ಶೂಟಿಂಗ್: ಪ್ಯಾರಿಸ್‌ ಒಲಿಂಪಿಕ್ ಗೆ ಅರ್ಹತೆ ಪಡೆದ ಇಶಾ ಸಿಂಗ್, ವರುಣ್ ತೋಮರ್

ಭಾರತದ ಯುವ ಶೂಟರ್‌ಗಳಾದ ವರುಣ್ ತೋಮರ್ ಮತ್ತು ಇಶಾ ಸಿಂಗ್ ಅವರು ಸೋಮವಾರ ಜಕಾರ್ತನಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನ ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಗೆ ಅರ್ಹತೆ ಪಡೆದಿದ್ದಾರೆ. ಜಕಾರ್ತ: ಭಾರತದ ಯುವ ಶೂಟರ್‌ಗಳಾದ ವರುಣ್ ತೋಮರ್ ಮತ್ತು ಇಶಾ ಸಿಂಗ್ ಅವರು ಸೋಮವಾರ ಜಕಾರ್ತನಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನ ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಗೆ ಅರ್ಹತೆ ಪಡೆದಿದ್ದಾರೆ. ಇವರಿಬ್ಬರ ಅರ್ಹತೆಯೊಂದಿಗೆ ಪ್ಯಾರಿಸ್‌ಗೆ ಒಲಿಪಿಂಕ್ ಗೆ ತೆರಳುವ ಒಟ್ಟು ಭಾರತೀಯ ಶೂಟರ್‌ಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇದು ಈ ಹಿಂದೆ ಟೋಕಿಯೊ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅತ್ಯಧಿಕ ಸಂಖ್ಯೆಗೆ ಸಮನಾಗಿದೆ. ಇದನ್ನು ಓದಿ: ನವದೆಹಲಿ: ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿ ಅರ್ಜುನ, ಖೇಲ್ ರತ್ನ ಪ್ರಶಸ್ತಿ ತೊರೆದ ವಿನೇಶ್ ಫೋಗಟ್!​ ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ಉಳಿದ ಅರ್ಹತಾ ಪಂದ್ಯಗಳು ನಡೆದಾಗ ಭಾರತದ ಇನ್ನಷ್ಟು ಕ್ರೀಡಾಪಟುಗಳು ಪ್ಯಾರಿಸ್‌ ಒಲಿಂಪಿಕ್ ಗೆ ಅರ್ಹತೆ ಪಡೆಯಬಹುದು. 20ರ ಹರೆಯದ ತೋಮರ್ ಫೈನಲ್‌ನಲ್ಲಿ 239.6 ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದರೆ, ಅರ್ಜುನ್ ಚೀಮಾ ಅವರು 237.3 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಮಂಗೋಲಿಯಾದ ದವಾಖು ಎಂಖ್ತೈವಾನ್ (217.2) ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಇನ್ನು 18ರ ಹರೆಯದ ಇಶಾ ಸಿಂಗ್ ಅವರು ಮಹಿಳೆಯರ ವಿಭಾಗದಲ್ಲಿ 243.1 ಅಂಕ ಗಳಿಸಿ ಚಿನ್ನ ಗೆದ್ದಿದ್ದಾರೆ. ಪಾಕಿಸ್ಥಾನದ ಕಿಶ್ಮಲಾ ತಲಾತ್(236.3) ಬೆಳ್ಳಿ ಪದಕ ಗೆದ್ದರೆ, ಭಾರತದ ರಿದಮ್ ಸಾಂಗ್ವಾನ್(214.5) ಅವರು ಕಂಚಿನ ಪದಕ ಪಡೆದರು.

ಶೂಟಿಂಗ್: ಪ್ಯಾರಿಸ್‌ ಒಲಿಂಪಿಕ್ ಗೆ ಅರ್ಹತೆ ಪಡೆದ ಇಶಾ ಸಿಂಗ್, ವರುಣ್ ತೋಮರ್
Linkup
ಭಾರತದ ಯುವ ಶೂಟರ್‌ಗಳಾದ ವರುಣ್ ತೋಮರ್ ಮತ್ತು ಇಶಾ ಸಿಂಗ್ ಅವರು ಸೋಮವಾರ ಜಕಾರ್ತನಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನ ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಗೆ ಅರ್ಹತೆ ಪಡೆದಿದ್ದಾರೆ. ಜಕಾರ್ತ: ಭಾರತದ ಯುವ ಶೂಟರ್‌ಗಳಾದ ವರುಣ್ ತೋಮರ್ ಮತ್ತು ಇಶಾ ಸಿಂಗ್ ಅವರು ಸೋಮವಾರ ಜಕಾರ್ತನಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನ ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ ಗೆ ಅರ್ಹತೆ ಪಡೆದಿದ್ದಾರೆ. ಇವರಿಬ್ಬರ ಅರ್ಹತೆಯೊಂದಿಗೆ ಪ್ಯಾರಿಸ್‌ಗೆ ಒಲಿಪಿಂಕ್ ಗೆ ತೆರಳುವ ಒಟ್ಟು ಭಾರತೀಯ ಶೂಟರ್‌ಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇದು ಈ ಹಿಂದೆ ಟೋಕಿಯೊ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅತ್ಯಧಿಕ ಸಂಖ್ಯೆಗೆ ಸಮನಾಗಿದೆ. ಇದನ್ನು ಓದಿ: ನವದೆಹಲಿ: ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿ ಅರ್ಜುನ, ಖೇಲ್ ರತ್ನ ಪ್ರಶಸ್ತಿ ತೊರೆದ ವಿನೇಶ್ ಫೋಗಟ್!​ ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ಉಳಿದ ಅರ್ಹತಾ ಪಂದ್ಯಗಳು ನಡೆದಾಗ ಭಾರತದ ಇನ್ನಷ್ಟು ಕ್ರೀಡಾಪಟುಗಳು ಪ್ಯಾರಿಸ್‌ ಒಲಿಂಪಿಕ್ ಗೆ ಅರ್ಹತೆ ಪಡೆಯಬಹುದು. 20ರ ಹರೆಯದ ತೋಮರ್ ಫೈನಲ್‌ನಲ್ಲಿ 239.6 ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದರೆ, ಅರ್ಜುನ್ ಚೀಮಾ ಅವರು 237.3 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಮಂಗೋಲಿಯಾದ ದವಾಖು ಎಂಖ್ತೈವಾನ್ (217.2) ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಇನ್ನು 18ರ ಹರೆಯದ ಇಶಾ ಸಿಂಗ್ ಅವರು ಮಹಿಳೆಯರ ವಿಭಾಗದಲ್ಲಿ 243.1 ಅಂಕ ಗಳಿಸಿ ಚಿನ್ನ ಗೆದ್ದಿದ್ದಾರೆ. ಪಾಕಿಸ್ಥಾನದ ಕಿಶ್ಮಲಾ ತಲಾತ್(236.3) ಬೆಳ್ಳಿ ಪದಕ ಗೆದ್ದರೆ, ಭಾರತದ ರಿದಮ್ ಸಾಂಗ್ವಾನ್(214.5) ಅವರು ಕಂಚಿನ ಪದಕ ಪಡೆದರು. ಶೂಟಿಂಗ್: ಪ್ಯಾರಿಸ್‌ ಒಲಿಂಪಿಕ್ ಗೆ ಅರ್ಹತೆ ಪಡೆದ ಇಶಾ ಸಿಂಗ್, ವರುಣ್ ತೋಮರ್