Kiccha Sudeep v/s Kumar: ಕಿಚ್ಚ ಸುದೀಪ್‌ ದುಡ್ಡು ತಗೊಂಡು ಸಿನಿಮಾ ಮಾಡಿಕೊಡ್ತಿಲ್ಲ: ನಿರ್ಮಾಪಕ ಕುಮಾರ್

"ನಟ ಸುದೀಪ್ ಅವರು ನನಗೆ ಸಿನಿಮಾ ಮಾಡಿಕೊಡ್ತೀನಿ ಅಂತ 8 ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ. ನಾನು ಅವರಿಗೆ ಅಡ್ವಾನ್ಸ್ ಹಣ ನೀಡಿದ್ದೇನೆ, ಯಾವಾಗ ಕೇಳಿದ್ರೂ ನಾಳೆ ಅಂತಾರೆ, ಏನು ಮಾಡಬೇಕು" ಎಂದು ನಿರ್ಮಾಪಕ ಕುಮಾರ್ ಎನ್ನುವವರು ಗಂಭೀರ ಆರೋಪ ಮಾಡಿದ್ದಾರೆ. "ನಾನು ಕೆಸಿಎನ್ ಮೂವೀಸ್‌ನಿಂದ ಬಂದವನು. ನಾನು ಸುದೀಪ್ ಅವರ ಜೊತೆ ರಂಗ ಎಸ್‌ಎಸ್‌ಎಲ್‌ಸಿ, ಮಾಣಿಕ್ಯ, ಮುಕುಂದ ಮುರಾರಿ, ಕಾಶಿ ಫ್ರಂ ವಿಲೇಜ್ ಮುಂತಾದ ಸಿನಿಮಾ ಮಾಡಿದ್ದೇನೆ. ಸ್ವಾತಿ ಮುತ್ತು, ವಿಷ್ಣುವರ್ಧನ ಸೇರಿ ಕೆಲ ಸಿನಿಮಾಗಳ ವಿತರಣೆ ಕೂಡ ಮಾಡಿದ್ದೇನೆ. ಕಳೆದ 8 ವರ್ಷಗಳಿಂದ ನಾನು ನಿಮ್ಮ ಸಿನಿಮಾ ಮಾಡುತ್ತೇನೆ ಅಂತ ಹೇಳಿಕೊಂಡು ಬರುತ್ತಲೇ ಇದ್ದಾರೆ. ನಾವು ಸುದೀಪ್ ಅವರ ಮ್ಯಾನೇಜರ್ ಬಳಿ ಕಾಂಟ್ಯಾಕ್ಟ್ ಮಾಡಿದಾಗಲೂ ಸಿನಿಮಾ ಮಾಡ್ತೀವಿ ಅಂತಲೇ ಹೇಳುತ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಆದಮೇಲೆ ನಮ್ಮ ಸಿನಿಮಾ ಮಾಡಿಕೊಡ್ತೀನಿ ಅಂತ ಹೇಳಿದ್ದರು. ನಂದಕಿಶೋರ್ ಅವರಿಗೆ ಹಣ ಕೊಡಿ, ಅವರು ಕಥೆ ಮಾಡಲಿ ಎಂದು ಸುದೀಪ್ ಹೇಳಿದಂತೆ ನಾವು ಮಾಡಿದ್ದೇವೆ. ಈಗ ಸುದೀಪ್ ಅವರು ಬೇರೆ ಸಿನಿಮಾ ಮಾಡಲು ಹೊರಟಿದ್ದಾರೆ" ಎಂದು ಕುಮಾರ್ ಅವರು ಆರೋಪ ಮಾಡಿದ್ದಾರೆ.

Linkup