ಕೋವಿಡ್‌ 19: 2ನೇ ಅಲೆಗಿಂತಲೂ ಮೂರನೇ ಅಲೆಯೂ ಇನ್ನಷ್ಟು ತೀವ್ರ?, 98 ದಿನಗಳವರಗೆ ಕಾಡಲಿದೆ 3ನೇ ಅಲೆ!

ಮೂರನೇ ಅಲೆಯ ವೇಳೆ ಗಂಭೀರ ಸೋಂಕಿನ ಪ್ರಕರಣಗಳನ್ನು ಶೇ. 5ಕ್ಕೆ ಇಳಿಸಿದರೆ ಸಾವಿನ ಸಂಖ್ಯೆಯನ್ನು 40,000ಕ್ಕೆ ಇಳಿಸಬಹುದು. ಎರಡನೇ ಅಲೆಯ ವೇಳೆ ಗಂಭೀರ ಸೋಂಕಿತರ ಸಂಖ್ಯೆ 20% ಇತ್ತು ಎಂದು ವರದಿ ಹೇಳಿದೆ. ಅಲ್ಲದೇ ಮೂರನೇ ಅಲೆ ಸುಮಾರು 98 ದಿನಗಳವರೆಗೂ ಕಾಡಲಿದೆ ಎಂದು ತಜ್ಞರ ವರದಿ ಎಚ್ಚರಿಸಿದೆ.

ಕೋವಿಡ್‌ 19: 2ನೇ ಅಲೆಗಿಂತಲೂ ಮೂರನೇ ಅಲೆಯೂ ಇನ್ನಷ್ಟು ತೀವ್ರ?, 98 ದಿನಗಳವರಗೆ ಕಾಡಲಿದೆ 3ನೇ ಅಲೆ!
Linkup
ಹೊಸದಿಲ್ಲಿ: ದೇಶದಲ್ಲಿ ಕೋವಿಡ್‌ 3ನೇ ಅಲೆಯು ಎರಡನೇ ಅಲೆಯಷ್ಟೇ ತೀವ್ರವಾಗಿರಲಿದ್ದು, ಸುಮಾರು 98 ದಿನಗಳವರೆಗೂ ಕಾಡಲಿದೆ ಎಂದು ತಜ್ಞರ ವರದಿ ಎಚ್ಚರಿಸಿದೆ. ಆದರೆ, ಉತ್ತಮ ಸನ್ನದ್ಧತೆ ಹಾಗೂ ಮುನ್ನೆಚ್ಚರಿಕೆಯಿಂದ ಮೂರನೇ ಅಲೆಯಲ್ಲಿ ಸಾವಿನ ಸಂಖ್ಯೆ ಕಡಿಮೆ ಮಾಡಲು ಸಾಧ್ಯ ಎಂಬ ಸಲಹೆಯನ್ನೂ ವರದಿಯು ಮುಂದಿಟ್ಟಿದೆ. ಭಾರತದಲ್ಲಿಎರಡನೇ ಅಲೆಯು ಇಳಿಮುಖವಾಗುತ್ತಿದ್ದು, ಮೂರನೇ ಅಲೆಗೆ ಸರಕಾರಗಳು ಸಜ್ಜಾಗುತ್ತಿರುವ ನಡುವೆಯೇ ಈ ವರದಿ ಹೊರಬಿದ್ದಿದೆ. ''ಹಲವು ದೇಶಗಳಲ್ಲಿ ಮೂರನೇ ಅಲೆಯ ಸರಾಸರಿ ಅವಧಿಯು 98 ದಿನಗಳವರೆಗೂ ಇರುವುದು ಕಂಡು ಬಂದಿದೆ. 108 ದಿನಗಳ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯು ಮತ್ತಷ್ಟು ಕ್ಷಿಪ್ರವಾಗಿ ಹಬ್ಬಿ ಪೀಕ್‌ಗೆ ತಲುಪಲಿದೆ. ಮೊದಲನೇ ಅಲೆಗೆ ಹೋಲಿಸಿದರೆ ಎರಡನೇ ಅಲೆ ಸಹ ಹೆಚ್ಚಿನ ವೇಗವಾಗಿ ಉತ್ತುಂಗಕ್ಕೆ ತಲುಪಿತ್ತು,'' ಎಂದು 'ಎಸ್‌ಬಿಐ ಎಕೊವ್ರ್ಯಾಪ್‌' ವರದಿಯು ಹೇಳಿದೆ. ಭಾರತದಲ್ಲಿ ಮೇ ಒಂದೇ ತಿಂಗಳಲ್ಲಿ 90.3 ಲಕ್ಷ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದು ವಿಶ್ವದಲ್ಲೇ ಯಾವುದೇ ದೇಶದಲ್ಲಿ ವರದಿಯಾದ ಮಾಸಿಕ ಗರಿಷ್ಠ ಸಂಖ್ಯೆ ಎನಿಸಿದೆ. ಮೇ ಎರಡನೇ ವಾರದ ಬಳಿಕ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದರೂ ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳ ಸೋಂಕಿನ ಪ್ರಮಾಣ 30% ಹೆಚ್ಚಾಗಿತ್ತು. ಮೇ ಒಂದೇ ತಿಂಗಳಲ್ಲಿ 1.2 ಲಕ್ಷ ಕೋವಿಡ್‌ ಸಾವಿಗೂ ಸಾಕ್ಷಿಯಾಗಿದೆ. ಎರಡನೇ ಅಲೆಯ ವೇಳೆ ಒಟ್ಟು 1.7 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಮೂರನೇ ಅಲೆಯ ವೇಳೆ ಗಂಭೀರ ಸೋಂಕಿನ ಪ್ರಕರಣಗಳನ್ನು ಶೇ. 5ಕ್ಕೆ ಇಳಿಸಿದರೆ ಸಾವಿನ ಸಂಖ್ಯೆಯನ್ನು 40,000ಕ್ಕೆ ಇಳಿಸಬಹುದು. ಎರಡನೇ ಅಲೆಯ ವೇಳೆ ಗಂಭೀರ ಸೋಂಕಿತರ ಸಂಖ್ಯೆ 20% ಇತ್ತು ಎಂದು ವರದಿ ಹೇಳಿದೆ.