ಸಾಮಾಜಿಕ ಮಾಧ್ಯಮ ಬಳಸುವಾಗ ಎಚ್ಚರ ವಹಿಸಿ, ಆರು ತಿಂಗಳೊಳಗೆ ಖಿನ್ನತೆ ಉಂಟಾಗಬಹುದು!

ಯಾವುದೇ ವ್ಯಕ್ತಿತ್ವವಾದರೂ ಸರಿ ಸಾಮಾಜಿಕ ಮಾಧ್ಯಮವನ್ನು ಬಳಸುವ ಯುವ ವಯಸ್ಕರು ಆರು ತಿಂಗಳೊಳಗೆ ಖಿನ್ನತೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಾರ್ವಜನಿಕ ನೀತಿ ಮತ್ತು ಶಿಕ್ಷಣದ ಸಂಶೋಧಕರು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ವಾಷಿಂಗ್ಟಂನ್: ಯಾವುದೇ ವ್ಯಕ್ತಿತ್ವವಾದರೂ ಸರಿ ಸಾಮಾಜಿಕ ಮಾಧ್ಯಮವನ್ನು ಬಳಸುವ ಯುವ ವಯಸ್ಕರು ಆರು ತಿಂಗಳೊಳಗೆ ಖಿನ್ನತೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಾರ್ವಜನಿಕ ನೀತಿ ಮತ್ತು ಶಿಕ್ಷಣದ ಸಂಶೋಧಕರು ಇತ್ತೀಚೆಗೆ ಕಂಡುಹಿಡಿದಿದ್ದಾರೆ.
ಜರ್ನಲ್ ಆಫ್ ಎಫೆಕ್ಟಿವ್ ಡಿಸಾರ್ಡರ್ಸ್ ರಿಪೋರ್ಟ್ಸ್‌ನಲ್ಲಿ 'ಸಾಮಾಜಿಕ ಮಾಧ್ಯಮ ಬಳಕೆ, ವ್ಯಕ್ತಿತ್ವ ರಚನೆ ಮತ್ತು ಖಿನ್ನತೆಯ ಬೆಳವಣಿಗೆಯ ನಡುವಿನ ಸಂಬಂಧಗಳು' ಎಂಬ ಸಂಶೋಧನಾ ವರದಿ ಪ್ರಕಟವಾಗಿದೆ. ಅರ್ಕಾನ್ಸಾಸ್ ವಿಶ್ವವಿದ್ಯಾಲಯದ ಸಾರ್ವಜನಿಕ ನೀತಿ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ವಿದ್ಯಾರ್ಥಿ ರೆನೆ ಮೆರಿಲ್ ಇದರ ಸಹ ಲೇಖಕರಾಗಿದ್ದಾರೆ.
'ಖಿನ್ನತೆಯ ಬೆಳವಣಿಗೆಯು ಹಲವಾರು ಅಂಶಗಳೊಂದಿಗೆ ಸಂಬಂಧ ಹೊಂದಿದೆ ಎಂದು ಹಿಂದಿನ ಸಂಶೋಧನೆ ತಿಳಿಸಿದೆ. ಆದರೆ, ಈ ಅಧ್ಯಯನದ ಪ್ರಕಾರ, ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಬಳಸುತ್ತಿರುವವರು ಕಡಿಮೆ ಬಳಸುವ ಜನರಿಗಿಂತ ಖಿನ್ನತೆಗೆ ಒಳಗಾಗುವ ಸಾಧ್ಯತೆ ಶೇ 49ರಷ್ಟು ಹೆಚ್ಚಿದೆ. ಹೆಚ್ಚಿನ ನರರೋಗ ಹೊಂದಿರುವವರು ದಿನಕ್ಕೆ 300 ನಿಮಿಷಗಳಿಗಿಂತ ಹೆಚ್ಚು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದರೆ ಕಡಿಮೆ ನರರೋಗ ಹೊಂದಿರುವವರಿಗಿಂತ ಖಿನ್ನತೆ ಅಭಿವೃದ್ಧಿಪಡಿಸುವ ಸಾಧ್ಯತೆ ಎರಡು ಪಟ್ಟು ಹೆಚ್ಚಿರುತ್ತದೆ.
18 ರಿಂದ 30 ವರ್ಷದೊಳಗಿನ 1,000 ಕ್ಕೂ ಹೆಚ್ಚು ಅಮೆರಿಕದ ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸುವ ಮೂಲಕ ಈ ಅಂಶವನ್ನು ಸಂಶೋಧನೆ ಕಂಡುಕೊಂಡಿದೆ.
ಇದನ್ನೂ ಓದಿ: ಕುಳಿತಲ್ಲೇ ಕೆಲಸ ಮಾಡುವವರ ಗಮನಕ್ಕೆ: ಬಾಡಿ ಓಡಾಡಿಸಿ, ಆರೋಗ್ಯವಾಗಿರಿ...
ರೋಗಿಯ ಆರೋಗ್ಯ ಪ್ರಶ್ನಾವಳಿಯನ್ನು ಬಳಸಿಕೊಂಡು ಖಿನ್ನತೆಯನ್ನು ಅಳೆಯಲಾಗುತ್ತದೆ. ಅದರಂತೆ, ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದೈನಂದಿನ ಎಷ್ಟು ಸಮಯ ಕಳೆಯಲಾಗುತ್ತದೆ ಎಂದು ಕೇಳುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆಯನ್ನು ಅಳೆಯಲಾಗುತ್ತದೆ. ಬಿಗ್ ಫೈವ್ ಇನ್ವೆಂಟರಿಯನ್ನು ಬಳಸಿಕೊಂಡು ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ. ಅಂದರೆ, ಇದು ಮುಕ್ತತೆ, ಆತ್ಮಸಾಕ್ಷಿ, ಬಹಿರ್ಮುಖತೆ, ಒಪ್ಪಿಗೆ ಮತ್ತು ನರರೋಗವನ್ನು ನಿರ್ಣಯಿಸುತ್ತದೆ.
ಸಮಸ್ಯಾತ್ಮಕ ಸಾಮಾಜಿಕ ಹೋಲಿಕೆಯು ತನ್ನ ಮತ್ತು ಇತರರಲ್ಲಿನ ಋಣಾತ್ಮಕ ಭಾವನೆಗಳನ್ನು ಹೆಚ್ಚಿಸುತ್ತದೆ. ಇದು ಹೆಚ್ಚಿದ ಸಾಮಾಜಿಕ ಮಾಧ್ಯಮ ಬಳಕೆಯಿಂದ ಖಿನ್ನತೆಯ ಅಪಾಯವು ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಋಣಾತ್ಮಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದು ಕೂಡ ಖಿನ್ನತೆಯ ಭಾವನೆಗಳನ್ನು ಹೆಚ್ಚಿಸುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿಗತ ಸಂವಹನ ಮತ್ತು ಮನೆಯ ಹೊರಗಿನ ಚಟುವಟಿಕೆಗಳಿಗೆ ಅವಕಾಶಗಳನ್ನು ಕಡಿಮೆ ಮಾಡುತ್ತದೆ. ವಿಶ್ವದಾದ್ಯಂತ ದೌರ್ಬಲ್ಯ ಮತ್ತು ಮರಣಕ್ಕೆ ಖಿನ್ನತೆಯು ಪ್ರಮುಖ ಕಾರಣವೆಂದು ಗುರುತಿಸಲಾಗಿದೆ.
ತಂತ್ರಜ್ಞಾನದ ವಿಸ್ತರಣೆ ಮತ್ತು ಏಕೀಕರಣದ ಸಮಯದಲ್ಲಿ ಈ ಅಧ್ಯಯನದ ಸಂಶೋಧನೆಗಳು ಪ್ರಮುಖವಾಗಿವೆ. ವರ್ಚುವಲ್ ಆಗಿ ಜನರೊಂದಿಗೆ ಸಂಪರ್ಕ ಸಾಧಿಸುವುದು ತಪ್ಪು ಸಂವಹನ ಅಥವಾ ತಪ್ಪು ಗ್ರಹಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಸಂಬಂಧದಲ್ಲಿ ತೊಂದರೆಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುವ ಸಂಭಾವ್ಯ ಅಪಾಯಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಮೆರಿಲ್.
ಸಾಮಾಜಿಕ ಸಂಪರ್ಕ ಮತ್ತು ತಿಳಿವಳಿಕೆಗಾಗಿ ಜನರು ಸಹಜವಾದ ಭಾವನಾತ್ಮಕ ಅಗತ್ಯಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ, ನಮ್ಮ ಭಾವನೆಗಳ ಬಗ್ಗೆ ಹೆಚ್ಚು ಜಾಗೃತರಾಗುವುದರ ಮೂಲಕ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಸುಧಾರಿಸಬಹುದು ಮತ್ತು ಇತರರೊಂದಿಗೆ ಸಂಪರ್ಕ ಸಾಧಿಸಬಹುದು. ಇದರಿಂದ ನಮ್ಮ ಸಂಬಂಧದ ಗುಣಮಟ್ಟವನ್ನು ಸುಧಾರಿಸಲು ಸಹಾಯವಾಗುತ್ತದೆ. ಭಿನ್ನಾಭಿಪ್ರಾಯಗಳ ಹೊರತಾಗಿಯೂ, ನಾವು ಸಹಾನುಭೂತಿ ಮತ್ತು ದಯೆಯ ಸಂಸ್ಕೃತಿಯನ್ನು ರಚಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೇವೆ.