ನಾವು ಯಾವುದೇ ಸಮುದಾಯದ ವಿರುದ್ಧ ಇಲ್ಲ; ಪಟಾಕಿ ನಿಷೇಧ ಸಂಪೂರ್ಣ ಜಾರಿಗೆ ಸುಪ್ರೀಂ ಅಭಿಮತ

ಸುಪ್ರೀಂ ಕೋರ್ಟ್‌ ಒಂದು ಸಮುದಾಯದ ವಿರುದ್ಧವಾಗಿದೆ ಎಂಬ ಅಭಿಪ್ರಾಯ ಮೂಡಿಸಲಾಗುತ್ತಿದೆ. ನಾವು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ಇಲ್ಲ. ಸಾರ್ವಜನಿಕರ ಹಿತ ಗಮನದಲ್ಲಿ ಇಟ್ಟುಕೊಂಡು ಪಟಾಕಿ ನಿಷೇಧಿಸಲಾಗಿದೆ. ಪಟಾಕಿಯಿಂದ ಉಂಟಾಗುವ ಮಾಲಿನ್ಯದಿಂದ ದಿಲ್ಲಿಯ ಜನ ಯಾವ ರೀತಿ ತೊಂದರೆ ಅನುಭವಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಯಾವ ಕಾರಣಕ್ಕಾಗಿ ಪಟಾಕಿ ನಿಷೇಧಿಸಲಾಗಿದೆ ಎನ್ನುವುದನ್ನು ತೀರ್ಪಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ’ ಎಂದೂ ನ್ಯಾಯಪೀಠ ಹೇಳಿತು.

ನಾವು ಯಾವುದೇ ಸಮುದಾಯದ ವಿರುದ್ಧ ಇಲ್ಲ; ಪಟಾಕಿ ನಿಷೇಧ ಸಂಪೂರ್ಣ ಜಾರಿಗೆ ಸುಪ್ರೀಂ ಅಭಿಮತ
Linkup
ಹೊಸದಿಲ್ಲಿ: ಪಟಾಕಿ ನಿಷೇಧದ ಬಳಿಕ ಸುಪ್ರೀಂ ಕೋರ್ಟ್‌ ಒಂದು ಸಮುದಾಯದ ವಿರುದ್ಧ ಇದೆ ಎಂಬ ಭಾವನೆ ಮೂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು, ಸಂಬಂಧ ನೀಡಿರುವ ತೀರ್ಪು ಸಂಪೂರ್ಣವಾಗಿ ಜಾರಿಯಾಗಬೇಕು ಎಂದು ಹೇಳಿದೆ. ಪಟಾಕಿ ಉತ್ಪಾದಕರು ಪಟಾಕಿ ನಿಷೇಧ ತೀರ್ಪಿನ ವಿರುದ್ಧ ಸಲ್ಲಿಸಿರುವ ತೀರ್ಪಿನ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಎ.ಎಸ್‌.ಬೋಪಣ್ಣ ಅವರಿದ್ದ ಪೀಠವು ಗುರುವಾರ ನಡೆಸಿತು. ‘ನಿಮ್ಮ (ಪಟಾಕಿ ತಯಾರಕರು) ಆನಂದಕ್ಕಾಗಿ ದೇಶದ ಪ್ರಜೆಗಳ ಪ್ರಾಣದ ಜತೆ ಚೆಲ್ಲಾಟವಾಡಲು ಸಾಧ್ಯವಿಲ್ಲ. ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನಾವು ಇಲ್ಲಿ ಇದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ನೀಡಲು ಬಯಸುತ್ತೇವೆ’ ಎಂದು ನ್ಯಾಯಪೀಠ ಹೇಳಿತು. ‘ಅಷ್ಟಕ್ಕೂ ನಾವು ಎಲ್ಲಾ ಬಗೆಯ ಪಟಾಕಿಗಳನ್ನೂ ನಿಷೇಧಿಸಿಲ್ಲ. ಆದರೂ ಸುಪ್ರೀಂ ಕೋರ್ಟ್‌ ಒಂದು ಸಮುದಾಯದ ವಿರುದ್ಧವಾಗಿದೆ ಎಂಬ ಅಭಿಪ್ರಾಯ ಮೂಡಿಸಲಾಗುತ್ತಿದೆ. ನಾವು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ಇಲ್ಲ. ಸಾರ್ವಜನಿಕರ ಹಿತ ಗಮನದಲ್ಲಿ ಇಟ್ಟುಕೊಂಡು ಪಟಾಕಿ ನಿಷೇಧಿಸಲಾಗಿದೆ. ಪಟಾಕಿಯಿಂದ ಉಂಟಾಗುವ ಮಾಲಿನ್ಯದಿಂದ ದಿಲ್ಲಿಯ ಜನ ಯಾವ ರೀತಿ ತೊಂದರೆ ಅನುಭವಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಯಾವ ಕಾರಣಕ್ಕಾಗಿ ಪಟಾಕಿ ನಿಷೇಧಿಸಲಾಗಿದೆ ಎನ್ನುವುದನ್ನು ತೀರ್ಪಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ’ ಎಂದೂ ನ್ಯಾಯಪೀಠ ಹೇಳಿತು. ಪಟಾಕಿ ನಿಷೇಧ ಸಂಬಂಧ ಈ ಹಿಂದೆ ನೀಡಿರುವ ತೀಪು ಜಾರಿಯಾಗದಿರುವ ಬಗ್ಗೆಯೂ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ಕೆಲವು ನಿರ್ದಿಷ್ಟ ಪಟಾಕಿಗಳನ್ನು ನಿಷೇಧಿಸಲಾಗಿದೆ. ಆದರೆ ಈಗಲೂ ಎಲ್ಲ ಬಗೆಯ ಪಟಾಕಿಗಳು ಮಾರುಕಟ್ಟೆಗಳಲ್ಲಿ ಮುಕ್ತವಾಗಿ ಸಿಗುತ್ತಿವೆ. ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವ ವಿಚಾರವಾಗಿ ಸಂಬಂಂಧಿಸಿದ ಪ್ರಾಧಿಕಾರಗಳಿಗೆ ಹೊಣೆಗಾರಿಕೆ ನಿಗದಿಪಡಿಸುವ ಅಗತ್ಯವಿದೆ’ ಎಂದು ನ್ಯಾಯಪೀಠ ಹೇಳಿತು. ಅತಿ ಸದ್ದು ಮಾಡುವ ಹಾಗೂ ರಾಸಾಯನಿಕಗಳಿಂದ ಕೂಡಿರುವ ಮಾಲಿನ್ಯಕಾರಕ ಪಟಾಕಿಗಳನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟವನ್ನೂ ನಿಷೇಧಿಸಿದೆ. ಅನೇಕ ರಾಜ್ಯಗಳು ಹಸಿರು ಪಟಾಕಿ ಬಳಕೆ ಉತ್ತೇಜನ ನೀಡಲು ಮುಂದಾಗಿವೆ. ದೀಪಾವಳಿ ಸಮಯದಲ್ಲಿ ದೇಶದಲ್ಲಿ ಅತೀ ದೊಡ್ಡ ಮಟ್ಟದಲ್ಲಿ ಪಟಾಕಿ ಸುಡುವ ಕ್ರಮ ಪ್ರತಿವರ್ಷ ಇದ್ದು, ಇದರಿಂದ ದಿಲ್ಲಿ, ಕೋಲ್ಕತ್ತಾ, ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲಿ ಪರಿಸರ ಮಾಲಿನ್ಯ ಉಂಟಾಗಿ ಜನರ ಆರೋಗ್ಯದಲ್ಲಿ ಏರುಪೇರಾದ ಘಟನೆಗಳೂ ವರದಿಯಾಗಿದೆ.