ವಿಲನ್ ಇಲ್ಲದೆ ಹೀರೋ ಇರಲ್ಲ.. ಎಚ್ಡಿಕೆ-ಸುಮಲತಾ ಸಂಘರ್ಷಕ್ಕೆ ಅಭಿಷೇಕ್ ಉತ್ತರ..!

'ಅಕ್ರಮವಾಗಿ ಏನಾದರೂ ಮಾಡಿದರೆ ತಪ್ಪಿಸಲು ಪ್ರಯತ್ನ ಪಡುವುದು ಸಹಜ. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಅದನ್ನು ಪರಿಶೀಲನೆ ನಡೆಸಲು ಎಂಪಿ, ಡಿಸಿ ಬರುತ್ತಾರೆ ಅಂದಾಗ ತಪ್ಪಿಸುವ ಪ್ರಯತ್ನ ಸಹಜವಾಗಿ ನಡೆಯುತ್ತದೆ' - ಅಭಿಷೇಕ್ ಅಂಬರೀಶ್

ವಿಲನ್ ಇಲ್ಲದೆ ಹೀರೋ ಇರಲ್ಲ.. ಎಚ್ಡಿಕೆ-ಸುಮಲತಾ ಸಂಘರ್ಷಕ್ಕೆ ಅಭಿಷೇಕ್ ಉತ್ತರ..!
Linkup
: ಮಾಜಿ ಸಿಎಂ ಎಚ್ಡಿಕೆ ಹಾಗೂ ಸಂಸದೆ ನಡುವಣ ವಾಕ್ಸಮರಕ್ಕೆ ಸುಮಲತಾ-ಅಂಬರೀಶ್ ಪುತ್ರ ಸಿನೆಮಾ ಸ್ಟೈಲ್‌ನಲ್ಲೇ ಉತ್ತರ ಕೊಟ್ಟಿದ್ದಾರೆ. ಒಳ್ಳೆಯದು ಮಾಡಲು ಹೋದಾಗ ವಿರೋಧ ಸಹಜ. ವಿಲನ್ ಇಲ್ಲದೆ ಹೀರೋ ಇರುತ್ತಾರಾ? ಎಂದು ಅಭಿಷೇಕ್ ಸವಾಲೆಸೆದಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ನಾನೇ ಸೋತಿದ್ದೇನೆ. ಅವರ ಮನಸ್ಸಿನಲ್ಲಿ ಏನಿದೆ ಅನ್ನೋದು ಅವರಿಗೆ ಗೊತ್ತು ಎಂದು ಅಭಿಷೇಕ್ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆ ಸ್ಥಳಗಳಿಗೆ ಭೇಟಿ ಮಾಡಿದಾಗ ಸುಮಲತಾ ಅವರಿಗೆ ಅಡ್ಡಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆಯೂ ಪ್ರತಿಕ್ರಿಯೆ ನೀಡಿದ ಅಭಿಷೇಕ್, ಅಕ್ರಮವಾಗಿ ಏನಾದರೂ ಮಾಡಿದರೆ ತಪ್ಪಿಸಲು ಪ್ರಯತ್ನ ಪಡುವುದು ಸಹಜ ಎಂದರು. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಅದನ್ನು ಪರಿಶೀಲನೆ ನಡೆಸಲು ಎಂಪಿ, ಡಿಸಿ ಬರುತ್ತಾರೆ ಅಂದಾಗ ತಪ್ಪಿಸುವ ಪ್ರಯತ್ನ ಸಹಜವಾಗಿ ನಡೆಯುತ್ತದೆ ಎಂದು ಅಭಿಷೇಕ್ ವಿಶ್ಲೇಷಿಸಿದರು. ಇನ್ನು, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಜನರ ಕೈಗೆ ಸಿಗಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅಭಿಷೇಕ್, ವಿರೋಧ ಪಕ್ಷದವರು ಸಾವಿರ ಹೇಳುತ್ತಾರೆ, ಅದು ಅವರ ಕೆಲಸ. ಪ್ರತಿ ದಿನ ಕ್ಷೇತ್ರದಲ್ಲಿಯೇ ಸಂಸದರು ಇರೋಕ್ಕಾಗಲ್ಲ, ಅವರು ಸಂಸತ್ತಿಗೆ ಕೂಡಾ ಹೋಗಬೇಕಲ್ವಾ ಎಂದು ಅಭಿಷೇಕ್ ಅಂಬರೀಶ್ ಸಮರ್ಥಿಸಿಕೊಂಡರು.