ದುಬೈ ಎಕ್ಸ್‌ಪೋ ಪ್ರವಾಸ ಯಶಸ್ವಿಯಾಗಿದೆ - ಮುರುಗೇಶ್ ನಿರಾಣಿ

ಅಕ್ಟೋಬರ್ 16 ರಂದು ದುಬೈ ಎಕ್ಸ್‌ಪೋಗೆ 12 ಜನ ಅಧಿಕಾರಿಗಳ ತಂಡದ ಜೊತೆಗೆ ತೆರಳಿದ್ದೆವು .‌ ಮೂರು ದಿನಗಳ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ.

ದುಬೈ ಎಕ್ಸ್‌ಪೋ ಪ್ರವಾಸ ಯಶಸ್ವಿಯಾಗಿದೆ - ಮುರುಗೇಶ್ ನಿರಾಣಿ
Linkup
ಬೆಂಗಳೂರು: ' - 2020' (ಕೊರೊನಾ ಕಾರಣದಿಂದ 2021ರಲ್ಲಿ ನಡೆದಿತ್ತು)ರ ಮೂರು ದಿನಗಳ ಪ್ರವಾಸ ಯಶಸ್ವಿಯಾಗಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 16 ರಂದು ಎಕ್ಸ್‌ಪೋಗೆ 12 ಜನ ಅಧಿಕಾರಿಗಳ ತಂಡದ ಜೊತೆ ತೆರಳಿದ್ದೆವು .‌ ಮೂರು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು. 190ಕ್ಕೂ ಹೆಚ್ಚು ದೇಶಗಳು ಈ ಎಕ್ಸ್‌ಪೋದಲ್ಲಿ ಭಾಗಿಯಾಗಿದ್ದವು. ಎಕ್ಸ್‌ಪೋದಲ್ಲಿ ಇಂಡಿಯಾ ಪೆವಿಲಿಯನ್‌ನಲ್ಲಿ ಭಾರತದ ಸಂಸ್ಕೃತಿಯ ಅನಾವರಣ ಮಾಡಲಾಗಿದೆ. ದುಬೈ ಎಕ್ಸ್‌ಪೋಗೆ ನಿತ್ಯ ನಾಲ್ಕರಿಂದ ಐದು ಲಕ್ಷ ಜನ ಬರುತ್ತಾರೆ. ಎಕ್ಸ್‌ಪೋದಲ್ಲಿ ದುಬೈ ಇಸ್ಲಾಮಿಕ್ ಇನ್ವೆಸ್ಟರ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರು ಬೆಂಗಳೂರಿನಲ್ಲಿ ಶೀಘ್ರದಲ್ಲೇ ಕಚೇರಿ ಆರಂಭಿಸುತ್ತಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬರಲು ಹೂಡಿಕೆದಾರಿಗೆ ಆಹ್ವಾನ ನೀಡಲಾಗಿದೆ. ಇಷ್ಟೇ ಅಲ್ಲದೆ ಅ. 19 ರಂದು ಅಬುದಾಬಿ ಬ್ಯಾಂಕ್‌ಗೆ ಭೇಟಿ ಕೊಟ್ಟಿದ್ದೆವು, ಎರಡು ಗಂಟೆಗಳ ಕಾಲ ನಿರ್ದೇಶಕರು ಹಾಗೂ ತಂಡದ ಜೊತೆ ಮಾತುಕತೆ ನಡೆಸಿದೆ ಎಂದು ತಿಳಿಸಿದರು. ಒಟ್ಟಿನಲ್ಲಿ ದುಬೈ ಪ್ರವಾಸ, ಒನ್ ಟು ಇನ್ ಮೀಟಿಂಗ್ ಎಲ್ಲವೂ ಯಶಸ್ವಿಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಉದ್ಯಮಿಯಾಗು, ಉದ್ಯೋಗ ನೀಡು ಕಾರ್ಯಕ್ರಮವೂ ಯಶಸ್ವಿಯಾಗಿದೆ. ಕಲಬುರಗಿಯಲ್ಲಿ ಕೂಡ ಇದೇ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಿದ್ದು, ಅದು ಕೂಡ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.