲಿ ಕ್ರೀಡೆಯನ್ನು ಕಾಡುತ್ತಿತ್ತು ಎಂದ ಮೋದಿ
ಮಹಿಳೆಯರ ರೈಫಲ್ ಶೂಟಿಂಗ್ನಲ್ಲಿ ಕರ್ನಾಟಕದ ತಿಲೋತಮಾ ಸೇನ್ ಅವರನ್ನು ಎಲವೆನಿಲ್ ವಲರಿವನ್ 16-10 ರಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಇದೇ ಪಂದ್ಯದಲ್ಲಿ ಪಶ್ಚಿಮ ಬಂಗಾಳದ ಮೆಹುಲಿ ಘೋಷ್ ಕಂಚು ಪಡೆದರು. ಗುಜರಾತ್ನ ಸ್ಟಾರ್ ಆಟಗಾರ ಎಲವನಿಲ್ ವಲರಿವನ್ ಫೈನಲ್ ಅನ್ನು ನಿಧಾನವಾಗಿ ಪ್ರಾರಂಭಿಸಿದರೂ ಎರಡನೇ ಹಂತದ ನಂತರ ಅಗ್ರ ಸ್ಥಾನ ಪಡೆದರು. ಐದನೇ ಹಂತದಲ್ಲಿ ಕೊನೆಯ ಹೊಡೆತದವರೆಗೂ ಲೀಡರ್ ಬೋರ್ಡ್ ಬದಲಾಗುತ್ತಲೇ ಇತ್ತು ಮತ್ತು ಎಲವೆನಿಲ್ ಮೆಹುಲಿ ಘೋಷ್ರನ್ನು 0.3 ಅಂಕಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು ಮತ್ತು ಅಗ್ರ ಶ್ರೇಯಾಂಕದ ತಿಲೋತ್ತಮ ಸೇನ್ ಅವರೊಂದಿಗೆ ಚಿನ್ನದ ಪದಕಕ್ಕಾಗಿ ಫೈನಲ್ ನಲ್ಲಿ ಸೆಣಸಲಿದ್ದಾರೆ.
Bhavani Devi wins gold in Fencing Sabre event #NationalGames2022 pic.twitter.com/s67hfWnV1s
— RVCJ Sports (@RVCJ_Sports) September 30, 2022
ದಾಖಲೆ ಬರೆದ ದಿನಗೂಲಿ ಕಾರ್ಮಿಕನ ಮಗಳು
ಕಟ್ಟಡ ನಿರ್ಮಾಣ ಕಾರ್ಮಿಕರ ಮಗಳು ಮುನಿತಾ ಪ್ರಜಾಪತಿ (ಉತ್ತರ ಪ್ರದೇಶ) ಮತ್ತು 17 ವರ್ಷದ ಪರ್ವೇಜ್ ಖಾನ್ ಪ್ರಮುಖ ಸ್ಥಾನವನ್ನು ಪಡೆದಿದ್ದು, ಮಹಿಳೆಯರ 20 ಕಿ.ಮೀ ನಡಿಗೆಯಲ್ಲಿ ಮುನಿತಾ ಅವರು ಈ ಆವೃತ್ತಿಯ ಮೊದಲ ದಾಖಲೆಯ 1:38.20 ಸೆಂ.ನಲ್ಲಿ ಗುರಿ ತಲುಪಿದರು. ಪುರುಷರ 1500 ಮೀಟರ್ ಓಟದಲ್ಲಿ ಪರ್ವೇಜ್ ಖಾನ್ ಅವರು 28 ವರ್ಷ ವಯಸ್ಸಿನ ಹೆಸರಾಂತ ಬಹದ್ದೂರ್ ಪ್ರಸಾದ್ ಅವರ ರಾಷ್ಟ್ರೀಯ ಕ್ರೀಡಾಕೂಟದ ದಾಖಲೆಯನ್ನು ಮುರಿದರು.
ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾಕೂಟ 2022: ಗಾಯದ ಹೊರತಾಗಿಯೂ ವೇಟ್ಲಿಫ್ಟಿಂಗ್ನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು!
ಏಷ್ಯನ್ ಗೇಮ್ಸ್ 2018 ರ ಡೆಕಾಥ್ಲಾನ್ ಚಾಂಪಿಯನ್ ಸ್ವಪ್ನಾ ಬರ್ಮನ್ 1.83 ಮೀಟರ್ ಕ್ಲಿಯರೆನ್ಸ್ನೊಂದಿಗೆ ಮಹಿಳೆಯರ ಹೈಜಂಪ್ ನಲ್ಲಿ ದಾಖಲೆ ನಿರ್ಮಿಸಿದರು ಮತ್ತು ಪ್ರವೀಣ್ ಚಿತ್ರವೆಲ್ (ತಮಿಳುನಾಡು) ಟ್ರಿಪಲ್ ಜಂಪ್ (16.68ಮೀ.) ವಿಭಾಗದಲ್ಲಿ ಚಿನ್ನ ಗೆದ್ದರು. ಇನ್ನು ಪುರುಷರ ಹ್ಯಾಮರ್ ಥ್ರೋನಲ್ಲಿ ದಮ್ನೀತ್ ಸಿಂಗ್ (ಪಂಜಾಬ್) ಮತ್ತು ಮಹಿಳೆಯರ ಶಾಟ್ಪುಟ್ನಲ್ಲಿ ಕಿರಣ್ ಬಲಿಯಾನ್ (ಉತ್ತರ ಪ್ರದೇಶ) ಕೂಡ ದಾಖಲೆ ಬರೆದರು.
10m, AIR Rifle Mixed Team
Gold Haryana- Ramita, Arshdeep Singh#NationalGames2022