ಶ್ವಾನಗಳ ಮೇಲೆ ವಾನರ ಸೇಡು!: ಸುಮಾರು 250 ನಾಯಿಗಳನ್ನು ಕೊಂದ ಕೋತಿಗಳ ಗುಂಪು

ಕೋತಿಗಳು ಮನುಷ್ಯರಂತೆಯೇ ವರ್ತಿಸುತ್ತವೆ ಎನ್ನುವುದಕ್ಕೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದ ಘಟನೆ ಸಾಬೀತುಪಡಿಸಿದೆ. ಮರಿಯೊಂದನ್ನು ಕೊಂದಿದ್ದಕ್ಕೆ ಉದ್ರಿಕ್ತ ಮಂಗಗಳ ಗುಂಪು ಹಳ್ಳಿಯಲ್ಲಿನ ಸುಮಾರು 250 ನಾಯಿಗಳನ್ನು ಸಾಯಿಸಿವೆ.

ಶ್ವಾನಗಳ ಮೇಲೆ ವಾನರ ಸೇಡು!: ಸುಮಾರು 250 ನಾಯಿಗಳನ್ನು ಕೊಂದ ಕೋತಿಗಳ ಗುಂಪು
Linkup
ಬೀಡ್: ವಾನರಗಳು ಮನುಷ್ಯರ ಪೂರ್ವಜರು ಎನ್ನುವುದು ವಿಕಸನ ಸಿದ್ಧಾಂತದ ವಾದ. ಮನುಷ್ಯರು ಹಾಗೂ ಕೋತಿಗಳ ವರ್ತನೆಗಳಲ್ಲಿ ಅನೇಕ ಸಾಮ್ಯತೆಗಳಿವೆ. ಆದರೆ ದ್ವೇಷದಲ್ಲಿಯೂ ಅವು ಮನುಷ್ಯರನ್ನೇ ಹೋಲುತ್ತವೆ ಎನ್ನುವುದಕ್ಕೆ ವಿಚಿತ್ರ ಹಾಗೂ ಆಘಾತಕಾರಿ ಘಟನೆಯೊಂದು ಸಾಕ್ಷಿಯಾಗಿದೆ. '' ತೀರಿಸಿಕೊಳ್ಳುವುದಕ್ಕಾಗಿ ಕುಪಿತ ವಾನರಗಳ ಗುಂಪೊಂದು, ಸುಮಾರು 250 ನಾಯಿಗಳನ್ನು ಕೊಂದು ಹಾಕಿವೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲಗಾಂವ್‌ನಲ್ಲಿ ಈ ಘಟನೆ ನಡೆದಿದೆ. ಇದು ಒಂದೆರಡು ದಿನಗಳಲ್ಲಿ ನಡೆದ ಘಟನೆಯಲ್ಲ. ಕಳೆದ ಒಂದು ತಿಂಗಳಿನಿಂದ 'ಕೊಲೆಗಡುಕ' ನಾಯಿಗಳನ್ನು ಹತ್ಯೆ ಮಾಡುತ್ತಿರುವುದು ವರದಿಯಾಗಿದೆ. ನಾಯಿಗಳನ್ನು ಕಟ್ಟಡಗಳು ಮತ್ತು ಮರಗಳ ಮೇಲೆ ಎಳೆದುಕೊಂಡು ಹೋಗಿ ಅಲ್ಲಿಂದ ಕೆಳಗೆ ಬೀಳಿಸಿ ಸಾಯಿಸುತ್ತಿವೆ. ಹೀಗೆ ಸುಮಾರು ಒಂದು ತಿಂಗಳಲ್ಲಿ 250 ನಾಯಿಗಳನ್ನು ಎತ್ತರದಿಂದ ಎಸೆದು ಕೊಂದುಹಾಕಿವೆ. ಮಂಗಗಳ ಗುಂಪು ಎಲ್ಲಿಯೇ ನಾಯಿ ಕಂಡರೂ ಮುಗಿಬಿದ್ದು ಅದನ್ನು ಹಿಡಿಯುತ್ತವೆ. ಮಜಲಗಾಂವ್‌ನಿಂದ ಸುಮಾರು 10 ಕಿಮೀ ದೂರದಲ್ಲಿರುವ ಲಾವೂಲ್ ಗ್ರಾಮದಲ್ಲಿ ಅಂದಾಜು 5000 ಜನಸಂಖ್ಯೆ ಇದೆ. ಆದರೆ ಈಗ ಹಳ್ಳಿಯಲ್ಲಿ ಒಂದೇ ಒಂದು ನಾಯಿ ಉಳಿದಿಲ್ಲ. ಕೋತಿಗಳ ಈ ಸೇಡಿನ ಕೊಲೆಗಳಿಂದ ಕಂಗೆಟ್ಟ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಮಂಗಗಳನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ. ಆದರೆ ಹಳ್ಳಿಗೆ ಬಂದ ಅರಣ್ಯ ಇಲಾಖೆಗೆ ಒಂದೇ ಒಂದು ಮಂಗವನ್ನು ಹಿಡಿಯಲು ಸಾಧ್ಯವಾಗಿಲ್ಲ. ಸೇಡಿಗೆ ಕಾರಣವೇನು?ಕೋತಿಗಳು ಸೇಡಿನ ಕ್ರಮವಾಗಿ ಈ ಕೃತ್ಯ ಎಸಗುತ್ತಿವೆ ಎಂದು ಹಳ್ಳಿಗರು ಹೇಳಿದ್ದಾರೆ. ಕೆಲವು ಸೇರಿ ಕೋತಿ ಮರಿಯೊಂದನ್ನು ಸಾಯಿಸಿದ್ದವು. ಇದರ ಬಳಿಕ ಮಂಗಗಳು ಎಲ್ಲಿ ನಾಯಿಯನ್ನು ಕಂಡರೂ ಅದನ್ನು ಕಟ್ಟಡ ಅಥವಾ ಮರದ ಮೇಲೆ ಎಳೆದೊಯ್ದು ಎಸೆದು ಸಾಯಿಸುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ವಾನರ ಗುಂಪನ್ನು ಹಿಡಿಯಲು ವಿಫಲವಾಗಿದ್ದರಿಂದ, ತಮ್ಮ ನಾಯಿಗಳನ್ನು ರಕ್ಷಿಸಿಕೊಳ್ಳಲು ಗ್ರಾಮಸ್ಥರು ಹೆಣಗಾಡಿದ್ದಾರೆ. ಆದರೆ ಕೋತಿಗಳು ಅವರ ಮೇಲೆಯೂ ದಾಳಿ ನಡೆಸಿವೆ. ಇನ್ನು ಕೆಲವರು ನಾಯಿಗಳನ್ನು ಕಾಪಾಡಲು ಹೋಗಿ ಕಟ್ಟಡಗಳ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ. ಹಳ್ಳಿಯಲ್ಲಿರುವ ಬಹುತೇಕ ಎಲ್ಲ ನಾಯಿಗಳನ್ನೂ ಕೋತಿಗಳು ಕೊಂದು ಹಾಕಿವೆ. ಈಗ ಹಳ್ಳಿಯಲ್ಲಿ ಹೆಚ್ಚೂ ಕಡಿಮೆ ಒಂದೂ ನಾಯಿ ಉಳಿದಿಲ್ಲ. ಆದರೆ ಕೋತಿಗಳ ಹಾವಳಿ ನಿಂತಿಲ್ಲ. ಈಗ ಅವು ಪುಟ್ಟ ಮಕ್ಕಳ ಮೇಲೆ ದಾಳಿ ನಡೆಸಲು ಆರಂಭಿಸಿವೆ. ಶಾಲೆಗಳಿಗೆ ಹೋಗುವ ಮಕ್ಕಳ ಮೇಲೆ ಕೋತಿಗಳು ಎರಗಿ ದಾಳಿ ನಡೆಸಿದ ಘಟನೆಗಳು ನಡೆದಿವೆ. ಇದು ಗ್ರಾಮಸ್ಥರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಕರ್ನಾಟಕದಲ್ಲಿಯೂ ನಡೆದಿತ್ತುರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡ ಇಂತಹದೇ 'ವಾನರ ಸೇಡು' ಘಟನೆ ನಡೆದಿತ್ತು. ಕೊಟ್ಟಿಗೆಹಾರದಲ್ಲಿ ತನಗೆ ಕೀಟಲೆ ಕೊಟ್ಟಿದ್ದ ಆಟೋ ರಿಕ್ಷಾ ಚಾಲಕನಿಗೆ ಪದೇ ಪದೇ ಉಪಟಳ ನೀಡಿದ್ದ ಕೋತಿಯೊಂದು, ಆಟೋಕ್ಕೆ ಹಾನಿ ಮಾಡಿತ್ತು.