ಕಿರಣ್ ರಾಜ್ ಚಿತ್ರಕ್ಕಿಲ್ಲ ‘ಬಹದ್ದೂರ್ ಗಂಡು’ ಹೆಸರು: ಗೌರವದ್ಯೋತಕವಾಗಿ ಶೀರ್ಷಿಕೆ ಬದಲಾಯಿಸಿದ ಚಿತ್ರತಂಡ!

ಸೂಪರ್ ಹಿಟ್ ಆಗಿದ್ದ ಅಣ್ಣಾವ್ರ ಸಿನಿಮಾ ‘ಬಹದ್ದೂರ್ ಗಂಡು’ ಹೆಸರಿನಲ್ಲಿ ಒಂದು ಹೊಸ ಸಿನಿಮಾ ಮಾಡಲು ಯುವ ತಂಡ ಮುಂದಾಗಿತ್ತು. ಪ್ರಸಿದ್ಧ್ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ಬಹದ್ದೂರ್ ಗಂಡು’ ಚಿತ್ರದ ಟೀಸರ್ ಕೂಡ ಈಗಾಗಲೇ ಬಿಡುಗಡೆಯಾಗಿತ್ತು. ಇದೀಗ ತಮ್ಮ ಚಿತ್ರಕ್ಕೆ ಗೌರವದ್ಯೋತಕವಾಗಿ ಶೀರ್ಷಿಕೆಯನ್ನು ಬದಲಿಸಲು ಚಿತ್ರತಂಡ ಮುಂದಾಗಿದೆ.

ಕಿರಣ್ ರಾಜ್ ಚಿತ್ರಕ್ಕಿಲ್ಲ ‘ಬಹದ್ದೂರ್ ಗಂಡು’ ಹೆಸರು: ಗೌರವದ್ಯೋತಕವಾಗಿ ಶೀರ್ಷಿಕೆ ಬದಲಾಯಿಸಿದ ಚಿತ್ರತಂಡ!
Linkup
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡತಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿರುವ ಹರ್ಷ ಪಾತ್ರಧಾರಿ ಬೆಳ್ಳಿತೆರೆ ಮೇಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈಗಾಗಲೇ ‘ಅಸತೋಮ ಸದ್ಗಮಯ’, ‘ಜೀವ್ನಾನೇ ನಾಟ್ಕ ಸಾಮಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಕಿರಣ್ ರಾಜ್ ‘’ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ‘ಬಹದ್ದೂರ್ ಗಂಡು’... ಹೆಸರು ಕೇಳಿದ ಕೂಡಲೆ ನಿಮಗೆ , ಜಯಂತಿ, ಆರತಿ ಅಭಿನಯದ 1976ರಲ್ಲಿ ತೆರೆಕಂಡ ಸಿನಿಮಾ ನೆನಪಿಗೆ ಬರಬಹುದು. ಎ.ವಿ.ಶೇಷಗಿರಿ ರಾವ್ ನಿರ್ದೇಶನದ ‘ಬಹದ್ದೂರ್ ಗಂಡು’ ಸಿನಿಮಾ 19 ವಾರಗಳ ಕಾಲ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣ್ತು. ಸೂಪರ್ ಹಿಟ್ ಆಗಿದ್ದ ಅಣ್ಣಾವ್ರ ಸಿನಿಮಾ ‘ಬಹದ್ದೂರ್ ಗಂಡು’ ಹೆಸರಿನಲ್ಲಿ ಒಂದು ಹೊಸ ಸಿನಿಮಾ ಮಾಡಲು ಯುವ ತಂಡ ಮುಂದಾಗಿತ್ತು. ಪ್ರಸಿದ್ಧ್ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ಬಹದ್ದೂರ್ ಗಂಡು’ ಚಿತ್ರದ ಟೀಸರ್ ಕೂಡ ಈಗಾಗಲೇ ಬಿಡುಗಡೆಯಾಗಿತ್ತು. ಇದೀಗ ತಮ್ಮ ಚಿತ್ರಕ್ಕೆ ಗೌರವದ್ಯೋತಕವಾಗಿ ಶೀರ್ಷಿಕೆಯನ್ನು ಬದಲಿಸಲು ಚಿತ್ರತಂಡ ಮುಂದಾಗಿದೆ. ಕಿರಣ್ ರಾಜ್ ಫೇಸ್‌ಬುಕ್ ಪೋಸ್ಟ್ ‘ಬಹದ್ದೂರ್ ಗಂಡು’ ಚಿತ್ರದ ಶೀರ್ಷಿಕೆಯನ್ನು ಬದಲಿಸುತ್ತಿರುವ ಬಗ್ಗೆ ಪ್ರಸಿದ್ಧ್ ಸಿನಿಮಾಸ್ ಬಿಡುಗಡೆ ಮಾಡಿರುವ ಹೇಳಿಕೆಯನ್ನು ತಮ್ಮ ಫೇಸ್‌ಬುಕ್‌ ಪುಟದಲ್ಲಿ ನಟ ಕಿರಣ್ ರಾಜ್ ಹಂಚಿಕೊಂಡಿದ್ದಾರೆ. ‘’ನಮ್ಮ ಚಿತ್ರತಂಡವು ‘ಬಹದ್ದೂರ್ ಗಂಡು’ ಎಂಬ ಶೀರ್ಷಿಕೆ ಇಟ್ಟು ಸಿನಿಮಾ ಮಾಡಲು ಮುಂದಾಗಿದ್ದೆವು. ನಾವೂ ಕನ್ನಡಿಗರಾಗಿ ಕರ್ನಾಟಕದಲ್ಲೇ ಜನಿಸಿದವರು. ಹಾಗಾಗಿ ಸ್ವಾಭಾವಿಕವಾಗಿಯೇ ನಾವೂ ಸಹ ಅಣ್ಣಾವ್ರ ಕಟ್ಟಾ ಅಭಿಮಾನಿಗಳು. ಅಣ್ಣಾವ್ರ ಚಲನಚಿತ್ರದ ಶೀರ್ಷಿಕೆಗಳು, ಅಣ್ಣಾವ್ರಿಗೇ ಸಾಟಿ! ನಮ್ಮಂತೆಯೇ ಇರುವ ಕೋಟ್ಯಂತರ ಅಭಿಮಾನಿಗಳ ಮನಸ್ಸಿಗೆ ನೋವು ಮಾಡುವುದು ನಮ್ಮ ಉದ್ದೇಶವಲ್ಲ’’ ‘’ಅಲ್ಲದೇ, ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಅಗಲಿಕೆಯ ಈ ಸಂದರ್ಭ, ನಮ್ಮೆಲ್ಲರಿಗೂ ಬಹಳ ನಿರಾಸೆ ತಂದಿದೆ. ದೊಡ್ಮನೆಯ ರಾಜವಂಶದ ಕುಡಿಯಾದ ಅಪ್ಪು ಅವರ ಮುಗ್ಧ ನಗು, ಹೃದಯ ವೈಶಾಲ್ಯತೆ, ನಮ್ಮೆಲ್ಲ ಮನದಲ್ಲಿ ಅಚ್ಚಾಗಿದೆ. ತಂದೆಗೆ ತಕ್ಕ ಮಗನಾಗಿ ಜನಿಸಿದ ಅಪ್ಪು ಅವರ ಸಿನಿಮಾಗಳ ಮೂಲಕ ನಮ್ಮನ್ನು ರಂಜಿಸಿದ ಪರಿಯನ್ನು, ಅವರ ಅಭಿನಯ, ನೃತ್ಯ, ಸಾಹಸಗಳನ್ನು ಮರೆಯುವುದು ಅಸಾಧ್ಯ. ಅವರ ಅಸಂಖ್ಯಾತ ಸಮಾಜಮುಖಿ ಕೆಲಸಗಳ ಮೂಲಕ ಅವರು ಎಂದೆಂದಿಗೂ ನಮ್ಮೊಂದಿಗೆ ಜೀವಂತವಿರುತ್ತಾರೆ’’ ‘’ಇಂತಹ ಮಹಾನ್ ಚೇತನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಾ, ಗೌರವದ್ಯೋತಕವಾಗಿ ನಮ್ಮ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುತ್ತಿದ್ದೇವೆ. ಎಂದಿನಂತೆ ಎಲ್ಲ ಕನ್ನಡಿಗರ ಪ್ರೀತಿ-ಆಶೀರ್ವಾದ ನಮ್ಮ ತಂಡದ ಮೇಲಿರಲಿ. ಅತೀ ಶೀಘ್ರದಲ್ಲೇ ನಮ್ಮ ಚಿತ್ರದ ನೂತನ ಶೀರ್ಷಿಕೆಯನ್ನು ಪ್ರಕಟಿಸುತ್ತೇವೆ’’ ಎಂದು ಪ್ರಸಿದ್ಧ್ ಸಿನಿಮಾಸ್ ಸಂಸ್ಥೆ ತಿಳಿಸಿದೆ. ಹೊಸ ಶೀರ್ಷಿಕೆ ಬಿಡುಗಡೆ ಯಾವಾಗ? ‘ಬಹದ್ದೂರ್ ಗಂಡು’ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುತ್ತೇವೆ ಎಂದಿರುವ ಚಿತ್ರತಂಡ ಹೊಸ ಶೀರ್ಷಿಕೆಯ ಅನಾವರಣ ಯಾವಾಗ ಎಂಬುದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಂದ್ಹಾಗೆ, ಚಿತ್ರದಲ್ಲಿ ಕಿರಣ್ ರಾಜ್ ಜೊತೆಗೆ ಯಶಾ ಶಿವಕುಮಾರ್, ನಿಸರ್ಗ ಲಕ್ಷ್ಮಣ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.