Mutual Fund: YAAKE MATTHU ENU
ಪತ್ರಿಕೆಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಇಂಧನದ ಬೆಲೆಗಳ ಬಗ್ಗೆಯೇ ಸುದ್ಧಿ ಮತ್ತು ಚರ್ಚೆ. ಸದ್ಯಕ್ಕೆ ನಮ್ಮ ದೇಶದಲ್ಲಿ ಇಂಧನದ ಬೆಲೆಗಳು ಚಿನ್ನ-ಬೆಳ್ಳಿ ಬೆಲೆಗಳಷ್ಟೇ ಮಂಚೂಣಿಯಲ್ಲಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಒಂದು ಲೀಟರ್ ಪೆಟ್ರೋಲ್‌ನ ಬೆಲೆ ರೂ.೧೦೦/- ತಲುಪಿ ತನ್ನ ಹಣದುಬ್ಬರದ ಮೇಲಿನ ಹಿಡಿತವನ್ನು ಬಲಗೊಳಿಸಿದೆ. ಇಂಧನದ ಈ ತ್ವರಿತಗತಿಯ ವೇಗ ಹಣದುಬ್ಬರವನ್ನು ಗಗನಕ್ಕೇರಿಸುವಲ್ಲಿ ಯಾವುದೇ ಸಂಶಯವಿರುವುದಿಲ್ಲ. ಹಣದುಬ್ಬರವೆಂದರೆ ಸಾಮಾನ್ಯ ವಸ್ತುಗಳ ಬೆಲೆಗಳು ಮೇಲಕ್ಕೇರುವುದು ಮಾತ್ರವಲ್ಲ, ನಮ್ಮ ಖರೀದಿ ಶಕ್ತಿಯನ್ನೂ ಕೂಡ ಕುಂಠಿತಗೊಳಿಸುತ್ತದೆ. ಇದೇ ರೀತಿ ಹಣ ದುಬ್ಬರವೇರುತ್ತಿದ್ದರೆ ಸಾಮಾನ್ಯ ಜನರು ಹೇಗೆ ಜೀವನ ನಿಬಾಯಿಸುವರು? ಹಾಗೆಯೇ ಜನರಿಗೆ ಖರೀದಿಸುವ ಶಕ್ತಿಯನ್ನು ವೃದ್ಧಿಸುವ ಹೂಡಿಕೆ ಯೋಜನೆಗಳ ಬಗ್ಗೆ ಸರಿಯಾದ ತಿಳುವಳಿಕೆಯೂ ಇರುವುದಿಲ್ಲ. ನಮ್ಮ ಆದಾಯ, ನಮ್ಮ ಜೀವನದ ಮುಂದಿನ ಗುರಿಗಳು, ಬ್ಯಾಂಕಿನ ಠೇವಣಿ ದರಗಳು ಮತ್ತು ಹಣದುಬ್ಬರ ಈ ನಾಲ್ಕೂ ನಿಯಾಂತಕಗಳು ಹೊಂದಿಕೆಯಾಗುವುದುದೇ ಇಲ್ಲ. ಇಂದಿನ ದಿನಕ್ಕೆ ಬ್ಯಾಂಕಿನ ಬಡ್ಡಿ ದರಗಳು ಶೇಕಡ ೫%, ಹಣದುಬ್ಬರ ಕೂಡ ಶೇಕಡ ೫% ಹೀಗಿದ್ದರೆ, ನಿಜವಾದ ಹೂಡಿಕೆಯ ಮೇಲಿನ ಆದಾಯದ ದರವು ಶೂನ್ಯವಾಗುವುದಿಲ್ಲವೇ? ಇದರಿಂದ ಯಶಸ್ವಿಯಾಗಿ ಹೊರಬರುವುದು ಉಸುಕಿನಿಂದ ಕಾಲು ಬಿಡಿಸಿಕೊಂಡು ಬಂದಷ್ಟೇ ಕಷ್ಟ. ಈ ಕಡಿಮೆಯಾಗುತ್ತಿರುವ ಬಡ್ಡಿ ದರದಿಂದ ಸಾಮಾನ್ಯ ಜನರು ಎದುರಿಸುವ ಸಂಕಷ್ಠಗಳಿಗೆ ವರದಾನವಾಗಿ ಪರ್ಯಾಯ ಹೂಡಿಕೆಯ ವ್ಯವಸ್ಥೆಯ ಹೆಸರೇ "ಮ್ಯೂಚ್ಯುಯಲ್ ಫಂಡುಗಳು." ಶೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡದೇ, ಪರೋಕ್ಷವಾಗಿ ಹೂಡಿಕೆ ಮಾಡಲು ಅನುಕೂಲ ಮಾಡಿಕೊಟ್ಟಿರುವ ಒಂದು ಹೂಡಿಕೆಯ ಮಾಧ್ಯಮವೇ ಈ ಮ್ಯೂಚ್ಯುಯಲ್ ಫಂಡುಗಳು. ನಿಮಗೆ ತಿಳಿದಿದೆಯೇ? ಕಳೆದ ಹತ್ತು ವರ್ಷಗಳಲ್ಲಿ ಈ ಕೆಳಗೆ ನಮೂದಿಸಿರುವ ಯಾವುದೇ ಈಕ್ವಿಟಿ ಮ್ಯೂಚ್ಯುಯಲ್ ಫಂಡುಗಳ ವರ್ಗಗಳಲ್ಲಿ ಸಾಮಾನ್ಯ ಜನರು ಹೂಡಿಕೆ ಮಾಡಿದ್ದರೆ, ಅವರಿಗೆ ದೊರೆಯುತ್ತಿದ್ದ ಆದಾಯದ ದರವು ಬಹಳ ಆಸಕ್ತಿದಾಯಕವಾಗಿದೆ ಮತ್ತು ಹೂಡಿಕೆಗೆ ಪ್ರೇರಣೆಯನ್ನು ಸಹ ಕೊಡುತ್ತದೆ. ಸೂಚನೆ: ಮ್ಯೂಚ್ಯುಯಲ್ ಫಂಡುಗಳು ಮಾರುಕಟ್ಟೆಯ ಏರಿಳಿತಕ್ಕೆ ಒಳಪಟ್ಟಿರುತ್ತದೆ. ಹೂಡಿಕೆಗೆ ಮುನ್ನ ಆಫರ್ ಡಾಕ್ಯುಮೆಂಟನ್ನು ಓದಿರಿ ಅಥವ ಹೂಡಿಕೆ ಸಲಹೆಗಾರರನ್ನು ಭೇಟಿ ಮಾಡಿ; (CAGR returns as on 19-02-2021) ಈ ಮೇಲ್ಕಂಡ ಫಂಡುಗಳ ವರ್ಗಗಳ ಕಾರ್ಯಕ್ಷಮತೆಯನ್ನು ಗಮನಿಸಿ, ಈ ರೀತಿಯ ಹೂಡಿಕೆಯ ಮೇಲಿನ ಪ್ರತಿಫಲ ಬರಲು ಕಾರಣವೇನೆಂದರೆ ಇದರ ಹಿನ್ನೆಲೆಯಲ್ಲಿ ಕೆಲವು ದಕ್ಷ ಹೂಡಿಕೆ ತಜ್ಞರ ಕೈಚಳಕವಿದೆ. ಇವರ ಮುಖ್ಯ ಕಾರ್ಯವೇ ದಕ್ಷತೆಯಿಂದ ಹೂಡಿಕೆಯ ಆಯ್ಕೆ ಮತ್ತು ನಿರಂತರ ನಿರ್ವಹಣೆ. ಒಂದೊAದು ವರ್ಗಗಳೂ ಒಂದೊAದು ಪೋರ್ಟ್ಫೋಲಿಯೋಗಳು ಹಾಗೂ ಇದನ್ನು ವಿಭಿನ್ನವಾದ ರೀತಿಯಲ್ಲಿ ನಿರ್ವಹಣೆ ಮಾಡುವ ನಿರ್ಧಾರ ಈ ತಜ್ಞರದ್ದಾಗಿರುತ್ತದೆ. ಶೇರು ಮಾರುಕಟ್ಟೆಯಲ್ಲಿ ದೊರೆಯುವ ತೀವ್ರ ಸಂಶೋಧನೆಗೆ ಒಳಪಟ್ಟ ಶೇರುಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡಲಾಗುತ್ತದೆ. ಸಾಮಾನ್ಯ ಹೂಡಿಕೆದಾರರು ಮಾಡಲಾಗದ ಕೆಲಸವನ್ನು ಈ ತಜ್ಞರ ತಂಡವು ದಕ್ಷತೆಯಿಂದ ಮಾಡುತ್ತಾರೆ. ಒಂದೊAದು ಪೋರ್ಟ್ಫೋಲಿಯೋಗಳು ಒಂದೊAದು ನಿರ್ಧಿಷ್ಠ ವ್ಯಕ್ತಿತ್ವವನ್ನು ಹೊಂದಿರುತ್ತದೆ ಹಾಗೂ ವಿಭಿನ್ನ ಗುಣ ಲಕ್ಷಣಗಳನ್ನು ಹೊಂದಿರುತ್ತದೆ. ಈಕ್ವಿಟಿ ಮ್ಯೂಚ್ಯುಯಲ್ ಫಂಡುಗಳನ್ನು ಹಲವು ವರ್ಗಗಳನ್ನಾಗಿ ವಿಂಗಡಿಸಿರುತ್ತಾರೆ. ಇದಕ್ಕೆ ಉದಾಹರಣೆಗಳನ್ನು ಈ ಕೆಳಗೆ ವಿವರಿಸಲಾಗಿದೆ: ವರ್ಗಗಳು ಇಂಡೆಕ್ಸ್ ಫಂಡು ಲಾರ್ಜ್ ಕ್ಯಾಪು ಫಂಡು ಈಕ್ವಿಟಿ ಹೈಬ್ರಿಡ್ ಫಂಡು ಮಲ್ಟಿ ಕ್ಯಾಪು ಫಂಡು ಮಿಡ್ ಕ್ಯಾಪು ಫಂಡು ಫೋಕಸ್ ಫಂಡು ವ್ಯಾಲ್ಯೂ ಫಂಡು ಸ್ಮಾಲ್ ಕ್ಯಾಪು ಫಂಡು ಥೀಮ್ಯಾಟಿಕ್/ಸೆಕ್ಟರ್ ಫಂಡು ಈ ಮೇಲ್ಕಂಡ ವಿಂಗಡನೆಯಿAದ ಹೂಡಿಕೆದಾರರು ತಮಗೆ ಅನುಗುಣವಾದ ವರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ. ಕಡಿಮೆ ರಿಸ್ಕ್, ಮಾಧ್ಯಮ ರಿಸ್ಕ್, ಹೆಚ್ಚು ರಿಸ್ಕ್ ಮತ್ತು ಅತಿ ಹೆಚ್ಚು ರಿಸ್ಕ್ ತೆಗೆದುಕೊಳ್ಳುವವರು ತಮಗೆ ಹೊಂದುವ ವರ್ಗಗಳ ಸಂಯೋಜನೆ (combination of categories) ಮಾಡಿಕೊಂಡು ಹೂಡಿಕೆ ಮಾಡಬಹುದು. ಹೂಡಿಕೆ ಮಾಡುವ ವಿಧಾನಗಳು ೧. ಒಂದೇ ಹಂತದ ಹೂಡಿಕೆ - ಕನಿಷ್ಠ ರೂ.೫,೦೦೦/- ೨. ಮಾಸಿಕ ಹೂಡಿಕೆ - ಕನಿಷ್ಠ ರೂ.೫೦೦/- ಯಾವುದೇ ಹೂಡಿಕೆಯ ಅವಧಿಯನ್ನು ಆಯ್ದುಕೊಂಡು ಹೂಡಿಕೆ ಮಾಡಬಹುದು; ಅಂದರೆ, ಎಷ್ಟು ವರ್ಷಗಳಿಗೆ ಬೇಕಾದರೂ ಹೂಡಿಕೆ ಮಾಡಬಹುದು; ಮ್ಯೂಚ್ಯುಯಲ್ ಫಂಡುಗಳಲ್ಲಿ ಹೂಡಿಕೆ ಮಾಡಲು ಮತ್ತು ಹೂಡಿಕೆಯನ್ನು ಹಿಂದೆ ಪಡೆಯಲು ಯಾವುದೇ ನಿರ್ಬಂಧವಿರುವುದಿಲ್ಲ. ಹೂಡಿಕೆ ಮಾಡುವ ಮುನ್ನ ಹಣದುಬ್ಬರದ ಬಗ್ಗೆ ಮತ್ತು ಇಳಿಕೆಯಾಗುತ್ತಿರುವ ಠೇವಣಿ ದರಗಳ ಬಗ್ಗೆ ಒಂದು ನಿಗ ಇರಲಿ, ಏಕೆಂದರೆ, ಈಕ್ವಿಟಿ ಮ್ಯೂಚ್ಯುಯಲ್ ಫಂಡುಗಳಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಪ್ರೇರಣೆ ಸಿಗುವುದೇ ಈ ಕಾರಣಗಳಿಂದಾಗಿ. ಮ್ಯೂಚ್ಯುಯಲ್ ಫಂಡುಗಳಲ್ಲಿ ಹೂಡಿಕೆಯನ್ನು ದೀರ್ಘಾವಧಿಗಾಗಿ ಮಾಡಿದರೆ ಅದರಿಂದಾಗುವ ಲಾಭಗಳು ಮತ್ತು ಉಪಯೋಗಗಳು ಅಪಾರವಾಗಿರುತ್ತದೆ ಎಂದು ಸಂಶೋಧನೆಗಳಿAದ ದೃಢಪಟ್ಟಿರುತ್ತದೆ. ನಿಮ್ಮ ಹೂಡಿಕೆ ಸಲಹೆಗಾರರನ್ನು ಭೇಟಿ ಮಾಡಿ; ಅವರು ನಿಮಗೆ ನಿಮ್ಮ ಹೂಡಿಕೆಯ ಗುರಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಶಕ್ತಿ ಈ ಎರಡನ್ನು ಅವಲೋಕಿಸಿ ನಿಮಗೆ ಸರಿಯಾಗಿ ಹೂಡಿಕೆಯ ಸಲಹೆಯನ್ನು ನೀಡುತ್ತಾರೆ. Contributed by Mr. Shreedhara Bhat, Managing Director - Ara Management Solutions Pvt Ltd and an empaneled distribution partner of SBI Mutual Fund. ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ
ಪತ್ರಿಕೆಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಇಂಧನದ ಬೆಲೆಗಳ ಬಗ್ಗೆಯೇ ಸುದ್ಧಿ ಮತ್ತು ಚರ್ಚೆ. ಸದ್ಯಕ್ಕೆ ನಮ್ಮ ದೇಶದಲ್ಲಿ ಇಂಧನದ ಬೆಲೆಗಳು ಚಿನ್ನ-ಬೆಳ್ಳಿ ಬೆಲೆಗಳಷ್ಟೇ ಮಂಚೂಣಿಯಲ್ಲಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಒಂದು ಲೀಟರ್ ಪೆಟ್ರೋಲ್‌ನ ಬೆಲೆ ರೂ.೧೦೦/- ತಲುಪಿ ತನ್ನ ಹಣದುಬ್ಬರದ ಮೇಲಿನ ಹಿಡಿತವನ್ನು ಬಲಗೊಳಿಸಿದೆ. ಇಂಧನದ ಈ ತ್ವರಿತಗತಿಯ ವೇಗ ಹಣದುಬ್ಬರವನ್ನು ಗಗನಕ್ಕೇರಿಸುವಲ್ಲಿ ಯಾವುದೇ ಸಂಶಯವಿರುವುದಿಲ್ಲ.
ಹಣದುಬ್ಬರವೆಂದರೆ ಸಾಮಾನ್ಯ ವಸ್ತುಗಳ ಬೆಲೆಗಳು ಮೇಲಕ್ಕೇರುವುದು ಮಾತ್ರವಲ್ಲ, ನಮ್ಮ ಖರೀದಿ ಶಕ್ತಿಯನ್ನೂ ಕೂಡ ಕುಂಠಿತಗೊಳಿಸುತ್ತದೆ. ಇದೇ ರೀತಿ ಹಣ ದುಬ್ಬರವೇರುತ್ತಿದ್ದರೆ ಸಾಮಾನ್ಯ ಜನರು ಹೇಗೆ ಜೀವನ ನಿಬಾಯಿಸುವರು? ಹಾಗೆಯೇ ಜನರಿಗೆ ಖರೀದಿಸುವ ಶಕ್ತಿಯನ್ನು ವೃದ್ಧಿಸುವ ಹೂಡಿಕೆ ಯೋಜನೆಗಳ ಬಗ್ಗೆ ಸರಿಯಾದ ತಿಳುವಳಿಕೆಯೂ ಇರುವುದಿಲ್ಲ.
ನಮ್ಮ ಆದಾಯ, ನಮ್ಮ ಜೀವನದ ಮುಂದಿನ ಗುರಿಗಳು, ಬ್ಯಾಂಕಿನ ಠೇವಣಿ ದರಗಳು ಮತ್ತು ಹಣದುಬ್ಬರ ಈ ನಾಲ್ಕೂ ನಿಯಾಂತಕಗಳು ಹೊಂದಿಕೆಯಾಗುವುದುದೇ ಇಲ್ಲ. ಇಂದಿನ ದಿನಕ್ಕೆ ಬ್ಯಾಂಕಿನ ಬಡ್ಡಿ ದರಗಳು ಶೇಕಡ ೫%, ಹಣದುಬ್ಬರ ಕೂಡ ಶೇಕಡ ೫% ಹೀಗಿದ್ದರೆ, ನಿಜವಾದ ಹೂಡಿಕೆಯ ಮೇಲಿನ ಆದಾಯದ ದರವು ಶೂನ್ಯವಾಗುವುದಿಲ್ಲವೇ? ಇದರಿಂದ ಯಶಸ್ವಿಯಾಗಿ ಹೊರಬರುವುದು ಉಸುಕಿನಿಂದ ಕಾಲು ಬಿಡಿಸಿಕೊಂಡು ಬಂದಷ್ಟೇ ಕಷ್ಟ.
ಈ ಕಡಿಮೆಯಾಗುತ್ತಿರುವ ಬಡ್ಡಿ ದರದಿಂದ ಸಾಮಾನ್ಯ ಜನರು ಎದುರಿಸುವ ಸಂಕಷ್ಠಗಳಿಗೆ ವರದಾನವಾಗಿ ಪರ್ಯಾಯ ಹೂಡಿಕೆಯ ವ್ಯವಸ್ಥೆಯ ಹೆಸರೇ "ಮ್ಯೂಚ್ಯುಯಲ್ ಫಂಡುಗಳು." ಶೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡದೇ, ಪರೋಕ್ಷವಾಗಿ ಹೂಡಿಕೆ ಮಾಡಲು ಅನುಕೂಲ ಮಾಡಿಕೊಟ್ಟಿರುವ ಒಂದು ಹೂಡಿಕೆಯ ಮಾಧ್ಯಮವೇ ಈ ಮ್ಯೂಚ್ಯುಯಲ್ ಫಂಡುಗಳು.
ನಿಮಗೆ ತಿಳಿದಿದೆಯೇ? ಕಳೆದ ಹತ್ತು ವರ್ಷಗಳಲ್ಲಿ ಈ ಕೆಳಗೆ ನಮೂದಿಸಿರುವ ಯಾವುದೇ ಈಕ್ವಿಟಿ ಮ್ಯೂಚ್ಯುಯಲ್ ಫಂಡುಗಳ ವರ್ಗಗಳಲ್ಲಿ ಸಾಮಾನ್ಯ ಜನರು ಹೂಡಿಕೆ ಮಾಡಿದ್ದರೆ, ಅವರಿಗೆ ದೊರೆಯುತ್ತಿದ್ದ ಆದಾಯದ ದರವು ಬಹಳ ಆಸಕ್ತಿದಾಯಕವಾಗಿದೆ ಮತ್ತು ಹೂಡಿಕೆಗೆ ಪ್ರೇರಣೆಯನ್ನು ಸಹ ಕೊಡುತ್ತದೆ.
ಸೂಚನೆ: ಮ್ಯೂಚ್ಯುಯಲ್ ಫಂಡುಗಳು ಮಾರುಕಟ್ಟೆಯ ಏರಿಳಿತಕ್ಕೆ ಒಳಪಟ್ಟಿರುತ್ತದೆ. ಹೂಡಿಕೆಗೆ ಮುನ್ನ ಆಫರ್ ಡಾಕ್ಯುಮೆಂಟನ್ನು ಓದಿರಿ ಅಥವ ಹೂಡಿಕೆ ಸಲಹೆಗಾರರನ್ನು ಭೇಟಿ ಮಾಡಿ; (CAGR returns as on 19-02-2021)
ಈ ಮೇಲ್ಕಂಡ ಫಂಡುಗಳ ವರ್ಗಗಳ ಕಾರ್ಯಕ್ಷಮತೆಯನ್ನು ಗಮನಿಸಿ, ಈ ರೀತಿಯ ಹೂಡಿಕೆಯ ಮೇಲಿನ ಪ್ರತಿಫಲ ಬರಲು ಕಾರಣವೇನೆಂದರೆ ಇದರ ಹಿನ್ನೆಲೆಯಲ್ಲಿ ಕೆಲವು ದಕ್ಷ ಹೂಡಿಕೆ ತಜ್ಞರ ಕೈಚಳಕವಿದೆ. ಇವರ ಮುಖ್ಯ ಕಾರ್ಯವೇ ದಕ್ಷತೆಯಿಂದ ಹೂಡಿಕೆಯ ಆಯ್ಕೆ ಮತ್ತು ನಿರಂತರ ನಿರ್ವಹಣೆ. ಒಂದೊAದು ವರ್ಗಗಳೂ ಒಂದೊAದು ಪೋರ್ಟ್ಫೋಲಿಯೋಗಳು ಹಾಗೂ ಇದನ್ನು ವಿಭಿನ್ನವಾದ ರೀತಿಯಲ್ಲಿ ನಿರ್ವಹಣೆ ಮಾಡುವ ನಿರ್ಧಾರ ಈ ತಜ್ಞರದ್ದಾಗಿರುತ್ತದೆ. ಶೇರು ಮಾರುಕಟ್ಟೆಯಲ್ಲಿ ದೊರೆಯುವ ತೀವ್ರ ಸಂಶೋಧನೆಗೆ ಒಳಪಟ್ಟ ಶೇರುಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡಲಾಗುತ್ತದೆ. ಸಾಮಾನ್ಯ ಹೂಡಿಕೆದಾರರು ಮಾಡಲಾಗದ ಕೆಲಸವನ್ನು ಈ ತಜ್ಞರ ತಂಡವು ದಕ್ಷತೆಯಿಂದ ಮಾಡುತ್ತಾರೆ.
ಒಂದೊAದು ಪೋರ್ಟ್ಫೋಲಿಯೋಗಳು ಒಂದೊAದು ನಿರ್ಧಿಷ್ಠ ವ್ಯಕ್ತಿತ್ವವನ್ನು ಹೊಂದಿರುತ್ತದೆ ಹಾಗೂ ವಿಭಿನ್ನ ಗುಣ ಲಕ್ಷಣಗಳನ್ನು ಹೊಂದಿರುತ್ತದೆ. ಈಕ್ವಿಟಿ ಮ್ಯೂಚ್ಯುಯಲ್ ಫಂಡುಗಳನ್ನು ಹಲವು ವರ್ಗಗಳನ್ನಾಗಿ ವಿಂಗಡಿಸಿರುತ್ತಾರೆ. ಇದಕ್ಕೆ ಉದಾಹರಣೆಗಳನ್ನು ಈ ಕೆಳಗೆ ವಿವರಿಸಲಾಗಿದೆ:
ವರ್ಗಗಳು
ಇಂಡೆಕ್ಸ್ ಫಂಡು
ಲಾರ್ಜ್ ಕ್ಯಾಪು ಫಂಡು
ಈಕ್ವಿಟಿ ಹೈಬ್ರಿಡ್ ಫಂಡು
ಮಲ್ಟಿ ಕ್ಯಾಪು ಫಂಡು
ಮಿಡ್ ಕ್ಯಾಪು ಫಂಡು
ಫೋಕಸ್ ಫಂಡು
ವ್ಯಾಲ್ಯೂ ಫಂಡು
ಸ್ಮಾಲ್ ಕ್ಯಾಪು ಫಂಡು
ಥೀಮ್ಯಾಟಿಕ್/ಸೆಕ್ಟರ್ ಫಂಡು
ಈ ಮೇಲ್ಕಂಡ ವಿಂಗಡನೆಯಿAದ ಹೂಡಿಕೆದಾರರು ತಮಗೆ ಅನುಗುಣವಾದ ವರ್ಗಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ. ಕಡಿಮೆ ರಿಸ್ಕ್, ಮಾಧ್ಯಮ ರಿಸ್ಕ್, ಹೆಚ್ಚು ರಿಸ್ಕ್ ಮತ್ತು ಅತಿ ಹೆಚ್ಚು ರಿಸ್ಕ್ ತೆಗೆದುಕೊಳ್ಳುವವರು ತಮಗೆ ಹೊಂದುವ ವರ್ಗಗಳ ಸಂಯೋಜನೆ (combination of categories) ಮಾಡಿಕೊಂಡು ಹೂಡಿಕೆ ಮಾಡಬಹುದು.
ಹೂಡಿಕೆ ಮಾಡುವ ವಿಧಾನಗಳು
೧. ಒಂದೇ ಹಂತದ ಹೂಡಿಕೆ - ಕನಿಷ್ಠ ರೂ.೫,೦೦೦/-
೨. ಮಾಸಿಕ ಹೂಡಿಕೆ - ಕನಿಷ್ಠ ರೂ.೫೦೦/-
ಯಾವುದೇ ಹೂಡಿಕೆಯ ಅವಧಿಯನ್ನು ಆಯ್ದುಕೊಂಡು ಹೂಡಿಕೆ ಮಾಡಬಹುದು; ಅಂದರೆ, ಎಷ್ಟು ವರ್ಷಗಳಿಗೆ ಬೇಕಾದರೂ ಹೂಡಿಕೆ ಮಾಡಬಹುದು; ಮ್ಯೂಚ್ಯುಯಲ್ ಫಂಡುಗಳಲ್ಲಿ ಹೂಡಿಕೆ ಮಾಡಲು ಮತ್ತು ಹೂಡಿಕೆಯನ್ನು ಹಿಂದೆ ಪಡೆಯಲು ಯಾವುದೇ ನಿರ್ಬಂಧವಿರುವುದಿಲ್ಲ.
ಹೂಡಿಕೆ ಮಾಡುವ ಮುನ್ನ ಹಣದುಬ್ಬರದ ಬಗ್ಗೆ ಮತ್ತು ಇಳಿಕೆಯಾಗುತ್ತಿರುವ ಠೇವಣಿ ದರಗಳ ಬಗ್ಗೆ ಒಂದು ನಿಗ ಇರಲಿ, ಏಕೆಂದರೆ, ಈಕ್ವಿಟಿ ಮ್ಯೂಚ್ಯುಯಲ್ ಫಂಡುಗಳಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಪ್ರೇರಣೆ ಸಿಗುವುದೇ ಈ ಕಾರಣಗಳಿಂದಾಗಿ.
ಮ್ಯೂಚ್ಯುಯಲ್ ಫಂಡುಗಳಲ್ಲಿ ಹೂಡಿಕೆಯನ್ನು ದೀರ್ಘಾವಧಿಗಾಗಿ ಮಾಡಿದರೆ ಅದರಿಂದಾಗುವ ಲಾಭಗಳು ಮತ್ತು ಉಪಯೋಗಗಳು ಅಪಾರವಾಗಿರುತ್ತದೆ ಎಂದು ಸಂಶೋಧನೆಗಳಿAದ ದೃಢಪಟ್ಟಿರುತ್ತದೆ.
ನಿಮ್ಮ ಹೂಡಿಕೆ ಸಲಹೆಗಾರರನ್ನು ಭೇಟಿ ಮಾಡಿ; ಅವರು ನಿಮಗೆ ನಿಮ್ಮ ಹೂಡಿಕೆಯ ಗುರಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಶಕ್ತಿ ಈ ಎರಡನ್ನು ಅವಲೋಕಿಸಿ ನಿಮಗೆ ಸರಿಯಾಗಿ ಹೂಡಿಕೆಯ ಸಲಹೆಯನ್ನು ನೀಡುತ್ತಾರೆ.
Contributed by Mr. Shreedhara Bhat, Managing Director - Ara Management Solutions Pvt Ltd and an empaneled distribution partner of SBI Mutual Fund.
ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ