ಸಂಪುಟ ರಚನೆ: ಜೆ.ಪಿ ನಡ್ಡಾ ಏನು ಮಾರ್ಗದರ್ಶನ ಕೊಡುತ್ತಾರೆ ಎಂದು ನೋಡುತ್ತೇನೆ; ಬಸವರಾಜ ಬೊಮ್ಮಾಯಿ

ಸಂಪುಟ ರಚನೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಏನು ಮಾರ್ಗದರ್ಶನ ಕೊಡುತ್ತಾರೆ ಎಂದು ನೋಡುತ್ತೇನೆ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು ಈ ಕುರಿತಾಗಿ ಹೇಳಿದ್ದಿಷ್ಟು.

ಸಂಪುಟ ರಚನೆ: ಜೆ.ಪಿ ನಡ್ಡಾ ಏನು ಮಾರ್ಗದರ್ಶನ ಕೊಡುತ್ತಾರೆ ಎಂದು ನೋಡುತ್ತೇನೆ; ಬಸವರಾಜ ಬೊಮ್ಮಾಯಿ
Linkup
ಹೊಸದಿಲ್ಲಿ: ಸಂಪುಟ ರಚನೆ ಕುರಿತಾಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಏನು ಮಾರ್ಗದರ್ಶನ ನೀಡುತ್ತಾರೆ ಎಂಬುವುದನ್ನು ನೋಡುತ್ತೇನೆ ಎಂದು ನೂತನ ಸಿಎಂ ಹೇಳಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ದೆಹಲಿಗೆ ಮೊದಲನೇ ಭೇಟಿ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ಧನ್ಯವಾದ ಸಲ್ಲಿಸುವುದಾಗಿದೆ.ಅವರ ಆಶೀರ್ವಾದ ಕೋರುತ್ತೇನೆ. ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಆಗಲಿದ್ದೇನೆ ಎಂದರು. ಶುಕ್ರವಾರ ದೆಹಲಿಯಲ್ಲಿ ಇರುತ್ತೇನೆ ಹಾಗೂ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರ ಜೊತೆ ರಾಜ್ಯಕ್ಕೆ ಕೇಂದ್ರದಿಂದ ಆಗಬೇಕಾಗಿರುವ ಕೆಲಸ ಕಾರ್ಯಗಳ ಕುರಿತಾಗಿ ಸಭೆ ನಡೆಸಲಾಗುವುದು. ಶನಿವಾರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದರು. ಸಂಪುಟ ರಚನೆ ಬಗ್ಗೆ ಪಿಎಂ ಮೋದಿ ಜೊತೆ ಚರ್ಚೆ ಸಾಧ್ಯತೆ ಇಲ್ಲ ಆದರೆ ಜೆಪಿ ನಡ್ಡಾ ಅವರು ಏನು ಮಾರ್ಗದರ್ಶನ ನೀಡುತ್ತಾರೆ ಎಂದು ನೋಡುತ್ತೇನೆ. ಸಂಪುಟ ವಿಸ್ತರಣೆ ಆದ್ಯತೆ ವಿಚಾರವಾಗಿದೆ ಎಂದು ತಿಳಿಸಿದರು. ಕೇರಳದಲ್ಲಿ ಕೋವಿಡ್ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ದ.ಕ, ಕೊಡಗು ಹಾಗೂ ಮೈಸೂರು ಡಿಸಿಗಳ ಜೊತೆ ಮಾತನಾಡುತ್ತೇನೆ. ಕೋವಿಡ್ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ತಪಾಸಣೆ ಬಿಗಿಗೊಳಿಸಬೇಕು. ರೈಲ್ವೇ ನಿಲ್ದಾಣದಲ್ಲೂ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗುವುದು. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಈ ನಿಟ್ಟಿನಲ್ಲಿ ಡಿಸಿ ಎಸ್‌ಪಿಗಳ ಜೊತೆ ಸಭೆ ಮಾಡುತ್ತಾರೆ. ಶನಿವಾರ ವಿಡಿಯೋ ಸಂವಾದದ ಮೂಲಕ ಇತರ ಜಿಲ್ಲೆಗಳ ಡಿಸಿ ಎಸ್‌ಪಿಗಳ ಜೊತೆಗೆ ಸಂವಾದ ನಡೆಸುತ್ತೇನೆ ಎಂದು ತಿಳಿಸಿದರು. ಆರೋಗ್ಯ ಅಧಿಕಾರಿಗಳ ಜೊತೆಗೂ ಸಂವಾದ ನಡೆಸಲಾಗುವುದು. ನಮ್ಮ ಆರೋಗ್ಯ ವ್ಯವಸ್ಥೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಚಿವಾಕಾಂಕ್ಷಿಗಳ ಬೇಡಿಕೆ ಕುರಿತಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿ ರಾಷ್ಟ್ರೀಯ ಪಕ್ಷ ಇದಕ್ಕೆ ಶಕ್ತಿ ಹಾಗೂ ಉತ್ತಮ ನಾಯಕತ್ವ ಇದೆ. ಸಹಜವಾಗಿ ಆಕಾಂಕ್ಷಿಗಳು ಇದ್ದಾರೆ. ಎಲ್ಲವನ್ನು ನಿಭಾಯಿಸುವ ಶಕ್ತಿ ಪಕ್ಷಕ್ಕೆ ಇದೆ ಎಂದರು. ಇನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಪಟ್ಟಿ ಸುಳ್ಳಿನ ಕಂತೆ ಅದಕ್ಕೆ ಸರಿಯಾದ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು. ರಾಜನಾಥ್ ಸಿಂಗ್ ಭೇಟಿಯಾದ ಬೊಮ್ಮಾಯಿ ನೂತನ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ನವದೆಹಲಿಯಲ್ಲಿ ಶುಕ್ರವಾರ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಂಜೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಆಗಲಿದ್ದಾರೆ.