ಚೆನ್ನೈ: ಕರ್ನಾಟಕದಲ್ಲಿ ಹುಟ್ಟಿಕೊಂಡಿರುವ ದೇಶಾದ್ಯಂತ ಚರ್ಚೆಯಾಗುತ್ತಿದೆ. ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವ ಚಟುವಟಿಕೆಗಳು ಆತಂಕವನ್ನು ಹೆಚ್ಚಿಸುತ್ತಿದೆ. ಈ ನಡುವೆ ತಮಿಳುನಾಡಿನ , ದೇಶ ಅಥವಾ ಧರ್ಮದ ನಡುವೆ ಅತ್ಯಂತ ಮುಖ್ಯವಾಗಿರುವುದು ಯಾವುದು? ಎಂಬ ಮಹತ್ವದ ಪ್ರಶ್ನೆಯೊಂದನ್ನು ಗುರುವಾರ ಕೇಳಿದೆ.
ಕರ್ನಾಟಕದಲ್ಲಿ ತರಗತಿಗಳಿಗೆ ಹಿಜಾಬ್ ಹಾಕಿಕೊಂಡು ಬರುವುದು ತಮ್ಮ ಮೂಲಭೂತ ಧಾರ್ಮಿಕ ಹಕ್ಕು ಎಂದು ಮುಸ್ಲಿಂ ಸಮುದಾಯ ವಾದಿಸುತ್ತಿದ್ದರೆ, ಇದು ಸಮವಸ್ತ್ರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಮತ್ತೊಂದು ಗುಂಪು ವಿರೋಧ ವ್ಯಕ್ತಪಡಿಸುತ್ತಿದೆ. ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಕೆಲವು ಶಕ್ತಿಗಳು ವಿವಾದಗಳನ್ನು ಹುಟ್ಟು ಹಾಕಿವೆ ಮತ್ತು ಅದನ್ನು ದೇಶದ ಎಲ್ಲಾ ಕಡೆ ಹರಡುತ್ತಿವೆ ಎಂದು ಮದ್ರಾಸ್ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂಎನ್ ಭಂಡಾರಿ ಮತ್ತು ನ್ಯಾಯಮೂರ್ತಿ ಭರತ ಚಕ್ರವರ್ತಿ ಅವರ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
"ಇದು ನಿಜಕ್ಕೂ ಆಘಾತಕಾರಿ. ಕೆಲವರು ಹಿಜಾಬ್ ಪರವಾಗಿ ವಾದಿಸುತ್ತಿದ್ದರೆ, ಇನ್ನು ಕೆಲವು ಟೊಪ್ಪಿ ಪರವಾಗಿದ್ದಾರೆ. ಮತ್ತೆ ಇನ್ನು ಕೆಲವರು ಬೇರೆ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದಾರೆ. ಇದು ಒಂದು ದೇಶವೇ ಅಥವಾ ಧರ್ಮ ಅಥವಾ ಅದರಂತಹ ಇತರೆ ವಿಚಾರಗಳಿಂದ ವಿಭಜನೆಯಾಗಿದೆಯೇ? ಇದು ಬಹಳ ಅಚ್ಚರಿ ಉಂಟುಮಾಡುತ್ತಿದೆ" ಎಂದು ಪೀಠ ಹೇಳಿದೆ.
ಭಾರತ ಒಂದು ಜಾತ್ಯತೀಯ ದೇಶ ಎಂಬ ಅಂಶವನ್ನು ಉಲ್ಲೇಖಿಸಿದ ಎಸಿಜೆ ಭಂಡಾರಿ, "ಪ್ರಸ್ತುತ ಕಾಣಿಸುತ್ತಿರುವ ಚಟುವಟಿಕೆಗಳು ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡುವ ಪ್ರಯತ್ನದ ಹೊರತಾಗಿ ಬೇರೆ ಏನೂ ಅಲ್ಲ" ಎಂದು ಬೇಸರ ವ್ಯಕ್ತಪಡಿಸಿದರು. ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಂನ ರಂಗರಾಜನ್ ನರಸಿಂಹನ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಎಸಿಜೆ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗುರುವಾರ ಸಲ್ಲಿಸಿರುವ ಪಿಐಎಲ್ನಲ್ಲಿ ರಂಗರಾಜನ್ ಅವರು, ಭಕ್ತರಿಗೆ ವಸ್ತ್ರ ಸಂಹಿತೆಯ ಕಟ್ಟುನಿಟ್ಟಾದ ಜಾರಿಗೆ, ರಾಜ್ಯಾದ್ಯಂತ ಇರುವ ದೇವಸ್ಥಾನಗಳಿಗೆ ಹಿಂದೂಯೇತರರು ಪ್ರವೇಶಿಸಲು ಅವಕಾಶ ನೀಡದೆ ಇರುವುದು ಮತ್ತು ದೇವಸ್ಥಾನದ ಆವರಣದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸುವಂತೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದಾರೆ.
ದೇವಸ್ಥಾನಗಳ ಪ್ರವೇಶ ದ್ವಾರದಲ್ಲಿ ಫಲಕಗಳನ್ನು ಅಳವಡಿಸಿಬೇಕಿದ್ದು, ಅದರಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ಮತ್ತು ವಸ್ತ್ರ ಸಂಹಿತೆಯನ್ನು ಸೂಚಿಸುವ ಸೂಚನೆಗಳನ್ನು ಸಮರ್ಪಕವಾಗಿ ಪ್ರದರ್ಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೇವಸ್ಥಾನಗಳಿಗೆ ಪ್ರವೇಶಿಸಲು ಯಾವುದೇ ಇಲ್ಲದೆ ಇರುವಾಗ ಪ್ರದರ್ಶನ ಫಲಕಗಳನ್ನು ಅಳವಡಿಸುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ಪೀಠ ಪ್ರಶ್ನಿಸಿತು. ಅರ್ಜಿದಾರರು ಆದೇಶಕ್ಕೆ ಒತ್ತಾಯಿಸಿದಾಗ, ತಮ್ಮ ಮನವಿಗೆ ಪೂರಕವಾದ ಪುರಾವೆಗಳನ್ನು ಹಾಜರುಪಡಿಸುವಂತೆ ಪೀಠ ಸಲಹೆ ನೀಡಿತು. ಪ್ಯಾಂಟ್, ಪಂಚೆ ಹಾಗೂ ಅಂಗಿ ಧರಿಸುವುದರ ಕುರಿತು ಆಗಮಗಳ ಯಾವ ಭಾಗ ಉಲ್ಲೇಖಿಸಿದೆ ಎಂದು ಕೇಳಿತು.
ಅರ್ಜಿದಾರರ ಮೊಂಡು ವಾದಗಳಿಂದ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು, ಕೋರ್ಟ್ಗೆ ವೈಯಕ್ತಿವಾಗಿ ಹಾಜರಾಗುವುದರಿಂದ ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು. ನ್ಯಾಯಾಲಯದಲ್ಲಿ ಜಗಳವಾಡದಂತೆ ಮತ್ತು ಸೂಕ್ತ ಪದಗಳನ್ನು ಬಳಕೆ ಮಾಡದಂತೆ ನಿರ್ದೇಶನ ನೀಡಿತು.
ಪ್ರತಿ ದೇವಸ್ಥಾನವೂ ತನ್ನದೇ ಆದ ಸಂಪ್ರದಾಯ ಮತ್ತು ನಿಯಮಗಳನ್ನು ಪಾಲಿಸುತ್ತಿವೆ. ಇತರೆ ಧರ್ಮಗಳಿಗೆ ಸೇರಿದ ಸಂದರ್ಶಕರು ಧ್ವಜ ಸ್ತಂಭದವರೆಗೆ ಬರಲು ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದು ತಮಿಳುನಾಡು ಅಡ್ವೊಕೇಟ್ ಜನರಲ್ ಆರ್ ಷಣ್ಮುಗಸುಂದರಂ ಕೋರ್ಟ್ಗೆ ತಿಳಿಸಿದರು.
ಏಕ ಸದಸ್ಯ ಪೀಠವು ವಸ್ತ್ರ ಸಂಹಿತೆ ಸೂಚಿಸ ನೀಡಿದ್ದ ಆದೇಶವು ರಿಟ್ ಅರ್ಜಿಯ ವ್ಯಾಪ್ತಿಯನ್ನು ಮೀರಿದೆ ಎಂಬ ಕಾರಣಕ್ಕೆ ಈ ಹಿಂದೆಯೇ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ಪಕ್ಕಕ್ಕಿರಿಸಿದೆ. ಇದು ವ್ಯಾಪಕ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿತ್ತು ಎಂದು ಅವರು ನೆನಪಿಸಿದರು. ಅಂತಿಮವಾಗಿ ನ್ಯಾಯಪೀಠವು ವಸ್ತ್ರ ಸಂಹಿತೆಯ ಪರಿಕಲ್ಪನೆಗಳೊಂದಿಗೆ ಅಫಿಡವಿಟ್ ಸಲ್ಲಿಸಲು ಅರ್ಜಿದಾರರಿಗೆ ಅನುಮತಿ ನೀಡಿತು.