BBMP: ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಗಾಂಧಿನಗರದ ಬಹುಮಹಡಿ ವಾಹನ ನಿಲುಗಡೆ ತಾಣ!

ಬೆಂಗಳೂರಿನ ಗಾಂಧಿನಗರದ ಜನತೆಗೆ ಗುಡ್‌ನ್ಯೂಸ್‌ವೊಂದನ್ನು ಬಿಬಿಎಂಪಿ ನೀಡಿದೆ. ಸ್ವಾತಂತ್ರ್ಯ ಉದ್ಯಾನವನದ ಬಳಿ ನಿರ್ಮಿಸುತ್ತಿರುವ ಬಹುಮಹಡಿ ವಾಹನ ನಿಲುಗಡೆ ಸೆಪ್ಟೆಂಬರ್‌ ಕೊನೆಗೆ ಲೋಕಾರ್ಪಣೆಗೊಳ್ಳಲಿದೆ. ಇಲ್ಲಿ ಎಷ್ಟು ವಾಹನಗಳು ಪಾರ್ಕ್‌ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿಯ ವರದಿ.

BBMP: ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಗಾಂಧಿನಗರದ ಬಹುಮಹಡಿ ವಾಹನ ನಿಲುಗಡೆ ತಾಣ!
Linkup
ಬೆಂಗಳೂರು: ಭಾರೀ ಜನಸಂದಣಿ ಇರುವ ಬೆಂಗಳೂರಿನ ಗಾಂಧಿನಗರದ ಜನತೆಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ವಾರ್ಡ್ ವ್ಯಾಪ್ತಿಯ ಸ್ವಾತಂತ್ರ್ಯ ಉದ್ಯಾನವನದ ಬಳಿ ನಿರ್ಮಿಸುತ್ತಿರುವ ಬಹುಮಹಡಿ ವಾಹನ ನಿಲುಗಡೆ (Multi level car parking-MLCP) ಕಾಮಗಾರಿ ಸೆಪ್ಟೆಂಬರ್‌ ಅಂತ್ಯಕ್ಕೆ ಜನರ ಬಳಕಗೆ ಸಿಗಲಿದೆ ಎಂದು ಬಿಬಿಎಂಪಿ ತಿಳಿಸಿದೆ. ಸದ್ಯ ನಡೆಯುತ್ತಿರುವ ಕಾಮಗಾರಿಯನ್ನು ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಹಾಗೂ ಸ್ಥಳೀಯ ಶಾಸಕರಾದ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಹುಮಹಡಿ ವಾಹನ ನಿಲುಗಡೆ ತಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪಾರ್ಕಿಂಗ್ ವ್ಯವಸ್ಥೆಯ ಕಾಮಗಾರಿ ಈಗಾಗಲೇ ಮುಕ್ತಾಯವಾಗಿರುತ್ತದೆ. ಸೆಪ್ಟೆಂಬರ್ ತಿಂಗಳಾಂತ್ಯದ ವೇಳೆಗೆ ಪಾರ್ಕಿಂಗ್ ವ್ಯವಸ್ಥೆಯು ಸಾರ್ವಜನಿಕರಿಗೆ ದೊರಕುವಂತೆ ಎಲ್ಲಾ ವ್ಯವಸ್ಥೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಗೌರವ್ ಗುಪ್ತ ತಿಳಿಸಿದರು. ಇನ್ನು ಕಟ್ಟಡದ ಮೇಲ್ಬಾಗದಲ್ಲಿ ಪ್ರತಿಭಟನೆ ನಡೆಸಲು ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೇ ಮೇಲ್ಭಾಗದಲ್ಲಿ ರೂಫ್ ಪ್ರಸ್ ಹಾಗೂ ಸೌರ ವಿದ್ಯುತ್ ಅಳವಡಿಕೆ ಕೆಲಸ ನಡೆಯುತ್ತಿದ್ದು, ಸಂಪೂರ್ಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಇದೆ ವೇಳೆ ಮುಖ್ಯ ಇಂಜಿನಿಯರ್ ಲೋಕೇಶ್ ಮಾಹಿತಿ ನೀಡಿದರು. ಬಹುಮಹಡಿ ವಾಹನ ನಿಲುಗಡೆ ತಾಣವನ್ನು ನಗರೋತ್ಥಾನ ಗ್ರಾಂಟ್ಸ್ ಅಡಿ 79.81 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ತಳಭಾಗದಲ್ಲಿ ಮೂರು ಮಹಡಿಗಳನ್ನು ನಿರ್ಮಿಸಲಾಗಿದ್ದು(-1, -2, -3), 556 ಕಾರು, 445 ದಿಚಕ್ರ ಚಾಹನ ನಿಲುಗಡೆ ಮಾಡಬಹುದಾಗಿದೆ. ಆದರೆ, ಕಾಮಗಾರಿ ವೇಳೆ ಸ್ಥಳದಲ್ಲಿ ಬೃಹತ್ ಬಂಡೆ ಸಿಕ್ಕಿದ ಪರಿಣಾಮ ಕಾಮಗಾರಿ ವಿಳಂಬವಾಗಿದೆ ಎಂದರು. ಕಟ್ಟಡದಲ್ಲಿ 4 ಲಿಫ್ಟ್ ಗಳು ಹಾಗೂ 40 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕಟ್ಟಡ ಮೇಲ್ಬಾಗದಲ್ಲಿ ಪ್ರತಿಭಟನೆ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಪ್ರತಿಭಟನೆ ಸ್ಥಳದ ಮೇಲ್ಬಾಗದಲ್ಲಿ ರೂಫ್ ಹಾಗೂ ಸೌರ ವಿದ್ಯುತ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅದಲ್ಲದೆ ವಿದ್ಯುತ್ ಅಳವಡಿಕೆ, ಅಗ್ನಿ ಶಾಮಕ ಅಳವಡಿಕೆ, ಕಾಂಪೋಡ್ ಗೋಡೆ ನಿರ್ಮಿಸುವ, ಪ್ರವೇಶ ದ್ವಾರ, ಪಾದಚಾರಿ ಕೆಲಸ ಸೇರಿದಂತೆ ಇನ್ನಿತರೆ ಕಾಮಗಾರಿ ಬಾಕಿಯಿದ್ದು, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಲೋಕೇಶ್‌ ಮಾಹಿತಿ ನೀಡಿದರು. ಈ ಕಾಮಗಾರಿ ಪೂರ್ಣಗೊಂಡು ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಿದರೆ ಗಾಂಧಿನಗರ, ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಬಹುತೇಕ ಪಾರ್ಕಿಂಗ್ ಸಮಸ್ಯೆ ನಿವಾರಣೆಯಾಗಲಿದೆ. ಅಲ್ಲದೇ ವಾಹನಗಳ ಕಳ್ಳತನ, ಪೊಲೀಸರು ತಮ್ಮ ವಾಹನಗಳನ್ನು ಟೋಯಿಂಗ್‌ ಮಾಡುವ ಭಯವೂ ಇಲ್ಲ ಎಂದು ಸ್ಥಳೀಯ ಉದ್ಯಮಿ ನಿತಿನ್ ಭಕ್ತ ವತ್ಸಲ ತಿಳಿಸಿದರು.