65 ಯುದ್ಧ ಕೈದಿಗಳಿದ್ದ ರಷ್ಯಾ ಸೇನಾ ವಿಮಾನ ಉಕ್ರೇನ್ ಗಡಿಯಲ್ಲಿ ಪತನ

ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್‌-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್‌ ಪ್ರಾಂತ್ಯದಲ್ಲಿ ಉಕ್ರೇನ್‌ ಗಡಿ ಸಮೀಪ ಪತನಗೊಂಡಿದೆ. ಮಾಸ್ಕೋ: ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್‌-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್‌ ಪ್ರಾಂತ್ಯದಲ್ಲಿ ಉಕ್ರೇನ್‌ ಗಡಿ ಸಮೀಪ ಪತನಗೊಂಡಿದೆ. ವಿಮಾನವು ನೇರವಾಗಿ ವಸತಿ ಪ್ರದೇಶದ ಸಮೀಪ ಪತನಗೊಂಡು ಹೊತ್ತಿ ಉರಿಯುತ್ತಿರುವುದು ವೀಡಿಯೋವೊಂದರಲ್ಲಿ ಕಾಣಿಸುತ್ತಿದೆ. ವಿಮಾನದ ಬಲಭಾಗದ ರೆಕ್ಕೆ ಮೊದಲು ನೆಲಕ್ಕೆ ಬಡಿದು ನಂತರ ಅದು ಹೊತ್ತಿ ಉರಿದಿದೆ. ಇದನ್ನೂ ಓದಿ: ಇರಾನ್ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 4 ಮಕ್ಕಳು, ಮೂವರು ಮಹಿಳೆಯರ ಸಾವು ಮಾಸ್ಕೋ ಕಾಲಮಾನದ ಪ್ರಕಾರ ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಹಾರಾಟದ ವೇಳೆ ವಿಮಾನ ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ, ‘ಯುದ್ಧದಲ್ಲಿ ಸೆರೆಯಾದ ಉಕ್ರೇನ್‌ನ 65 ಸೈನಿಕರು ಈ ವಿಮಾನದಲ್ಲಿದ್ದರು. ಇವರೊಂದಿಗೆ 6 ವಿಮಾನ ಸಿಬ್ಬಂದಿ ಮತ್ತು 3 ರಕ್ಷಣಾ ಸಿಬ್ಬಂದಿ ಇದ್ದರು. ಕೈದಿಗಳ ಹಸ್ತಾಂತರ ಪ್ರಕ್ರಿಯೆಗಾಗಿ ಇವರನ್ನು ಬೆಲ್ಗಾರ್ಡ್‌ ಪ್ರಾಂತ್ಯದಲ್ಲಿನ ಉಭಯ ರಾಷ್ಟ್ರಗಳ ಗಡಿ ಪ್ರದೇಶಕ್ಕೆ ಕರೆತರಲಾಗುತ್ತಿತ್ತು’ ಎಂದು ಸೇನೆ ಹೇಳಿದೆ. ವಿಮಾನದಲ್ಲಿದ್ದವರ ಪರಿಸ್ಥಿತಿ ಏನಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಘಟನಾ ಸ್ಥಳಕ್ಕೆ ತನಿಖಾ ತಂಡ ಮತ್ತು ತುರ್ತು ಚಿಕಿತ್ಸಾ ತಂಡಗಳು ತೆರಳಿವೆ.

65 ಯುದ್ಧ ಕೈದಿಗಳಿದ್ದ ರಷ್ಯಾ ಸೇನಾ ವಿಮಾನ ಉಕ್ರೇನ್ ಗಡಿಯಲ್ಲಿ ಪತನ
Linkup
ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್‌-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್‌ ಪ್ರಾಂತ್ಯದಲ್ಲಿ ಉಕ್ರೇನ್‌ ಗಡಿ ಸಮೀಪ ಪತನಗೊಂಡಿದೆ. ಮಾಸ್ಕೋ: ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್‌-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್‌ ಪ್ರಾಂತ್ಯದಲ್ಲಿ ಉಕ್ರೇನ್‌ ಗಡಿ ಸಮೀಪ ಪತನಗೊಂಡಿದೆ. ವಿಮಾನವು ನೇರವಾಗಿ ವಸತಿ ಪ್ರದೇಶದ ಸಮೀಪ ಪತನಗೊಂಡು ಹೊತ್ತಿ ಉರಿಯುತ್ತಿರುವುದು ವೀಡಿಯೋವೊಂದರಲ್ಲಿ ಕಾಣಿಸುತ್ತಿದೆ. ವಿಮಾನದ ಬಲಭಾಗದ ರೆಕ್ಕೆ ಮೊದಲು ನೆಲಕ್ಕೆ ಬಡಿದು ನಂತರ ಅದು ಹೊತ್ತಿ ಉರಿದಿದೆ. ಇದನ್ನೂ ಓದಿ: ಇರಾನ್ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 4 ಮಕ್ಕಳು, ಮೂವರು ಮಹಿಳೆಯರ ಸಾವು ಮಾಸ್ಕೋ ಕಾಲಮಾನದ ಪ್ರಕಾರ ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಹಾರಾಟದ ವೇಳೆ ವಿಮಾನ ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ, ‘ಯುದ್ಧದಲ್ಲಿ ಸೆರೆಯಾದ ಉಕ್ರೇನ್‌ನ 65 ಸೈನಿಕರು ಈ ವಿಮಾನದಲ್ಲಿದ್ದರು. ಇವರೊಂದಿಗೆ 6 ವಿಮಾನ ಸಿಬ್ಬಂದಿ ಮತ್ತು 3 ರಕ್ಷಣಾ ಸಿಬ್ಬಂದಿ ಇದ್ದರು. ಕೈದಿಗಳ ಹಸ್ತಾಂತರ ಪ್ರಕ್ರಿಯೆಗಾಗಿ ಇವರನ್ನು ಬೆಲ್ಗಾರ್ಡ್‌ ಪ್ರಾಂತ್ಯದಲ್ಲಿನ ಉಭಯ ರಾಷ್ಟ್ರಗಳ ಗಡಿ ಪ್ರದೇಶಕ್ಕೆ ಕರೆತರಲಾಗುತ್ತಿತ್ತು’ ಎಂದು ಸೇನೆ ಹೇಳಿದೆ. ವಿಮಾನದಲ್ಲಿದ್ದವರ ಪರಿಸ್ಥಿತಿ ಏನಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಘಟನಾ ಸ್ಥಳಕ್ಕೆ ತನಿಖಾ ತಂಡ ಮತ್ತು ತುರ್ತು ಚಿಕಿತ್ಸಾ ತಂಡಗಳು ತೆರಳಿವೆ. 65 ಯುದ್ಧ ಕೈದಿಗಳಿದ್ದ ರಷ್ಯಾ ಸೇನಾ ವಿಮಾನ ಉಕ್ರೇನ್ ಗಡಿಯಲ್ಲಿ ಪತನ