ಪ್ರಧಾನಿ ಮೋದಿ ಸಭೆಯಲ್ಲಿ ಪಾಲ್ಗೊಳ್ಳದ ಮಮತಾ ಬ್ಯಾನರ್ಜಿ, ಮತ್ತೆ ಕೇಂದ್ರಕ್ಕೆ ಸಡ್ಡು

ಯಾಸ್‌ ಚಂಡಮಾರುತದಿಂದ ಸಂಭವಿಸಿದ ಅನಾಹುತದ ಮಾಹಿತಿ ಪಡೆಯಲು ಪ್ರಧಾನಿ ಮೋದಿ ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ ನಡೆಸಿದ ಸಭೆಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರ ಉಳಿದಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿ ಸಭೆಯಲ್ಲಿ ಪಾಲ್ಗೊಳ್ಳದ ಮಮತಾ ಬ್ಯಾನರ್ಜಿ, ಮತ್ತೆ ಕೇಂದ್ರಕ್ಕೆ ಸಡ್ಡು
Linkup
ಕೋಲ್ಕೊತಾ: ಚಂಡಮಾರುತದಿಂದ ಸಂಭವಿಸಿದ ಅನಾಹುತದ ಮಾಹಿತಿ ಪಡೆಯಲು ಪ್ರಧಾನಿ ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ನಡೆಸಿದ ಸಭೆಯಿಂದ ಮುಖ್ಯಮಂತ್ರಿ ದೂರ ಉಳಿದರು. ಇದು ಕೇಂದ್ರ ಮತ್ತು ರಾಜ್ಯದ ನಡುವೆ ಮತ್ತೊಂದು ಸುತ್ತಿನ ತೀವ್ರ ಮುಸುಕಿನ ಗುದ್ದಾಟಕ್ಕೆ ನಾಂದಿ ಹಾಡಿದೆ. ಆದರೆ, ಸಭೆಗೂ ಮುನ್ನ ಪ್ರಧಾನಿಯವರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ 20 ಸಾವಿರ ಕೋಟಿ ರೂ. ನೆರವಿಗೆ ಮನವಿ ಸಲ್ಲಿಸಿದರು. ಪ್ರಧಾನಿ ಸಭೆಯಲ್ಲಿ ರಾಜ್ಯಪಾಲ ಜಗದೀಪ್‌ ಧನ್‌ಕರ್‌, ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳದ ಸಚಿವ ಸೋಮನ್‌ ಮಹಾಪಾತ್ರ ಭಾಗವಹಿಸಿದ್ದರು. ಪ್ರಧಾನಿ ಭೇಟಿ ದಿನವೇ ತಾವೂ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಮಮತಾ, ಸಭೆಯಿಂದ ದೂರ ಉಳಿಯಲೂ ಅದೇ ಕಾರಣ ನೀಡಿದರು. ಸಾವಿರ ಕೋಟಿ ಘೋಷಣೆತುರ್ತು ಪರಿಹಾರವಾಗಿ ಒಡಿಶಾ, ಮತ್ತು ಜಾರ್ಖಂಡ್‌ಗೆ ಪ್ರಧಾನಿ ನರೇಂದ್ರ ಮೋದಿ 1,000 ಕೋಟಿ ರೂ. ಪ್ಯಾಕೇಜ್‌ ಘೋಷಿಸಿದ್ದಾರೆ. ಈ ಪೈಕಿ 500 ಕೋಟಿ ರೂ. ಒಡಿಶಾಗೆ ಸಿಗಲಿದೆ. ಕೇಂದ್ರ ಸರಕಾರವು ಈ ಮೂರು ರಾಜ್ಯಗಳಿಗೆ ಸಚಿವರ ತಂಡವೊಂದನ್ನು ಕಳುಹಿಸಿ ಚಂಡಮಾರುತದಿಂದ ಉಂಟಾಗಿರುವ ನಷ್ಟದ ಪರಿಶೀಲನೆ ನಡೆಸಲಿದೆ. ಅವರ ವರದಿ ಆಧರಿಸಿ ಪರಿಹಾರ ಹಂಚಿಕೆಯಾಗಲಿದೆ. ಮೃತರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರವನ್ನೂ ಪ್ರಧಾನಿ ಘೋಷಿಸಿದ್ದಾರೆ. ಒಡಿಶಾ, ಪಶ್ಚಿಮ ಬಂಗಾಳಗಳಲ್ಲಿ ಮೋದಿ ಪ್ರವಾಹಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಮುಖ್ಯ ಕಾರ್ಯದರ್ಶಿಯನ್ನು ವಾಪಸ್‌ ಕರೆಸಿಕೊಂಡ ಕೇಂದ್ರ ಪ್ರಧಾನಿ ಜತೆಗಿನ ಸಭೆಗೆ ದೀದಿ ಗೈರು ಹಾಜರಾದ ಬೆನ್ನಲ್ಲೇ ಕೇಂದ್ರ ಸರಕಾರ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯನ್ನು ಕೇಂದ್ರ ಸೇವೆಗೆ ಕರೆಸಿಕೊಂಡಿದೆ. ಈ ಕುರಿತು ಆದೇಶವನ್ನೂ ಹೊರಡಿಸಿದೆ. ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಆಲಾಪನ್‌ ಬಂಡೋಪಧ್ಯಾಯ ಅವರ ಅಧಿಕಾರವಧಿಯನ್ನು ಇತ್ತೀಚೆಗೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿತ್ತು. ಇದೀಗ ಅವರನ್ನು ಕೇಂದ್ರಕ್ಕೆ ಕರೆಸಿಕೊಳ್ಳು ಒಕ್ಕೂಟ ಸರಕಾರ ನಿರ್ಧರಿಸಿದೆ. ಅವರನ್ನು ಮೇ 31ರ ಬೆಳಿಗ್ಗೆ ದಿಲ್ಲಿಯಲ್ಲಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗ ಕಳುಹಿಸುವಂತೆ ಕೇಂದ್ರ ಸರಕಾರ ಪಶ್ಚಿಮ ಬಂಗಾಳ ಸರಕಾರಕ್ಕೆ ಆದೇಶಿಸಿದೆ.