ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಶ್ರೀ ಶ್ರೀ ಪರಮಪೂಜ್ಯ ವಿಖ್ಯಾತನಂದ ಮಹಾಸ್ವಾಮಿಗಳ ಪ್ರಥಮ ವರ್ಷದ ಪೀಠಾರೋಹಣ ಸಮಾರಂಭದ ಆಹ್ವಾನ ಪತ್ರಿಕೆ

ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮದೇವಿಯ ಜಾತ್ರಾ ಮಹೋತ್ಸವ ಹಾಗೂ ಶ್ರೀ ಶ್ರೀ ಶ್ರೀ ಪರಮಪೂಜ್ಯ ವಿಖ್ಯಾತನಂದ ಮಹಾಸ್ವಾಮಿಗಳ ಪ್ರಥಮ ವರ್ಷದ ಪೀಠಾರೋಹಣ ಸಮಾರಂಭ

ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಶ್ರೀ ಶ್ರೀ ಪರಮಪೂಜ್ಯ ವಿಖ್ಯಾತನಂದ ಮಹಾಸ್ವಾಮಿಗಳ ಪ್ರಥಮ ವರ್ಷದ ಪೀಠಾರೋಹಣ ಸಮಾರಂಭದ ಆಹ್ವಾನ ಪತ್ರಿಕೆ
Linkup

ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಶ್ರೀ ಶ್ರೀ ಪರಮಪೂಜ್ಯ ವಿಖ್ಯಾತನಂದ ಮಹಾಸ್ವಾಮಿಗಳ ಪ್ರಥಮ ವರ್ಷದ ಪೀಠಾರೋಹಣ ಸಮಾರಂಭದ ಆಹ್ವಾನ ಪತ್ರಿಕೆ

ಸ್ಥಳ : ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಟ್ರಸ್ಟ್ (೮), ನಂ. 826, ರಾ.ಹೆ. 75

ಆರ್ಯ ಈಡಿಗ ಮಹಾಸಂಸ್ಥಾನ ಮಠ, ಶ್ರೀ ಕ್ಷೇತ್ರ, ಸೋಲೂರು, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.

 

ಭಕ್ತ ಮಹಾಶಯರೇ, ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು, ಸೋಲೂರು ಗ್ರಾಮ “ಆರ್ಯ ಈಡಿಗ

ಮಹಾಸಂಸ್ಥಾನದ ಆವರಣದಲ್ಲಿರುವ ಶ್ರೀ ಪ್ರಸನ್ನ ಗಣಪತಿ, ಶ್ರೀ ಜಮದಗ್ನಿ ಮಹರ್ಷಿ ಹಾಗೂ ಶ್ರೀ ಪರಶುರಾಮ

ದೇವರೊಂದಿಗೆ ಭಕ್ತವರೆಯಾದ ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮದೇವಿಯ ಜಾತ್ರಾ ಮಹೋತ್ಸವವು ಹಾಗೂ ಶ್ರೀ ಶ್ರೀ ಶ್ರೀ

ಪರಮಪೂಜ್ಯ ವಿಖ್ಯಾತನಂದ ಮಹಾಸ್ವಾಮಿಗಳ ಪ್ರಥಮ ವರ್ಷದ ಪೀಠಾರೋಹಣ ಸಮಾರಂಭವು ಭರತ ಹುಣ್ಣಿಮೆ

ತಾ॥ 5-2-2023ನೇ ಭಾನುವಾರ ನಡೆಯಲ್ಲಿದ್ದು ಭಕ್ತಾದಿಗಳು ಕುಟುಂಬ ಸಮೇತರಾಗಿ ಶ್ರೀ ದೇವಿಯ ಹಾಗೂ ಗುರುಗಳ

ದರ್ಶನ ಭಾಗ್ಯ ಪಡೆದು ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಕಾರ್ಯಕ್ರಮಗಳು :

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1944ಕ್ಕೆ ಸರಿಯಾಗಿ ಶ್ರೀ ಶುಭಕೃತ್‌ನಾಮ

ಸಂವತ್ಸರೆ, ಉತ್ತರಾಯಣೆ ಶಶಿರರ್ತ ಮಾಘಮಾಸೇ ಶುಕ್ಲ ಪಕ್ಷ ತಾ|| 5-2-2023ನೇ ಭಾನುವಾರ ಪ್ರಾತಃ 6-00 ಗಂಟೆಗೆ

ಗಂಗೆ ಪೂಜೆ, ಆಲಯ ಪ್ರವೇಶ, ಅನುಜ್ಞೆದೀಪಾರಾಧನೆ, ಗಣಪತಿ ಪೂಜೆ, ರಕ್ಷಾ ಬಂಧನ, ಲಲಿತ ಸಹಸ್ರನಾಮ

ಪಾರಾಯಣ, ಕಳಶಾರಾಧನೆ, ಅಗ್ನಿ ಪ್ರತಿಷ್ಠೆ, ಗಣಹೋಮ, ಪ್ರಧಾನ ಹೋಮ, ಪರಿವಾರ ಹೋಮ, ಪೂರ್ಣಾಹುತಿ

ಕುಂಭಾಭಿಷೇಕ.

ಬೆಳಿಗ್ಗೆ 9-00 ಗಂಟೆಗೆ ಗುರು ಪೂಜೆ : ಶ್ರೀ ರೇಣುಕಾ ಪೀಠಂ, ನಾರಾಯಣ ಗುರು ಮಠದಲ್ಲಿ ಶ್ರೀ ಶ್ರೀ ಶ್ರೀ ಪರಮಪೂಜ್ಯ

ವಿಖ್ಯಾತನಂದ ಮಹಾಸ್ವಾಮಿಗಳ ಪ್ರಥಮ ವರ್ಷದ ಪೀಠಾರೋಹಣ ಕಾರ್ಯಕ್ರಮ, ಶ್ರೀ ಗುರುಗಳಿಂದ ಮಂಗಳಾರತಿ ಹಾಗೂ

ಅಶೀರ್ವಚನ. ನಂತರ ಜಗನ್ಮಾತೆ ಸನ್ನಿಧಿಯಲ್ಲಿ ಅಲಂಕಾರ ಸೇವೆ, ಆರಾಧನೆ, ಅಷ್ಟೋತ್ತರ, ದೂಪ ದೀಪ, ಮಹಾನೈವೇದ್ಯ,

ಅಷ್ಟಾವದಾನ, ಮಹಾಮಂಗಳಾರತಿ.

ಬೆಳಿಗ್ಗೆ 11-00 ರಿಂದ ವಿವಿಧ ಕಲಾ ತಂಡಗಳಿಂದ ಶ್ರೀ ಆರ್ಯ ಈಡಿಗ ಮಹಾಸಂಸ್ಥಾನ ಆವರಣದಲ್ಲಿ ಶ್ರೀ ಜಗನ್ಮಾತೆ

ರೇಣುಕಾ ಯಲ್ಲಮ್ಮ ದೇವಿಯ ಉತ್ಸವ.

ಮಧ್ಯಾಹ್ನ 12-00ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ,

12-30 ರಿಂದ ಅನ್ನಸಂತರ್ಪಣೆ ಹಾಗೂ

1-00 ರಿಂದ ಸಮುದಾಯದ ಪ್ರಮುಖರಿಂದ ಚಿಂತಾನ ಶಿಬಿರ.

ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಾರಿಮಣಿಯರೆಲ್ಲರೂ ಮದಲಕ್ಕಿ ಸೇವೆ

ತಂಬಿಟ್ಟಿನಾರತಿ, ಬೆಲ್ಲದ ಆರತಿ, ನಿಂಬೆಹಣ್ಣಿನ ಆರತಿ, ಮುಂತಾದ ಸೇವೆಗಳನ್ನು ಸಲ್ಲಿಸುವ ಸದಾವಕಾಶವಿದೆ. ಎಲ್ಲಾ ಭಕ್ತರು

ಕುಟುಂಬ ಸಮೇತ ಈ ಜಾತ್ರಾ ಮಹೋತ್ಸವದಲ್ಲಿ ಕೋವಿಡ್-19 ನಿಯಮದ ಪ್ರಕಾರ ಭಾಗವಹಿಸಿ ಸೇವೆಗಳನ್ನು ಸಮರ್ಪಿಸಿ

ಶ್ರೀ ಜಗನ್ಮಾತೆಯ ಕೃಪಾಶೀರ್ವಾದಗಳಿಗೆ ಪಾತ್ರರಾಗಬೇಕೆಂದು ವಿನಂತಿ.

                                 “ ಸರ್ವರಿಗೂ ಸುಸ್ವಾಗತ

ತಮ್ಮ ಸುಖಾಗಮನವನ್ನು ಬಯಸುವವರು:

ಶ್ರೀ ಗುರುರಾಜ್. ಏನ್ ( ಸಿ.ಇ.ಓ )

ಈಡಿಗ ಮ್ಯಾಚ್ ಮೇಕರ್

# ೭೬೫ ,  ಎರಡನೇ ಮಹಡಿ, ಹದಿನಾಲ್ಕನೇ ಕ್ರಾಸ್ , ಅರವತ್ತು ಅಡಿ ರಸ್ತೆ

ಎಂ.ಇ. ಲೇಔಟ್ ಗ್ರೌಂಡ್ ಎದುರು (ಲ್ಯಾಂಡ್ಮಾರ್ಕ್), 

ಎಂ.ಇ. ಲೇಔಟ್, ಬಾಗಲಗುಂಟೆ, ಬೆಂಗಳೂರು- ೫೬೦೦೭೩

ಮೊಬೈಲ್ ನಂ : 9902406387