2027 AFC ಏಷ್ಯನ್ ಕಪ್ ಆಯೋಜನೆ: ಭಾರತ, ಸೌದಿ ಅರೇಬಿಯಾ ನಡುವೆ ತೀವ್ರ ಪೈಪೋಟಿ

2027 AFC ಏಷ್ಯನ್ ಕಪ್ ಆಯೋಜನೆ ವಿಚಾರದಲ್ಲಿ ಭಾರತ, ಸೌದಿ ಅರೇಬಿಯಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನವದೆಹಲಿ: 2027 AFC ಏಷ್ಯನ್ ಕಪ್ ಆಯೋಜನೆ ವಿಚಾರದಲ್ಲಿ ಭಾರತ, ಸೌದಿ ಅರೇಬಿಯಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಈ ಕುರಿತು ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ (Asian Football Confederation) ಮಾಹಿತಿ ನೀಡಿದ್ದು, 2027 ರ ಏಷ್ಯನ್ ಕಪ್ನ ಆತಿಥ್ಯ ಹಕ್ಕುಗಳಿಗಾಗಿ ಭಾರತ ಮತ್ತು ಸೌದಿ ಅರೇಬಿಯಾ ಸ್ಪರ್ಧಿಸಲಿವೆ ಎಂದು ಹೇಳಿದೆ.
ಇದನ್ನೂ ಓದಿ: ಫಿಫಾ U-17: ಭಾರತೀಯ ತಂಡವನ್ನು ಮುನ್ನಡೆಸಲಿರುವ ದಿನಗೂಲಿ ಕಾರ್ಮಿಕನ ಮಗಳು
ಟೂರ್ನಿ ಆಯೋಜನೆಗಾಗಿ ಈ ಹಿಂದೆ ಭಾರತ, ಸೌದಿ ಅರೇಬಿಯಾ ಸೇರಿದಂತೆ ಒಟ್ಟು 5 ರಾಷ್ಟ್ರಗಳು ಬಿಡ್ ಮಾಡಿದ್ದವು. ಆದರೆ ಈ ಪೈಕಿ ಮೂರು ರಾಷ್ಟ್ರಗಳು ಹಿಂದೆ ಸರಿದಿದ್ದು, ಡಿಸೆಂಬರ್ 2020 ರಲ್ಲಿ ಉಜ್ಬೇಕಿಸ್ತಾನ್ ರೇಸ್ನಿಂದ ಹಿಂದೆ ಸರಿದರೆ ಇರಾನ್ ಕೆಲವು ದಿನಗಳ ಹಿಂದೆ ತಮ್ಮ ಬಿಡ್ ಅನ್ನು ಹಿಂತೆಗೆದುಕೊಂಡಿತು. ಮೂರನೇ ರಾಷ್ಟ್ರವಾದ ಕತಾರ್ ಅನ್ನು ಮುಂದಿನ ವರ್ಷದ AFC ಏಷ್ಯನ್ ಕಪ್ಗೆ ಆತಿಥೇಯ ಅಸೋಸಿಯೇಷನ್ ಎಂದು ದೃಢೀಕರಿಸಿದ ನಂತರ, ಅವರು 2027 ರ ಆವೃತ್ತಿಯ ಬಿಡ್ ಅನ್ನು ಹಿಂತೆಗೆದುಕೊಂಡರು.
ಹೀಗಾಗಿ ಭಾರತ ಮತ್ತು ಸೌದಿ ಅರೇಬಿಯಾ ಕಣದಲ್ಲಿವೆ ಎಂದು ಹೇಳಿದೆ. ಒಂದು ವೇಳೆ ಭಾರತವು ಬಿಡ್ ಅನ್ನು ಗೆದ್ದರೆ, ಇದೇ ಮೊದಲ ಬಾರಿಗೆ ಭಾರತದಲ್ಲಿ ಕಾಂಟಿನೆಂಟಲ್ ಶೋಪೀಸ್ ಈವೆಂಟ್ ಎಂದೇ ಖ್ಯಾತಿ ಗಳಿಸಿರುವ ಏಷ್ಯನ್ ಕಪ್ ಟೂರ್ನಿ ಮೊದಲ ಬಾರಿಗೆ ಆಯೋಜನೆ ಮಾಡಿದಂತಾಗುತ್ತದೆ. ಸೌದಿ ಅರೇಬಿಯಾ ಈಗಾಗಲೇ ಮೂರು ಬಾರಿ ಕಾಂಟಿನೆಂಟಲ್ ಪ್ರಶಸ್ತಿಯನ್ನು ಗೆದ್ದಿದೆಯಾದರೂ ಈ ವರೆಗೂ ಪಂದ್ಯಾವಳಿಯನ್ನು ಆಯೋಜಿಸಿಲ್ಲ. ಹೀಗಾಗಿ ಸೌದಿಗೂ ಕೂಡ ಈ ಬಿಡ್ ಪ್ರಮುಖವಾಗಿದೆ.
ಇದನ್ನೂ ಓದಿ: ಎಎಫ್ಸಿ ಅಂಡರ್-17 ಫುಟ್ಬಾಲ್ ಏಷ್ಯನ್ ಕಪ್ ಅರ್ಹತಾ ಪಂದ್ಯ: ಕುವೈತ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
'ಎಎಫ್ಸಿ ಕಾರ್ಯಕಾರಿ ಸಮಿತಿಯು ಎಎಫ್ಸಿ ಏಷ್ಯನ್ ಕಪ್ 2027 ರ ಹರಾಜು ಪ್ರಸ್ತಾಪಗಳನ್ನು ಚರ್ಚಿಸಿದೆ ಮತ್ತು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಮತ್ತು ಸೌದಿ ಅರೇಬಿಯನ್ ಫುಟ್ಬಾಲ್ ಫೆಡರೇಶನ್ (ಎಸ್ಎಎಫ್ಎಫ್) ಅನ್ನು ಅಂತಿಮ ಎರಡು ಬಿಡ್ಡರ್ಗಳಾಗಿ ಶಾರ್ಟ್ಲಿಸ್ಟ್ ಮಾಡಿದೆ ಎಂದು ಎಎಫ್ಸಿ ಹೇಳಿಕೆಯಲ್ಲಿ ತಿಳಿಸಿದೆ.
"ಈ ನಿರ್ಧಾರವು ಅನ್ವಯವಾಗುವ ಬಿಡ್ಡಿಂಗ್ ನಿಯಮಗಳಿಗೆ ಅನುಸಾರವಾಗಿ 2023 ರ ಯಶಸ್ವಿ ಬಿಡ್ನ ನಂತರ 2027 ರೇಸ್ನಿಂದ ಹಿಂತೆಗೆದುಕೊಂಡಿದೆ ಎಂದು ಪರಿಗಣಿಸಲಾದ QFA (ಕತಾರ್) ನ ಬಿಡ್ ಪ್ರಸ್ತಾಪವನ್ನು ಮುಕ್ತಾಯಗೊಳಿಸುತ್ತದೆ. ಮತ್ತೆ, AFC ಏಷ್ಯನ್ ಕಪ್ 2027 ಅನ್ನು ಆಯೋಜಿಸಲು ಬಲವಾದ ಬಿಡ್ಗಳನ್ನು ಸಲ್ಲಿಸಿದ್ದಕ್ಕಾಗಿ ನಾವು ನಮ್ಮ ಮೂರು ಸದಸ್ಯ ಸಂಘಗಳಿಗೆ - ಅಖಿಲ ಭಾರತ ಫುಟ್ಬಾಲ್ ಫೆಡರೇಶನ್, ಕತಾರ್ ಫುಟ್ಬಾಲ್ ಅಸೋಸಿಯೇಷನ್ ಮತ್ತು ಸೌದಿ ಅರೇಬಿಯನ್ ಫುಟ್ಬಾಲ್ ಫೆಡರೇಶನ್ಗೆ ಧನ್ಯವಾದಗಳನ್ನು ಹೇಳುತ್ತೇವೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಮತ್ತು ಸೌದಿ ಅರೇಬಿಯನ್ ಫುಟ್ಬಾಲ್ ಫೆಡರೇಶನ್ನಲ್ಲಿ, ನಾವು ಎರಡು ಮಾದರಿ ಬಿಡ್ಗಳನ್ನು ಹೊಂದಿದ್ದೇವೆ ಮತ್ತು ಕತಾರ್ ಫುಟ್ಬಾಲ್ ಅಸೋಸಿಯೇಷನ್ ಅಂತಿಮವಾಗಿ 2027 ಆತಿಥೇಯರನ್ನು ನಿರ್ಮಿಸಲು ಅಡಿಪಾಯವನ್ನು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಎಎಫ್ಸಿ ಅಧ್ಯಕ್ಷ ಶೇಖ್ ಸಲ್ಮಾನ್ ಬಿನ್ ಇಬ್ರಾಹಿಂ ಅಲ್ ಖಲೀಫಾ ಹೇಳಿದರು.
ಇದನ್ನೂ ಓದಿ: 2022ರ ಫುಟ್ಬಾಲ್ ವಿಶ್ವಕಪ್ ಟೂರ್ನಿ ಬಳಿಕ ನಿವೃತ್ತಿ: ಸುಳಿವು ಕೊಟ್ಟ ಲಿಯೋನಲ್ ಮೆಸ್ಸಿ!
ಇನ್ನು ಟೂರ್ನಿ ಆಯೋಜನೆ ಸಂಬಂಧ ಮುಂದಿನ ಆತಿಥೇಯರ ನಿರ್ಧಾರವನ್ನು ಎಎಫ್ಸಿ ಕಾಂಗ್ರೆಸ್ ಫೆಬ್ರವರಿಯಲ್ಲಿ ತನ್ನ ಮುಂದಿನ ಸಭೆಯಲ್ಲಿ ತೆಗೆದುಕೊಳ್ಳುತ್ತದೆ. ಭಾರತವು 2023 ರ AFC ಏಷ್ಯನ್ ಕಪ್ನ ರೇಸ್ಗೆ ಸೇರಿತ್ತು. ಆದರೆ ಅಕ್ಟೋಬರ್ 2018 ರಲ್ಲಿ ಹಿಂದೆ ಸರಿದಿತ್ತು. 2017 ರಲ್ಲಿ ಪುರುಷರ U-17 ವಿಶ್ವಕಪ್ ಅನ್ನು ಯಶಸ್ವಿಯಾಗಿ ಪ್ರದರ್ಶಿಸಿದ ನಂತರ, ಭಾರತವು ಹಾಲಿ ನಡೆಯುತ್ತಿರುವ U-17 ಮಹಿಳಾ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ.