![](https://vijaykarnataka.com/photo/89695897/photo-89695897.jpg)
ತಿರುಪತಿ: ತಿರುಮಲ ಬೆಟ್ಟದಲ್ಲಿನ ಎಲ್ಲ ಖಾಸಗಿ ಆಹಾರ ಮಳಿಗೆಗಳು ಮತ್ತು ರೆಸ್ಟೊರೆಂಟ್ಗಳನ್ನು ಮುಚ್ಚಲು ನಿರ್ಧರಿಸಿರುವ (ಟಿಟಿಡಿ), ಭಕ್ತರಿಗೆ ದೇವಸ್ಥಾನದಿಂದಲೇ ಪೂರೈಸುವ ತೀರ್ಮಾನ ಮಾಡಿದೆ.
''ತಿರುಮಲದಲ್ಲಿನ ಪ್ರಮುಖ ಜಂಕ್ಷನ್ಗಳಲ್ಲಿ ಅನ್ನ ಪ್ರಸಾದಮ್ ಮಳಿಗೆ ಮತ್ತು ಕಿಯಾಸ್ಕ್ಗಳನ್ನು ತೆರೆಯಲು ಟಿಟಿಡಿ ಟ್ರಸ್ಟ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ದೇವಸ್ಥಾನದ ಅಡುಗೆಮನೆಯಲ್ಲಿ ತಯಾರಾದ ಪ್ರಸಾದವನ್ನೇ ಇಲ್ಲಿ ಪೂರೈಸಲಾಗುವುದು. ಇದರಿಂದ ತಿರುಮಲಕ್ಕೆ ಬರುವ ಎಲ್ಲ ಭಕ್ತರಿಗೂ, ಅಂದರೆ ಬಡವರಿಂದ ಶ್ರೀಮಂತರಿಗೆ ಎಲ್ಲರಿಗೂ ಒಂದೇ ರೀತಿಯ ಆಹಾರವು ಉಚಿತವಾಗಿ ಸಿಗಲಿದೆ,'' ಎಂದಿ ಟಿಟಿಡಿ ಟ್ರಸ್ಟ್ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
''ಖಾಸಗಿ ಆಹಾರ ಮಳಿಗೆಗಳು ಮತ್ತು ರೆಸ್ಟೊರೆಂಟ್ಗಳ ಮಾಲೀಕರಿಗೆ ನಷ್ಟ ಭರ್ತಿ ಕ್ರಮವಾಗಿ ತಿರುಮಲ ಬೆಟ್ಟದಲ್ಲಿ ಬೇರೆ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗುವುದು,'' ಎಂದು ಅವರು ಮಾಹಿತಿ ನೀಡಿದ್ದಾರೆ.
''ವೆಂಕಟೇಶ್ವರ ದೇವಸ್ಥಾನದ ಮಹಾದ್ವಾರ ಹಾಗೂ ಗೋಪುರಕ್ಕೆ ಚಿನ್ನದ ಲೇಪನ ಮಾಡುವ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನ ಕೈಗೊಳ್ಳಲು ಹಾಗೂ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ಅವರ ಸಲಹೆಯಂತೆ ಶ್ರೀ ಪದ್ಮಾವತಿ ಸೂಪರ್ ಸ್ಪೆಶಾಲಿಟಿ ಮಕ್ಕಳ ಆಸ್ಪತ್ರೆ ನಿರ್ಮಿಸಲೂ ಆಡಳಿತ ಮಂಡಳಿ ನಿರ್ಧರಿಸಿದೆ. ಆಸ್ಪತ್ರೆ ನಿರ್ಮಾಣಕ್ಕೆ 230 ಕೋಟಿ ರೂ. ವೆಚ್ಚವಾಗಲಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ,'' ಎಂದೂ ಸುಬ್ಬಾರೆಡ್ಡಿ ತಿಳಿಸಿದ್ದಾರೆ.