ಮೇಕೆದಾಟು ಯೋಜನೆ ಕೈಗೆತ್ತುಕೊಳ್ಳಬೇಡಿ: ಸಿಎಂ ಬಿಎಸ್‌ವೈಗೆ ಸ್ಟಾಲಿನ್ ಆಗ್ರಹ

'ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣವಾಗುತ್ತಿರುವ ಪ್ರದೇಶ ಬೆಂಗಳೂರು ಮಹಾನಗರದಿಂದ ತುಂಬಾ ದೂರವಿದೆ. ಹೀಗಾಗಿ, ನೀವು ಕೊಡುತ್ತಿರುವ ಕಾರಣ ಒಪ್ಪಲು ಸಾಧ್ಯವಿಲ್ಲ' - ತಮಿಳುನಾಡು ಸಿಎಂ ಸ್ಟಾಲಿನ್ ಆಕ್ಷೇಪ

ಮೇಕೆದಾಟು ಯೋಜನೆ ಕೈಗೆತ್ತುಕೊಳ್ಳಬೇಡಿ: ಸಿಎಂ ಬಿಎಸ್‌ವೈಗೆ ಸ್ಟಾಲಿನ್ ಆಗ್ರಹ
Linkup
ಚೆನ್ನೈ (): ವಿಚಾರವಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಪತ್ರ ಬರೆದಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆಯನ್ನು ಕೈಗೆತ್ತಿಕೊಳ್ಳಬೇಡಿ ಎಂದು ಅವರು ಅವರು ಆಗ್ರಹಪೂರ್ವಕ ಮನವಿ ಮಾಡಿದ್ದಾರೆ. ಎರಡೂ ರಾಜ್ಯಗಳ ನಡುವೆ ಸಹಕಾರ ಹಾಗೂ ಸಹಬಾಳ್ವೆ ಇರಲಿ ಎಂದು ಅವರು ತಮ್ಮ ಪತ್ರದ ಮೂಲಕ ಮನವಿಯನ್ನೂ ಮಾಡಿದ್ದಾರೆ. ನದಿ ಪಾತ್ರದಲ್ಲಿ ತಮಿಳುನಾಡು ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ 2 ಜಲವಿದ್ಯುತ್ ಯೋಜನೆಗಳಿಗೂ, ಕರ್ನಾಟಕದ ಮೇಕೆದಾಟು ಯೋಜನೆಗೂ ಹೋಲಿಕೆ ಮಾಡಬೇಡಿ ಎಂದು ಸ್ಟಾಲಿನ್ ಹೇಳಿದ್ದಾರೆ. ತಮಿಳುನಾಡಿನಲ್ಲಿ ವಿದ್ಯುತ್ ಅಭಾವ ಇರುವ ಕಾರಣ, ನಮ್ಮ ಪಾಲಿಗೆ ಬಂದಿರುವ ಕಾವೇರಿ ನೀರಿನಲ್ಲೇ 2 ಜಲವಿದ್ಯುತ್ ಘಟಕಗಳನ್ನು ನಿರ್ಮಿಸುತ್ತಿದ್ದೇವೆ ಎಂದಿರುವ ಸ್ಟಾಲಿನ್, ಜಲವಿದ್ಯುತ್ ಯೋಜನೆಗೆ ಬಳಕೆಯಾಗುವ ಇದೇ ನೀರು ಮುಂದೆ ಕೃಷಿ ಹಾಗೂ ಕುಡಿಯುವ ನೀರಿಗೆ ಮರುಬಳಕೆಯಾಗುತ್ತದೆ ಎಂದು ವಿವರಿಸಿದ್ದಾರೆ. ಆದರೆ ಸರ್ಕಾರವು ಮೇಕೆದಾಟು ಯೋಜನೆಯಡಿ 67.16 ಟಿಎಂಸಿ ನೀರಿನ ಸಂಗ್ರಹ ಪ್ರಸ್ತಾಪ ಮಾಡಿರೋದು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಸ್ಪಷ್ಟ ಉಲ್ಲಂಘನೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ವಾದಿಸಿದ್ದಾರೆ. ಈ ಯೋಜನೆ ಜಾರಿಯಾದರೆ, ಅಂತಾರಾಜ್ಯ ನೀರಾವರಿ ಹಂಚಿಕೆಯ ನಿಯಮಾವಳಿಗಳ ಉಲ್ಲಂಘನೆಯಾಗುತ್ತೆ ಎಂದು ಅವರು ಎಚ್ಚರಿಸಿದ್ದಾರೆ. ಕಾವೇರಿ ನದಿ ನೀರು ಕೆಆರ್‌ಎಸ್‌ ದಾಟಿದ ನಂತರ ಅನಿಯಂತ್ರಿತವಾಗಿ ತಮಿಳುನಾಡಿನತ್ತ ಸಾಗುತ್ತದೆ. ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣಾವತಿ ಸೇರಿದಂತೆ ಹಲವು ಜಲಮೂಲಗಳು ಇದಕ್ಕೆ ಸೇರ್ಪಡೆಯಾಗುತ್ತದೆ. ಒಂದು ವೇಳೆ ಮೇಕೆದಾಟು ಯೋಜನೆ ಜಾರಿಯಾದರೆ, ಅನಿಯಂತ್ರಿತ ನೀರಿನ ಹರಿವಿಗೆ ತಡೆ ಒಡ್ಡಿದಂತಾಗುತ್ತದೆ. ಅಲ್ಲದೆ ಇದು ತಮಿಳುನಾಡಿನ ರೈತ ಸಮೂಹದ ಹಿತಾಸಕ್ತಿಯ ವಿರುದ್ಧವಾಗಿದೆ ಎಂದು ಸ್ಟಾಲಿನ್ ವಾದಿಸಿದ್ದಾರೆ. ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಇದೇ ಕಾರಣಕ್ಕಾಗಿ ಮೇಕೆದಾಟು ಯೋಜನೆಗೆ ಸಿದ್ದತೆ ರೂಪಿಸಲಾಗಿದೆ. ಆದ್ರೆ, ಅಣೆಕಟ್ಟೆ ನಿರ್ಮಾಣವಾಗುತ್ತಿರುವ ಪ್ರದೇಶ ಬೆಂಗಳೂರು ಮಹಾನಗರದಿಂದ ತುಂಬಾ ದೂರವಿದೆ. ಹೀಗಾಗಿ, ನೀವು ಕೊಡುತ್ತಿರುವ ಕಾರಣ ಒಪ್ಪಲು ಸಾಧ್ಯವಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. ಕರ್ನಾಟಕವು ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಾವೇರಿ ನದಿ ನೀರನ್ನು ಬಳಸಿಕೊಳ್ಳಲುತ್ತಿದೆ. ಇಷ್ಟಾದ್ರೂ ಕೂಡಾ ಹೆಚ್ಚುವರಿಯಾಗಿ 4.75 ಟಿಎಂಸಿ ಕುಡಿಯುವ ನೀರಿನ ಅಗತ್ಯತೆಗಾಗಿ 67.16 ಟಿಎಂಸಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟನ್ನು ಮೇಕೆದಾಟಿನಲ್ಲಿ ನಿರ್ಮಿಸಲು ಮುಂದಾಗಿರೋದು ಆಕ್ಷೇಪಾರ್ಹ ಎಂದಿದ್ದಾರೆ. ಇದರಿಂದ ತಮಿಳುನಾಡಿಗೆ ನೀರಿನ ಕೊರತೆ ಉಂಟಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯಗಳಿಗೆ ಕಾವೇರಿ ನದಿ ನೀರಿನ ಹಂಚಿಕೆಯನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ಮಾಡಿದೆ. ಆದ್ರೆ, ನಾವು ನಮ್ಮ ಪಾಲಿನ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಸುದೀರ್ಘ ಕಾಲ ಜಲ ವಿವಾದ ನಡೆದು ಬಂತು. ಇದೀಗ ನಮ್ಮ ಪಾಲಿನ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದರೆ, ನೀರಾವರಿ ವ್ಯವಸ್ಥೆ ಬಲಪಡಿಸಬೇಕು. ಕೆಲವು ಹಳೆಯ ಕಾಲುವೆ, ಸಂಗ್ರಹಾಗಾರಗಳ ಆಧುನೀಕರಣವಾಗಬೇಕು. ಇವೆಲ್ಲವೂ ಆಗದೆ ನಾವು ಕಾವೇರಿ ನೀರಿನ ಸಮರ್ಥ ಬಳಕೆ ಮಾಡಿಕೊಳ್ಳೋದು ಅಸಾಧ್ಯ ಎಂದು ಸ್ಟಾಲಿನ್ ಹೇಳಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ವಿಷಯದ ಗಂಭೀರತೆ, ಸೂಕ್ಷ್ಮತೆ ಅರಿತುಕೊಂಡು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳದಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿರುವ ಸ್ಟಾಲಿನ್, ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಸಹಬಾಳ್ವೆ ಹಾಗೂ ಸಹಕಾರ ಮುಂದುವರಿಯಲಿ ಎಂದು ಮನವಿ ಮಾಡಿದ್ದಾರೆ.