ಲೀಗಲ್‌ ಸರ್ವಿಸ್‌ ಕ್ಲಿನಿಕ್‌; ಪಾಲಿಕೆ, ಜಲಮಂಡಳಿ, ಬೆಸ್ಕಾಂ ಸಮಸ್ಯೆ ಶೀಘ್ರ ಇತ್ಯರ್ಥ!

ಕಾನೂನು ಸೇವಾ ಪ್ರಾಧಿಕಾರ ಲೀಗಲ್‌ ಸರ್ವಿಸ್‌ ಕ್ಲಿನಿಕ್‌ಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಲಿದೆ. ಈ ಕಾರ್ಯಕ್ಕೆ ಯುವ ವಕೀಲರು ಮತ್ತು ಕಾನೂನು ಪದವೀಧರರನ್ನು ಬಳಸಿಕೊಳ್ಳಲಿದೆ. ಈಗಾಗಲೇ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಅವರೂ ಹೊಸ ವ್ಯವಸ್ಥೆ ಜಾರಿಗೆ ಸಮ್ಮತಿಸಿದ್ದಾರೆ.

ಲೀಗಲ್‌ ಸರ್ವಿಸ್‌ ಕ್ಲಿನಿಕ್‌; ಪಾಲಿಕೆ, ಜಲಮಂಡಳಿ, ಬೆಸ್ಕಾಂ ಸಮಸ್ಯೆ ಶೀಘ್ರ ಇತ್ಯರ್ಥ!
Linkup
ಶ್ರೀಕಾಂತ್‌ ಹುಣಸವಾಡಿ, ಬೆಂಗಳೂರು ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, , ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ಕಲ್ಪಿಸುವ ವಿನೂತನ ಪರಿಪೂರ್ಣ ವ್ಯವಸ್ಥೆಯೊಂದು ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ. ನ್ಯಾಯಾಲಯಗಳಲ್ಲಿ ಈ ಮೂರು ನಗರಾಡಳಿತ ಸಂಸ್ಥೆಗಳ ಸಮಸ್ಯೆಗಳ ಖಟ್ಲೆಗಳು ಹೆಚ್ಚು ಹೆಚ್ಚು ಬರುತ್ತಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಸಕಾಲದಲ್ಲಿ ತ್ವರಿತ ಪರಿಹಾರ ಒದಗಿಸುವ ದೃಷ್ಟಿಯಿಂದ ಕರ್ನಾಟಕ ಹೆಲ್ಪ್‌ಲೈನ್‌ ಮಾದರಿಯ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕಾನೂನು ಸೇವಾ ಪ್ರಾಧಿಕಾರ ಲೀಗಲ್‌ ಸರ್ವಿಸ್‌ ಕ್ಲಿನಿಕ್‌ಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಲಿದೆ. ಈ ಕಾರ್ಯಕ್ಕೆ ಯುವ ವಕೀಲರು ಮತ್ತು ಕಾನೂನು ಪದವೀಧರರನ್ನು ಬಳಸಿಕೊಳ್ಳಲಿದೆ. ಈಗಾಗಲೇ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಅವರೂ ಹೊಸ ವ್ಯವಸ್ಥೆ ಜಾರಿಗೆ ಸಮ್ಮತಿಸಿದ್ದಾರೆ. ಪೂರ್ಣ ಪ್ರಮಾಣದ ಉಚಿತ ಕಾನೂನು ಸೇವಾ ಘಟಕಗಳ ಆರಂಭದ ನಿಟ್ಟಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಹೊಸ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಅಲ್ಲದೆ, ಜಲಮಂಡಳಿ ಮತ್ತು ಬೆಸ್ಕಾಂ ಜತೆ ಕೂಡ ಸಭೆ ನಡೆಸಿ ಅವುಗಳನ್ನೂ ಇದರ ವ್ಯಾಪ್ತಿಗೆ ಒಳಪಡಿಸುವ ನಿಟ್ಟಿನಲ್ಲಿ ಮಾತುಕತೆ ಪ್ರಗತಿಯಲ್ಲಿದೆ. ರಸ್ತೆ, ನೀರು, ವಿದ್ಯುತ್‌ನಂತಹ ಮೂಲಸೌಕರ್ಯದಲ್ಲಿ ಸಮಸ್ಯೆ ಉಂಟಾಗಿದ್ದಾಗ ಸಂಬಂಧಿಸಿದ ಸಂಸ್ಥೆಗಳು ಸ್ಪಂದಿಸದಿದ್ದಾಗ ತಕ್ಷಣ ಲೀಗಲ್‌ ಸರ್ವಿಸ್‌ ಕ್ಲಿನಿಕ್‌ಗಳನ್ನು ಸಂಪರ್ಕಿಸಿ ಪರಿಹಾರ ಕಂಡು ಕೊಳ್ಳಬಹುದು. ಆಸ್ತಿ ವರ್ಗಾವಣೆ, ಖಾತೆ ಬದಲಾವಣೆಯಂತಹ ಕೆಲಸ ಮಾಡಿಸಿಕೊಳ್ಳಲು ತೊಂದರೆಯಾದಲ್ಲಿ ಕೂಡ ಲೀಗಲ್‌ ಸರ್ವಿಸ್‌ ಕ್ಲಿನಿಕ್‌ಗಳು ನೆರವಿಗೆ ಬರಲಿವೆ. ಇದರಿಂದ ಸಾರ್ವಜನಿಕರ ಸಮಸ್ಯೆ ಶೀಘ್ರ ಬಗೆಹರಿಯುವುದಲ್ಲದೆ, ಸಣ್ಣ ಸಣ್ಣ ಸಮಸ್ಯೆಗಳಿಗೆ ಜನರು ನ್ಯಾಯಾಲಯಕ್ಕೆ ಅಲೆಯುವುದು ತಪ್ಪಲಿದೆ. ನ್ಯಾಯಾಲಯಗಳ ಮೇಲಿನ ಪ್ರಕರಣಗಳ ಹೊರೆ ಕೂಡ ಇಳಿಕೆಯಾಗಲಿದೆ. ನೋಡಲ್‌ ಅಧಿಕಾರಿಗಳಿಂದ ನೆರವು ''ಹೊಸ ವ್ಯವಸ್ಥೆಯಲ್ಲಿ ಪ್ರಾಧಿಕಾರ ಲೀಗಲ್‌ ಸರ್ವಿಸ್‌ ಕ್ಲಿನಿಕ್‌ಗಳನ್ನು ಆರಂಭಿಸಲಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು ಅಥವಾ ಕುಂದು-ಕೊರತೆಗಳನ್ನು ಈ ಕ್ಲಿನಿಕ್‌ ಗಮನಕ್ಕೆ ತಂದರೆ, ಅಧಿಕಾರಿಗಳು ತಕ್ಷಣವೇ ಬಿಬಿಎಂಪಿಯ ನೋಡಲ್‌ ಅಧಿಕಾರಿಗಳನ್ನು ಸಂಪರ್ಕಿಸಿ ಶೀಘ್ರ ಅವುಗಳ ಪರಿಹಾರಕ್ಕೆ ಪ್ರಯತ್ನ ನಡೆಸಿ, ಕ್ರಮ ಕೈಗೊಳ್ಳುವರು,'' ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ಶಶಿಧರ ಶೆಟ್ಟಿ ತಿಳಿಸಿದರು. ವಾರ್ಡ್‌ ಮಟ್ಟದಲ್ಲಿ ಪರಿಹಾರ ಆಲಿಕೆ ಕಾನೂನು ಸೇವಾ ಪ್ರಾಧಿಕಾರ ಯುವ ವಕೀಲರನ್ನು ಹಾಗೂ ಕಾನೂನು ಪಧವೀಧರರನ್ನು ಬಳಸಿಕೊಂಡು ವಾರ್ಡ್‌ ಮಟ್ಟದಲ್ಲಿಯೇ ಸಾರ್ವಜನಿಕರ ಕುಂದು-ಕೊರತೆ ಆಲಿಸಲೂ ಮುಂದಾಗಿದೆ. ಎಲ್ಲ 198 ವಾರ್ಡ್‌ಗಳಲ್ಲಿ ಕನಿಷ್ಠ ಐದು ಮಂದಿ ಪ್ಯಾರಾ ಲೀಗಲ್‌ ಸ್ವಯಂಸೇವಕರನ್ನು ನೇಮಿಸಲಾಗುವುದು. ಸಾರ್ವಜನಿಕರು ಅವರನ್ನು ಸಂಪರ್ಕಿಸಿ ಸಮಸ್ಯೆ ತಿಳಿಸಿದರೆ, ಅವರು ಪಾಲಿಕೆ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ಪರಿಹಾರ ದೊರಕಿಸಿಕೊಡುವುದು ಈ ಹೊಸ ಕಾರ್ಯತಂತ್ರದ ಭಾಗವಾಗಿದೆ. ಸಂಪರ್ಕಿಸುವುದು ಹೇಗೆ ?ಸದ್ಯ ಕಾನೂನು ಸೇವಾ ಘಟಕಗಳನ್ನು ದೂ: 080-25521111 (ಹೈಕೋರ್ಟ್‌ ಸಮಿತಿ), 080-22215143 (ಬೆಂಗಳೂರು ನಗರ ಜಿಲ್ಲಾಸಮಿತಿ) ಮತ್ತು 080-22222919(ಬೆಂಗಳೂರು ಗ್ರಾಮಾಂತರ) ಸಂಪರ್ಕಿಸಬಹುದು. ಕೋರ್ಟ್‌ಗಳಲ್ಲಿ ಹೆಚ್ಚಿನ ಪ್ರಕರಣಗಳು ಪಾಲಿಕೆಗೆ ಸಂಬಂಧಿಸಿದ್ದಾಗಿವೆ. ಅವುಗಳಿಗೆ ಪರಿಹಾರ ದೊರಕಿಸಿಕೊಡಲು ನೂತನ ಉಪಕ್ರಮ ಆರಂಭಿಸಲಾಗುತ್ತಿದೆ. ನಾನಾ ಸಮಸ್ಯೆಗಳಿಗೆ ಯುವ ವಕೀಲರು, ಕಾನೂನು ಪದವೀಧರರ ನೆರವಿನಿಂದ ತ್ವರಿತವಾಗಿ ಪರಿಹಾರ ದೊರಕಿಸಿಕೊಡಲಾಗುವುದು. ನ್ಯಾ. ಬಿ.ವೀರಪ್ಪ, ಕಾರ್ಯನಿರ್ವಾಹಕ ಅಧ್ಯಕ್ಷರು, ಕಾನೂನು ಸೇವಾ ಪ್ರಾಧಿಕಾರ