ಹೊಸ ಟ್ವಿಸ್ಟ್ ಪಡೆದ ಟೆನಿಸ್ ತಾರೆ ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ಡಿವೋರ್ಸ್ ಕಥೆ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ತಮ್ಮ 12 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ ಎನ್ನುವ ವರದಿಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ತಮ್ಮ 12 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಕೆಲ ಕಾನೂನು ಪ್ರಕ್ರಿಯೆಗಳು ಮುಗಿದ ನಂತರ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಆದರೆ, ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಇದೀಗ ಒಟ್ಟಿಗೆ ಬರಲು ಸಜ್ಜಾಗುತ್ತಿದ್ದಾರೆ. ಅಂದರೆ, ಈ ಸ್ಟಾರ್ ಜೋಡಿ ಹೊಸ ಟಿವಿ ಕಾರ್ಯಕ್ರಮವೊಂದನ್ನು ನಡೆಸಿಕೊಡಲಿದ್ದಾರೆ.
ವಿಚ್ಛೇದನದ ಕುರಿತಾದ ಊಹಾಪೋಹಗಳಿಗೆ ಸಾನಿಯಾ ಮತ್ತು ಶೋಯೆಬ್ ಅಧಿಕೃತವಾಗಿ ಉತ್ತರಿಸಿಲಿಲ್ಲ. ಆದರೆ, ಸ್ಟಾರ್ ದಂಪತಿಯ ವಿಚ್ಛೇದನದ ಕಥೆ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು, ಕಾನೂನು ಪ್ರಕ್ರಿಯೆಗಳು ಸಾನಿಯಾ ಮತ್ತು ಶೋಯೆಬ್ ಒಟ್ಟಿಗೆ ಹೋಸ್ಟ್ ಮಾಡಲಿರುವ ಟಿವಿ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು ಎನ್ನಲಾಗಿದೆ.
View this post on Instagram
A post shared by UrduFlix (@urduflixofficial)
ದಂಪತಿ ಪಾಕಿಸ್ತಾನದ ಚಾನೆಲ್‌ನಲ್ಲಿ ಬರುವ 'ದಿ ಮಿರ್ಜಾ ಮಲಿಕ್ ಶೋ' ಎಂಬ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮುರಿದು ಬಿತ್ತು 'ಮೂಗುತಿ ಸುಂದರಿ'ಯ 12 ವರ್ಷಗಳ ದಾಂಪತ್ಯ: ಸಾನಿಯಾ ಮಿರ್ಜಾ ಸಂಸಾರದಲ್ಲಿ ಹುಳಿ ಹಿಂಡಿದ ಆಯೆಷಾ ಒಮರ್ ಯಾರು?
ಶೋಯೆಬ್ ಮಲಿಕ್ ಅವರು ಪಾಕಿಸ್ತಾನಿ ಮಾಡೆಲ್ ಆಯೇಶಾ ಒಮರ್ ಜೊತೆ ಸಂಪರ್ಕ ಹೊಂದಿದ್ದಾರೆ ಮತ್ತು ಇತ್ತೀಚಿನ ಫೋಟೋಶೂಟ್ ಸಮಯದಲ್ಲಿ ಶೋಯೆಬ್ ಅವರೊಂದಿಗೆ ಬೋಲ್ಡ್ ಆಗಿ ಫೋಟೊ ತೆಗೆಸಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಇದುವೇ ಸಾನಿಯಾ ಮತ್ತು ಶೋಯೆಬ್ ನಡುವಿನ ಬಿರುಕಿಗೆ ಕಾರಣ ಎನ್ನಲಾಗಿತ್ತು.
ಸಾನಿಯಾ ಹಾಗೂ ಮಲಿಕ್ 2010ರ ಎಪ್ರಿಲ್ 12 ರಂದು ಹೈದರಾಬಾದ್‍ನಲ್ಲಿ ಮುಸ್ಲಿಂ ಪದ್ಧತಿಯಂತೆ ತಾಜ್ ಕೃಷ್ಣ ಹೋಟೆಲ್‍ನಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಜಾನ್ ಎಂಬ ಓರ್ವ ಮಗನಿದ್ದಾನೆ.