ದೇಶದಲ್ಲಿ ತೃತೀಯ ರಂಗ ರಚನೆ ? : ಉದ್ದವ್ ಠಾಕ್ರೆ - ಕೆಸಿಆರ್ ನಡುವೆ ಮಹತ್ವದ ಚರ್ಚೆ!

ಮಹಾರಾಷ್ಟ್ರ ಸಿಎಂ ಸಿಎಂ ಉದ್ಧವ್‌ ಠಾಕ್ರೆ ಅವರನ್ನು ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಭೇಟಿ ಮಾಡಿದ್ದಾರೆ. ಈ ಮೂಲಕ ಮತ್ತೆ ತೃತೀಯ ರಂಗದ ವಿಚಾರ ಮುನ್ನೆಲೆಗೆ ಬಂದಿದೆ. ಉಭಯ ನಾಯಕರು ತೃತೀಯ ರಂಗಕ್ಕೆ ಬಲ ತುಂಬುವ ಕಾರ್ಯತಂತ್ರ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.

ದೇಶದಲ್ಲಿ ತೃತೀಯ ರಂಗ ರಚನೆ ? : ಉದ್ದವ್ ಠಾಕ್ರೆ - ಕೆಸಿಆರ್ ನಡುವೆ ಮಹತ್ವದ ಚರ್ಚೆ!
Linkup
ಮುಂಬಯಿ: ದೇಶದಲ್ಲಿ ಕಾಂಗ್ರೆಸ್‌-ಬಿಜೆಪಿಗೆ ವಿರುದ್ಧವಾಗಿ ರಚನೆ ಸಾಹಸದ ನೇತೃತ್ವ ವಹಿಸಿರುವ ತೆಲಂಗಾಣ ಸಿಎಂ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಅಧ್ಯಕ್ಷ ಕೆ. ಅವರು ಭಾನುವಾರ ಮುಂಬಯಿಗೆ ಭೇಟಿ ನೀಡಿ ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಜತೆಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಸಿಎಂ ಠಾಕ್ರೆ ಅವರ ಅಧಿಕೃತ ನಿವಾಸ 'ವರ್ಷಾ' ದಲ್ಲಿ ಕೆಸಿಆರ್‌-ಠಾಕ್ರೆ ನಡುವೆ ತೃತೀಯ ರಂಗಕ್ಕೆ ಬಲ ತುಂಬುವ ಕಾರ್ಯತಂತ್ರ ಕುರಿತು ಮಹತ್ವದ ಮಾತುಕತೆ ನಡೆದಿದೆ. ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿಉದ್ಧವ್‌ ಠಾಕ್ರೆ ಅವರು, '' ಹಿಂದುತ್ವ ಎಂದರೆ ದ್ವೇಷ ರಾಜಕಾರಣ ಅಲ್ಲ. ತಮ್ಮ ಅಜೆಂಡಾಗಳ ಸಾಧನೆಗಾಗಿ ಹಿಂದುತ್ವ ಬಳಸಿಕೊಳ್ಳುತ್ತಿರುವವರೇ ಹೆಚ್ಚಾಗಿದ್ದಾರೆ. ಅವರಿಗೆ ದೇಶ ಸೇವೆ ಎನ್ನುವುದು ಕೇವಲ ಮುಖವಾಡ ಅಷ್ಟೇ,'' ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಮಾತನಾಡಿದ ಸಿಎಂ ಕೆಸಿಆರ್‌, '' 1 ಸಾವಿರ ಕಿ.ಮೀ. ಗಡಿ ಹಂಚಿಕೊಳ್ಳುವ ಮಹಾರಾಷ್ಟ್ರ-ತೆಲಂಗಾಣ ನಡುವೆ ಸೋದರ ಭಾವವಿದೆ. ಸದ್ಯ ದೇಶವನ್ನು ನಡೆಸಲಾಗುತ್ತಿರುವ ರೀತಿ ಸರಿ ಇಲ್ಲ. ಭಾರಿ ಬದಲಾವಣೆ ಬೇಕಿದೆ ಎಂದು ಚರ್ಚೆಯಲ್ಲಿ ನಿರ್ಣಯಿಸಲಾಯಿತು,'' ಎಂದಿದ್ದಾರೆ. ಶಿವಸೇನೆ ಸಂಸದ ಸಂಜಯ್‌ ರಾವತ್‌, ನಟ ಪ್ರಕಾಶ್‌ ರಾಜ್‌, ಕೆಸಿಆರ್‌ ಪುತ್ರಿ ಹಾಗೂ ಎಂಎಲ್‌ಸಿ ಕವಿತಾ ಕಲ್ವ ಕುಂಟ್ಲಾಅವರು ಉಭಯ ನಾಯಕರ ನಡುವಿನ ಮಾತುಕತೆ ವೇಳೆ ಉಪಸ್ಥಿತರಿದ್ದರು.ಇದೇ ವೇಳೆ ನೀರಾವರಿ ಯೋಜನೆಗಳಾದ ಬಭ್ಲಿಡ್ಯಾಂ, ತುಮ್ಮಿದ್‌ ಹಟ್ಟಿ, ಮೆದಿಗಡ್ಡಾ ಏತ ನೀರಾವರಿ ಕುರಿತು ಕೂಡ ಉಭಯ ಸಿಎಂಗಳು ಚರ್ಚಿಸಿದರು. ಸಮಾನ ಮನಸ್ಕರಾದ ಎಲ್ಲರಾಜಕೀಯ ನಾಯಕರನ್ನು ಭೇಟಿ ಮಾಡುವೆ. ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಅವರ ಜತೆಗೂ ಚರ್ಚಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರು ಹೈದರಾಬಾದ್‌ ಅಥವಾ ಇತರ ನಗರದಲ್ಲಿಬೃಹತ್‌ ಸಭೆ ಆಯೋಜಿಸಲಿದ್ದೇವೆ. - ಕೆ.ಚಂದ್ರಶೇಖರ್‌ ರಾವ್‌, ತೆಲಂಗಾಣ ಸಿಎಂ ಬಿಜೆಪಿ ವಿರುದ್ಧ ರಚನೆಯಾದ ಮಹಾವಿಕಾಸ್‌ ಅಘಾಡಿ ನೇತೃತ್ವದ ಸರಕಾರ ಯಶಸ್ವಿಯಾಗಿದೆ. ನಮಗೆ ಛತ್ರಪತಿ ಶಿವಾಜಿ ಮಹಾರಾಜ್‌ ಮತ್ತು ಬಾಳಾಸಾಹೇಬ್‌ ಠಾಕ್ರೆ ಅವರ ದಿಟ್ಟತನವೇ ಆದರ್ಶ. ಇವತ್ತಿನ ಭೇಟಿ ಭವಿಷ್ಯದಲ್ಲಿ ಮಹತ್ತರ ಫಲ ನೀಡಲಿದೆ. - ಸಿಎಂ ಉದ್ಧವ್‌ ಠಾಕ್ರೆ, ಮಹಾರಾಷ್ಟ್ರ ಸಿಎಂ