ಮುಂಬಯಿ: ಮಹಾರಾಷ್ಟ್ರದಲ್ಲಿನ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮತ್ತು ಕೇಂದ್ರ ಸರ್ಕಾರದ ನಡುವಿನ ತೀವ್ರ ಮಾತಿನ ಸಮರದ ಮಧ್ಯೆ, ಮಹಾರಾಷ್ಟ್ರ ಸಚಿವ ಅವರನ್ನು ಮಂಗಳವಾರ ಬೆಳಿಗ್ಗೆ ವಿಚಾರಣೆಗೆ ಒಳಪಡಿಸಿದೆ. ಮುಖಂಡ ನವಾಬ್ ಮಲಿಕ್ () ಅವರ ಮನೆಗೆ ಮಂಗಳವಾರ ಮುಂಜಾನೆ 6 ಗಂಟೆಗೆ ತೆರಳಿದ ಇಡಿ ಅಧಿಕಾರಿಗಳು, ಅಲ್ಲಿ ಸುಮಾರು ಒಂದು ಗಂಟೆ ವಿಚಾರಣೆಗೆ ಒಳಪಡಿಸಿದರು. ಬಳಿಕ 7.30ರ ವೇಳೆಗೆ ಇಡಿ (ED) ಕಚೇರಿಗೆ ಕರೆದೊಯ್ಯಲಾಯಿತು. 8.30ರಿಂದ ಮತ್ತೆ ವಿಚಾರಣೆ ನಡೆಸಲಾಗುತ್ತಿದೆ.
ಮುಂಬಯಿ ಭೂಗತ ಲೋಕ, ದೇಶದಿಂದ ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 62 ವರ್ಷದ ನವಾಬ್ ಮಲಿಕ್ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಮಲಿಕ್ ಅವರ ಹೇಳಿಕೆ ದಾಖಲಿಸಲಾಗುತ್ತಿದೆ.
ಈ ಬೆಳವಣಿಗೆ ಬಗ್ಗೆ ನವಾಬ್ ಮಲಿಕ್ ಅವರ ಕಚೇರಿ ಟ್ವಿಟ್ಟರ್ ಮೂಲಕ ಖಚಿತಪಡಿಸಿದೆ. "ಇಂದು ಬೆಳಿಗ್ಗೆ ಇಡಿ ತಂಡ ನವಾಬ್ ಮಲಿಕ್ ಸಾಹೇಬರ ಕಚೇರಿಗೆ ಬಂದಿತ್ತು. ಅವರು ಸಾಹೇಬ್ ಅವರನ್ನು ಅವರ ವಾಹನದಲ್ಲಿಯೇ ಇ.ಡಿ ಕಚೇರಿಗೆ ಕರೆದೊಯ್ದಿದ್ದಾರೆ. ವಕೀಲ ಅಮೀರ್ ಮಲಿಕ್, ಸಾಹೇಬ್ ಅವರ ಮಗ ಅವರೊಂದಿಗೆ ಇದ್ದಾರೆ" ಎಂದು ಅದು ತಿಳಿಸಿದೆ.
ಕೇಂದ್ರ ಸಂಸ್ಥೆಗಳು ರಾಜಕೀಯವಾಗಿ ಪ್ರಚೋದಿತಗೊಂಡಿವೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಮತ್ತೊಮ್ಮೆ ಆರೋಪಿಸಿದ್ದಾರೆ. ಬಿಜೆಪಿಗೆ ಪರೋಕ್ಷ ಎಚ್ಚರಿಕೆ ನೀಡಿರುವ ಅವರು, ಭ್ರಷ್ಟಾಚಾರದಲ್ಲಿ ತೊಡಗಿರುವ ಕೆಲವು ಅಧಿಕಾರಿಗಳ ಬಂಡವಾಳವನ್ನು ಏನೇ ತೊಂದರೆ ಎದುರಾದರೂ ತೆರೆದಿಡುವುದಾಗಿ ಹೇಳಿದ್ದಾರೆ.
"ನವಾಬ್ ಮಲಿಕ್ ಅವರು ಸತ್ಯವನ್ನು ಹೊರಗೆಡವುತ್ತಿದ್ದಾರೆ. ಬಿಜೆಪಿ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ಸಿಬಿಐ ಮತ್ತು ಇಡಿ ಬೆನ್ನಟ್ಟುತ್ತವೆ. ಅವರನ್ನು ಇಡಿ ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದೆ. ಅವರು ತನಿಖೆ ನಡೆಸಲಿ. ಅವರು ಸಂಜೆ ವೇಳೆ ಮನೆಗೆ ಮರಳುತ್ತಾರೆ ಎಂದು ಭರವಸೆ ಹೊಂದಿದ್ದೇವೆ" ಎಂದು ತಿಳಿಸಿದ್ದಾರೆ.
"ನವಾಬ್ ಮಲಿಕ್ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದಾಗಲೇ ಅವರನ್ನು ಈ ರೀತಿಯಲ್ಲಿ ಗುರಿಪಡಿಸಲಾಗುತ್ತದೆ ಎನ್ನುವುದು ನಮಗೆ ತಿಳಿದಿತ್ತು. ಅವರ ವಿರುದ್ಧದ ಪ್ರಕರಣದ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ಎದುರಾಳಿಗಳನ್ನು ಮಟ್ಟಹಾಕಲು ಯಾವಾಗಲೂ ದಾವೂದ್ ಹೆಸರನ್ನು ಬಳಸಲಾಗುತ್ತಿದೆ" ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.
ತಾವು ಮಹಾರಾಷ್ಟ್ರ ಸಿಎಂ ಆಗಿದ್ದಾಗ ಕೂಡ ಭೂಗತ ಜಗತ್ತಿನ ಜತೆಗೆ ನಂಟು ಇದೆ ಎಂದು ತಮ್ಮ ಮೇಲೆ ಕೂಡ ಆರೋಪಿಸಲಾಗಿತ್ತು. 25 ವರ್ಷಗಳ ಬಳಿಕ, ಕಿರುಕುಳ ನೀಡಲು ಮತ್ತು ಕೆಟ್ಟ ಹೆಸರು ತರಲು ಅದೇ ತಂತ್ರ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರವನ್ನು ಉರುಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಎನ್‌ಸಿಪಿ, ಶಿವಸೇನಾ ಮತ್ತು ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಆಡಳಿತ ಮುಂದುವರಿಸುವುದು ಮಾತ್ರವಲ್ಲ, ಜತೆಗೆ ಬಿಜೆಪಿಯನ್ನು ಪತನಗೊಳಿಸುವ ಮೂಲಕ ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬರಲಿದೆ ಎಂದು ಎರಡು ವಾರಗಳ ಹಿಂದೆ ನವಾಬ್ ಮಲಿಕ್ ಹೇಳಿದ್ದರು.