ಮುಂಬಯಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ, ಎಂಎನ್‌ಎಸ್‌ ನಡುವೆ ಮೈತ್ರಿ?

ಮುಂದಿನ ವರ್ಷ ನಡೆಯಲಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಮುಂಬಯಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ, ಎಂಎನ್‌ಎಸ್‌ ನಡುವೆ ಮೈತ್ರಿ?
Linkup
ಮುಂಬಯಿ: ಬಿಜೆಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಅವರು ಮಹಾರಾಷ್ಟ್ರ ನವನಿರ್ಮಾಣ ಸೇನೆ () ಸ್ಥಾಪಕ ರಾಜ್‌ ಠಾಕ್ರೆ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಾಟೀಲ್‌ ಅವರು ಶುಕ್ರವಾರ ಠಾಕ್ರೆ ನಿವಾಸಕ್ಕೆ ತೆರಳಿ ಸುದೀರ್ಘ ಮಾತುಕತೆ ನಡೆಸಿದರು. ಮುಂದಿನ ವರ್ಷ ನಡೆಯಲಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ. ಸಭೆ ಬಳಿಕ ಮಾತನಾಡಿದ ಚಂದ್ರಕಾಂತ್‌ ಪಾಟೀಲ್‌, ''ಕಳೆದ ವಾರ ನಾಸಿಕ್‌ನಲ್ಲಿನಾವಿಬ್ಬರೂ ಆಕಸ್ಮಿಕವಾಗಿ ಭೇಟಿಯಾಗಿದ್ದೆವು. ಆಗ ರಾಜ್‌ ಠಾಕ್ರೆ ತಮ್ಮ ನಿವಾಸಕ್ಕೆ ಚಹಾಕೂಟಕ್ಕೆ ಆಮಂತ್ರಿಸಿದ್ದರು. ಅದಕ್ಕೆ ಮನ್ನಣೆ ನೀಡಿ ಅವರ ನಿವಾಸಕ್ಕೆ ಭೇಟಿ ನೀಡಿದ್ದೆ. ಇದು ಸೌಜನ್ಯದ ಭೇಟಿ, ಈ ವೇಳೆ ರಾಜಕೀಯದ ಚರ್ಚೆ ಆಗಲಿಲ್ಲ,'' ಎಂದು ಹೇಳಿದರು.