ತಮಿಳುನಾಡು ಚುನಾವಣೆ: ಮನೆಯವರಿಂದಲೂ 'ಮೋಸ', ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಒಂದೇ ಮತ!

ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈರೋಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಎಂಬುವವರು ಕೇವಲ ಒಂದು ಮತ ಪಡೆದಿದ್ದಾರೆ. ತಮ್ಮ ಕುಟುಂಬದವರು ಮತ್ತು ಸ್ನೇಹಿತರೇ ಮತ ಹಾಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ನಾಯಕರು ಕೂಡ ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ತಮಿಳುನಾಡು ಚುನಾವಣೆ: ಮನೆಯವರಿಂದಲೂ 'ಮೋಸ', ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಒಂದೇ ಮತ!
Linkup
ಒಂದೆಡೆ ತಮಿಳುನಾಡಿನಲ್ಲಿ ತಮ್ಮ ಮತ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದರೆ, ಈರೋಡ್‌ನ ಭವಾನಿಸಾಗರ್ 11ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ ಒಂದು ಮತ ಪಡೆದು ಮುಖಭಂಗ ಅನುಭವಿಸಿದ್ದಾರೆ. ಮತ ಎಣಿಕೆ ಪೂರ್ಣಗೊಂಡಾಗ ತಮ್ಮ ಮತದ ಹೊರತು ಯಾರೊಬ್ಬರೂ ತಮಗೆ ಮತ ಚಲಾಯಿಸಿಲ್ಲ ಎನ್ನುವುದು ಬಿಜೆಪಿ ಅಭ್ಯರ್ಥಿ ನರೇಂದ್ರನ್ ಅವರಿಗೆ ಗೊತ್ತಾಗಿದೆ. ಅವರ ಕುಟುಂಬದವರು, ಸ್ನೇಹಿತರು ಹಾಗೂ ಅವರ ಜತೆಗೆ ಪ್ರಚಾರ ಕಾರ್ಯ ನಡೆಸಿದ್ದ ಬಿಜೆಪಿ ಅಭ್ಯರ್ಥಿಗಳು ಕೂಡ ಅವರಿಗೆ ಮತ ಹಾಕಿಲ್ಲ. ಚಲಾವಣೆಯಾದ 162 ಮತಗಳಲ್ಲಿ 84 ಮತಗಳನ್ನು ಪಡೆದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. "ನನ್ನ ಕುಟುಂಬದ ಸದಸ್ಯರು, ನನ್ನ ಸ್ನೇಹಿತರು ಮತ್ತು ಪಕ್ಷದ ಕಾರ್ಯಕರ್ತರು ಕೂಡ ನನಗೆ ಮತ ಹಾಕಿಲ್ಲ. ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಪ್ರತಿಯೊಬ್ಬರೂ ನನಗೆ ಮೋಸ ಮಾಡಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ. ಫಲಿತಾಂಶದ ವಿವರರಾಜ್ಯದ ಎಲ್ಲ ಪಾಲಿಕೆ, ಪುರಸಭೆಗಳಲ್ಲಿಯೂ ಡಿಎಂಕೆ ಅಧಿಕಾರಕ್ಕೆ ಬಂದಿದೆ. ಚೆನ್ನೈ ಪಾಲಿಕೆಯ 200 ಸೀಟುಗಳಲ್ಲಿ ಡಿಎಂಕೆ 153ರಲ್ಲಿ ಗೆದ್ದಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆ ಶೇ 75ರಷ್ಟು ಮತಗಳನ್ನು ಪಡೆದಿದೆ. 100 ವಾರ್ಡ್‌ಗಳ ಕೊಯಮತ್ತೂರು ಪಾಲಿಕೆಯಲ್ಲಿ 51 ಸೀಟುಗಳನ್ನು ಪಡೆದು ಸಂಪೂರ್ಣ ಬಹುಮತ ಗಳಿಸಿದೆ. ಡಿಎಂಕೆ ಮಿತ್ರಪಕ್ಷಗಳಲ್ಲಿ ಕಾಂಗ್ರೆಸ್ 73 ಪಾಲಿಕೆ ಸೀಟುಗಳು, 151 ಪುರಸಭೆ ವಾರ್ಡ್‌ಗಳು ಮತ್ತು 368 ಪಟ್ಟಣ ಪಂಚಾಯತಿಗಳಲ್ಲಿ ಗೆದ್ದಿದೆ. ಬಿಜೆಪಿ 22 ಪಾಲಿಕೆ ಸೀಟುಗಳು, 56 ಪುರಸಭೆ ಹಾಗೂ 230 ಪಟ್ಟಣ ಪಂಚಾಯತ್ ಸೀಟುಗಳಲ್ಲಿ ಗೆಲುವು ಕಂಡಿದೆ. 1,374 ಪಾಲಿಕೆ ವಾರ್ಡ್‌ಗಳ ಪೈಕಿ, ಡಿಎಂಕೆ 946ರಲ್ಲಿ ಗೆದ್ದಿದೆ. ಮುಖ್ಯ ವಿರೋಧ ಪಕ್ಷ ಎಐಡಿಎಂಕೆ 164ರಲ್ಲಿ ಜಯ ಕಂಡಿದೆ. ಸಿಪಿಐಎಂ 24 ಮತ್ತು ಬಿಜೆಪಿ 22 ಸೀಟುಗಳಲ್ಲಿ ಜಯಗಳಿಸಿವೆ. ಪುರಸಭೆಗಳಲ್ಲಿ 3,843 ವಾರ್ಡ್ ಸದಸ್ಯ ಸೀಟುಗಳಲ್ಲಿ ಡಿಎಂಕೆ 2,360 ಕಡೆ ಗೆಲುವು ದಾಖಲಿಸಿದೆ. ಎಐಎಡಿಎಂಕೆ 638, ಸಿಪಿಐ 19, ಸಿಪಿಎಂ 41, ಬಿಜೆಪಿ 56, ಡಿಎಂಡಿಕೆ 12 ಕಡೆ ಗೆಲುವು ಕಂಡಿವೆ. 7,621 ಪಟ್ಟಣ ಪಂಚಾಯತಿಗಳಲ್ಲಿ ಡಿಎಂಕೆ 4,388, ಎಐಎಡಿಎಂಕೆ 1,206, ಬಿಜೆಪಿ 230, ಸಿಪಿಎಂ 101 ಮತ್ತು ಸಿಪಿಐ 26 ಸೀಟುಗಳಲ್ಲಿ ಜಯಗಳಿಸಿವೆ.