ಬೆಂಗಳೂರು: ಗುರುವಾರದಿಂದ ಮೆಟ್ರೋ ಸಂಚಾರ ಹೆಚ್ಚಳ, ಜನದಟ್ಟಣೆ ವೇಳೆಯಲ್ಲಿ ಪ್ರತಿ 5 ನಿಮಿಷಕ್ಕೊಂದು ರೈಲು

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಸಂಚಾರವು ಗುರುವಾರದಿಂದ ಜನದಟ್ಟಣೆ ಹೆಚ್ಚಿರುವ ಸಮಯದಲ್ಲಿ ಪ್ರತಿ ಐದು ನಿಮಿಷಕ್ಕೆ ಒಂದರಂತೆ ನಡೆಯಲಿದೆ. ಉಳಿದ ಅವಧಿಗಳಲ್ಲಿ ಕೂಡ ಮೆಟ್ರೋ ಓಡಾಟ ಆರಂಭವಾಗಲಿದೆ.

ಬೆಂಗಳೂರು: ಗುರುವಾರದಿಂದ ಮೆಟ್ರೋ ಸಂಚಾರ ಹೆಚ್ಚಳ, ಜನದಟ್ಟಣೆ ವೇಳೆಯಲ್ಲಿ ಪ್ರತಿ 5 ನಿಮಿಷಕ್ಕೊಂದು ರೈಲು
Linkup
ಬೆಂಗಳೂರು: ಸಾಂಕ್ರಾಮಿಕ ಎರಡನೆಯ ಅಲೆಯ ಲಾಕ್‌ಡೌನ್ ನಿಯಮಗಳ ನಡುವೆ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ಸಂಚಾರ ಜೂನ್ 21ರಿಂದ ಮರು ಆರಂಭವಾಗಿತ್ತು. ಈಗ ನಗರದಲ್ಲಿ ಜನರ ಓಡಾಟ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಜುಲೈ 1ರಿಂದ (ಗುರುವಾರ) ಮೆಟ್ರೋ ರೈಲುಗಳ ಸಂಚಾರ ಹೆಚ್ಚಲಿದೆ. ಜನದಟ್ಟಣೆ ಇರುವ ವೇಳೆಗಳಲ್ಲಿ ಪ್ರತಿ ಐದು ನಿಮಿಷಕ್ಕೊಂದು ಮೆಟ್ರೋ ಸಂಚರಿಸಲಿದೆ. ಉಳಿದ ಅವಧಿಯಲ್ಲಿ ಪ್ರತಿ 15 ನಿಮಿಷಕ್ಕೆ ಮೆಟ್ರೋ ಓಡಾಡಲಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮೆಟ್ರೋ ನಿಯಮಿತ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಕಳೆದ ವಾರ ಸಂಚಾರ ಆರಂಭಿಸಿದ್ದ ಮೆಟ್ರೋ, ವಾರದ ದಿನಗಳಲ್ಲಿ ಬೆಳಿಗ್ಗೆ 7 ರಿಂದ 11 ಹಾಗೂ ಸಂಜೆ 3 ರಿಂದ 6ರವರೆಗೆ ಮಾತ್ರ ನಿಯಮಿತ ಸೇವೆ ಒದಗಿಸುತ್ತಿತ್ತು. ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಮುಂದುವರಿದ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಮೆಟ್ರೋ ಸಂಚಾರ ಕೂಡ ಇರುವುದಿಲ್ಲ. ನಗದುರಹಿತ ವ್ಯವಹಾರಗಳಿಗೆ ಮೆಟ್ರೋದಲ್ಲಿ ಆದ್ಯತೆ ನೀಡಲಾಗಿದೆ. ಆದರೆ ಜುಲೈ 1ರಿಂದ ಪ್ರತಿ ಪ್ರಯಾಣಕ್ಕೂ ಸ್ಮಾರ್ಟ್ ಟೋಕನ್ ಕೂಡ ಲಭ್ಯವಾಗಲಿದೆ. ಕರ್ನಾಟಕದಲ್ಲಿ ಮಂಗಳವಾರ 3,222 ಕೋವಿಡ್ ಪ್ರಕರಣಗಳು ಮತ್ತು 93 ಸಾವುಗಳು ವರದಿಯಾಗಿದ್ದವು. ನಗರ ಜಿಲ್ಲೆಯಲ್ಲಿ 753 ಮಂದಿಗೆ ಸೋಂಕು ತಗುಲಿತ್ತು.