ಮೌಲ್ಯ ಹೆಚ್ಚಿಸಿಕೊಂಡ ಟಾಪ್ 10 ಕ್ರಿಪ್ಟೋ ಕರೆನ್ಸಿಗಳು? ಡಿ.1ರಂದು ಯಾವ ಕಾಯಿನ್‌ಗೆ ಎಷ್ಟು ಬೆಲೆ?
ಮೌಲ್ಯ ಹೆಚ್ಚಿಸಿಕೊಂಡ ಟಾಪ್ 10 ಕ್ರಿಪ್ಟೋ ಕರೆನ್ಸಿಗಳು? ಡಿ.1ರಂದು ಯಾವ ಕಾಯಿನ್‌ಗೆ ಎಷ್ಟು ಬೆಲೆ?
ಕ್ರಿಪ್ಟೋ ಮಾರುಕಟ್ಟೆ ಎಂದಿನಂತೆಯ ಭಾರೀ ಏಳಿತದಿಂದ ಕೂಡಿದ್ದು, ಬುಧವಾರ ಟಾಪ್ ಕ್ರಿಪ್ಟೋ ಕರೆನ್ಸಿಗಳು ತಮ್ಮ ಬೆಲೆಯಲ್ಲಿ ಏರಿಕೆ ಕಂಡಿವೆ. ಡಿಸೆಂಬರ್ 1 ರಂದು ಟಾಪ್ 10 ಕ್ರಿಪ್ಟೋಕರೆನ್ಸಿಗಳ ಮೌಲ್ಯ ಇಲ್ಲಿದೆ.
ಹೊಸದಿಲ್ಲಿ: ಮಾರುಕಟ್ಟೆ ಎಂದಿನಂತೆಯೇ ಭಾರೀ ಏಳಿತದಿಂದ ಕೂಡಿದ್ದು, ಬುಧವಾರ. ಟಾಪ್ ಕ್ರಿಪ್ಟೋ ಕರೆನ್ಸಿಗಳು ತಮ್ಮ ಬೆಲೆಯಲ್ಲಿ ಏರಿಕೆ ಕಂಡಿವೆ. ಡಿಸೆಂಬರ್ 1 ರಂದು ಟಾಪ್ 10 ಕ್ರಿಪ್ಟೋಕರೆನ್ಸಿಗಳ ಮೌಲ್ಯ ಇಲ್ಲಿದೆ.
ಕ್ರಿಪ್ಟೋ ಕರೆನ್ಸಿಗಳಲ್ಲೇ ಅತಿ ಹೆಚ್ಚು ಬೇಡಿಕೆ ಮತ್ತು ಮೌಲ್ಯ ಹೊಂದಿರುವ ಬಿಟ್‌ಕಾಯಿನ್ ಶೇ.0.14ರಷ್ಟು ಮೌಲ್ಯ ಹೆಚ್ಚಿಸಿಕೊಂಡಿದೆ. ಎರಡನೇ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಎನಿಸಿರುವ ಇಥೆರಿಯಂ ಕೂಡ ಶೇ. 6.57ರಷ್ಟು ಮೌಲ್ಯ ಹೆಚ್ಚಿಸಿಕೊಂಡಿವೆ. ಉಳಿದಂತೆ ಬಿನಾನ್ಸ್ ಕಾಯಿನ್, ಟೆಥರ್, ಸೊಲಾನೋ, ಎಕ್ಸ್‌ಆರ್‌ಪಿ, ಪೋಲ್ಕಾಡಾಟ್ ಕಾಯಿನ್‌ಗಳ ಬೆಲೆಯಲ್ಲೂ ಹೆಚ್ಚಳ ಕಂಡಿದೆ. ಆದರೆ, ಕಾರ್ಡಾನೋ, ಯುಎಸ್‌ಡಿ ಕಾಯಿನ್, ಡೋಜೆಕಾಯಿನ್‌ಗಳ ಮೌಲ್ಯದಲ್ಲಿ ಇಳಿಕೆಯಾಗಿದೆ.
ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಎಷ್ಟು
ವಿಶ್ವದ ಟಾಪ್ 10 ವಹಿವಾಟು ನಡೆಸಿದ ಕ್ರಿಪ್ಟೋಕರೆನ್ಸಿಗಳ ಪೈಕಿ ಬಹುತೇಕ ಕರೆನ್ಸಿಗಳು ಕಳೆದ 24 ಗಂಟೆಗಳಲ್ಲಿ ಮೌಲ್ಯ ಹೆಚ್ಚಿಸಿಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಡಿಸೆಂಬರ್ 1ರಂದು ಅವುಗಳ ಮೌಲ್ಯ ಹೀಗಿದೆ.
ಬಿಟ್‌ಕಾಯಿನ್: $ 57,190
ಇಥೆರಿಯಂ: $4,735.32
ಬಿನಾನ್ಸ್ ಕಾಯಿನ್ : $630.76
ಟೆಥರ್: $1
ಸೊಲಾನೋ: $215.30
ಕಾರ್ಡಾನೋ: $1.58
ಎಕ್ಸ್‌ಆರ್‌ಪಿ: $1.01
ಪೊಲ್ಕಾಡಾಟ್: $38.73
ಯುಎಸ್‌ಡಿ ಕಾಯಿನ್: $0.9981
ಡೋಜೆಕಾಯಿನ್: $0.21
ಭಾರತದಲ್ಲಿ ಬಿಟ್‌ಕಾಯಿನ್ ಅನ್ನು ಅಧಿಕೃತ ಕರೆನ್ಸಿಯಾಗಿ ಸ್ವೀಕರಿಸುವ ಯಾವುದೇ ಯೋಜನಗಳಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಬಿಟ್‌ಕಾಯಿನ್‌ಗೆ ಯಾವುದೇ ಕಾನೂನುಬದ್ಧ ಮಾನ್ಯತೆ ನೀಡಲಾಗಿಲ್ಲ. ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ದತ್ತಾಂಶ ಸಂಗ್ರಹಿಸಲ್ಲ ಎಂದು ಕೇಂದ್ರ ಸರ್ಕಾರ ಸಂಸತ್‌ಗೆ ಲಿಖಿತ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಸೋಮವಾರ ಈ ಬಗ್ಗೆ ವಿವರ ನೀಡಿದ ಸಚಿವೆ, ಸರಕಾರವು ವರ್ಗಾವಣೆ ಕುರಿತ ಮಾಹಿತಿಗಳನ್ನು ಸಂಗ್ರಹಿಸಿಲ್ಲ ಎಂದರು. ಬಿಟ್ ಕಾಯಿನ್ ಒಂದು ಕ್ರಿಪ್ಟೋ ಕರೆನ್ಸಿಯಾಗಿದ್ದು, ಜನತೆ ಸರಕು ಮತ್ತು ಸೇವೆಗಳ ಖರೀದಿಗೂ ಬಳಸುತ್ತಾರೆ. ಬ್ಯಾಂಕ್, ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ವರ್ಗಾವಣೆಗೆ ಬಳಸುತ್ತಾರೆ. ಸರಕಾರ ಕ್ರಿಪ್ಟೋ ಕರೆನ್ಸಿಗಳನ್ನು ನಿಯಂತ್ರಿಸಲು ಈಗ ನಡೆಯುತ್ತಿರುವಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಲಿದೆ. ಸರಕಾರ ಕೆಲವು ಖಾಸಗಿ ಕ್ರಿಪ್ಟೋ ಕರೆನ್ಸಿಗಳಿಗೆ ಮಾತ್ರ ಅವಕಾಶ ನೀಡಿ ಉಳಿದವುಗಳನ್ನು ನಿಷೇಧಿಸುವ ಸಾಧ್ಯತೆ ಇದೆ. ಆರ್‌ಬಿಐ ತನ್ನ ಬಿಡುಗಡೆಗೊಳಿಸಲು ಅವಕಾಶ ನೀಡುವ ನಿರೀಕ್ಷೆ ಇದೆ.