ಅಂತಾರಾಷ್ಟ್ರೀಯ ಪಂದ್ಯಾವಳಿಯಿಂದ ಮತ್ತೆ ಹಿಂದೆ ಸರಿದ ಭಾರತದ ಅಗ್ರ ಕುಸ್ತಿಪಟುಗಳು!

ಭಾರತದ ಅಗ್ರ ಕುಸ್ತಿಪಟುಗಳು ಪ್ರಮುಖ ಟೂರ್ನಿಗಳಿಂದ ಹಿಂದೆ ಸರಿಯುವುದನ್ನು ಮುಂದುವರಿಸಿದ್ದು, ಎರಡನೇ ಶ್ರೇಯಾಂಕದ ಸರಣಿ ಇಬ್ರಾಹಿಂ-ಮುಸ್ತಫಾ ಟೂರ್ನಮೆಂಟ್ನಿಂದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಹಿಂದೆ ಸರಿದಿದ್ದಾರೆ. ನವದೆಹಲಿ: ಭಾರತದ ಅಗ್ರ ಕುಸ್ತಿಪಟುಗಳು ಪ್ರಮುಖ ಟೂರ್ನಿಗಳಿಂದ ಹಿಂದೆ ಸರಿಯುವುದನ್ನು ಮುಂದುವರಿಸಿದ್ದು, ಎರಡನೇ ಶ್ರೇಯಾಂಕದ ಸರಣಿ ಇಬ್ರಾಹಿಂ-ಮುಸ್ತಫಾ ಟೂರ್ನಮೆಂಟ್ನಿಂದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಹಿಂದೆ ಸರಿದಿದ್ದಾರೆ.
ವಿನೇಶ್, ಬಜರಂಗ್, ರವಿ ದಹಿಯಾ, ದೀಪಕ್ ಪುನಿಯಾ, ಅಂಶು ಮಲಿಕ್, ಸಂಗೀತಾ ಫೋಗಟ್ ಮತ್ತು ಸಂಗೀತಾ ಮೋರ್ ಅವರು ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಪಂದ್ಯಾವಳಿಯು ಈಜಿಪ್ಟ್ನ ಅಲೆಕ್ಸಾಂಡ್ರಿಯಾದಲ್ಲಿ ಫೆಬ್ರವರಿ 23 ರಿಂದ 26 ರವರೆಗೆ ನಡೆಯಲಿದೆ. ಈ ಅಗ್ರ ಕುಸ್ತಿಪಟುಗಳು ತಾವು ಸ್ಪರ್ಧಿಸಲು ಸಿದ್ಧರಿಲ್ಲ ಎಂದು ಹೇಳಿ ಜಾಗ್ರೆಬ್ ಓಪನ್ನಿಂದ ಹಿಂದೆ ಸರಿದಿದ್ದರು.
ಹಿರಿಯ ಮಹಿಳಾ ಬಾಕ್ಸರ್ ಎಂಸಿ ಮೇರಿ ಕೋಮ್ ನೇತೃತ್ವದ ಮೇಲ್ವಿಚಾರಣಾ ಸಮಿತಿಯು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ (ಡಬ್ಲ್ಯುಎಫ್ಐ) ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದು, ಈ ಪಂದ್ಯಾವಳಿಗಾಗಿ 27 ಭಾರತೀಯ ಕುಸ್ತಿಪಟುಗಳ ತಂಡವನ್ನು ಅನುಮೋದಿಸಿದೆ.
ಇದನ್ನೂ ಓದಿ: ಕ್ರೀಡಾಪಟುಗಳ ಪ್ರತಿಭಟನೆ ಒಂದು ಪಿತೂರಿ: ಅಧ್ಯಕ್ಷರ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ತಿರಸ್ಕರಿಸಿದ ಡಬ್ಲ್ಯುಎಫ್ಐ
ಡಬ್ಲ್ಯುಎಫ್ಐ ಅನ್ನು ವಿಸರ್ಜಿಸುವವರೆಗೆ ಮತ್ತು ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ವಜಾಗೊಳಿಸುವವರೆಗೆ ಯಾವುದೇ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಕುಸ್ತಿಪಟುಗಳು ಹೇಳಿದ್ದಾರೆ.