ಫಿಫಾ ವಿಶ್ವಕಪ್: ಭಾನುವಾರದ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯ: ಅರ್ಜೆಂಟಿನಾ ಸೂಪರ್ ಸ್ಟಾರ್ ಮೆಸ್ಸಿ

ಇದೇ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವೇ ನನ್ನ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಪಂದ್ಯ ಎಂದು ಅರ್ಜೆಂಟಿನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಘೋಷಣೆ ಮಾಡಿದ್ದಾರೆ. ದೋಹಾ: ಇದೇ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವೇ ನನ್ನ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಪಂದ್ಯ ಎಂದು ಅರ್ಜೆಂಟಿನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಘೋಷಣೆ ಮಾಡಿದ್ದಾರೆ.
ಮಂಗಳವಾರ ರಾತ್ರಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧ 3-0 ಅಂತರದ ಭರ್ಜರಿ ಜಯದ ಮೂಲಕ ಫೈನಲ್ ಪ್ರವೇಶಿಸಿರುವ ಅರ್ಜೆಂಟಿನಾ ತಂಡಕ್ಕೆ ಮೆಸ್ಸಿ ಬೆನ್ನೆಲುಬಾಗಿ ನಿಂತಿದ್ದು, ಇದೀಗ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವೇ ನನ್ನ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಪಂದ್ಯ ಎಂದು ಮೆಸ್ಸಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಫಿಫಾ ವಿಶ್ವಕಪ್: ಮೆಸ್ಸಿ ಮ್ಯಾಜಿಕ್ ಗೆ ತಲೆ ಬಾಗಿದ ಕ್ರೊಯೇಷಿಯಾ, 6ನೇ ಬಾರಿಗೆ ಫೈನಲ್ ಪ್ರವೇಶಿಸಿದ ಅರ್ಜೆಂಟಿನಾ
ತಾರ್ನಲ್ಲಿ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್ನಲ್ಲಿ ತಮ್ಮ ನೇತೃತ್ವದ ಅರ್ಜೆಂಟಿನಾ ತಂಡ, ಫ್ರಾನ್ಸ್ ಅಥವಾ ಮೊರಕ್ಕೊವನ್ನು ಎದುರಿಸುವಾಗ ತಮ್ಮ ಕೊನೆಯ ವಿಶ್ವಕಪ್ ಪಂದ್ಯವನ್ನು ಆಡುವುದಾಗಿ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಖಚಿತಪಡಿಸಿದ್ದಾರೆ. ವಾರಾಂತ್ಯದಲ್ಲಿ ಅವರು 1986 ರ ನಂತರ ದೇಶಕ್ಕೆ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ತರಲು ಪ್ರಯತ್ನಿಸಲಿದ್ದಾರೆ.
ಸೆಮಿ ಫೈನಲ್ ಪಂದ್ಯದ ಬಳಿಕ ಅರ್ಜೆಂಟಿನಾದ ಮಾಧ್ಯಮ ಡಿಯಾರಿಯೊ ಡಿಪೋರ್ಟಿವೊ ಓಲೆನೊಂದಿಗೆ ಮಾತನಾಡಿದ ಮೆಸ್ಸಿ ‘ವಿಶ್ವಕಪ್ನಲ್ಲಿ ಕೊನೆಯ ಪಂದ್ಯವಾಗಿ ಫೈನಲ್ನಲ್ಲಿ ಆಡಲು ನನಗೆ ತುಂಬಾ ಸಂತೋಷವಾಗಿದೆ. ಅದು ನಿಜಕ್ಕೂ ಬಹಳ ಸಂತಸ ತಂದಿದೆ. ಫೈನಲ್ನಲ್ಲಿ ನನ್ನ ಕೊನೆಯ ಪಂದ್ಯ ಆಡುವ ಮೂಲಕ ನನ್ನ ವಿಶ್ವಕಪ್ ಪಯಣವನ್ನು ಮುಗಿಸುತ್ತಿರುವುದು ಅತ್ಯಂತ ಸಂತೋಷವಾಗಿದೆ. ಈ ಸಾಧನೆ ನನಗೆ ಖುಷಿ ತಂದಿದೆ.. ಈ ವಿಶ್ವಕಪ್ನಲ್ಲಿ ನಾನು ಕಳೆದ ಕ್ಷಣಗಳೆಲ್ಲವೂ ಭಾವುಕವಾಗಿದೆ, ಅರ್ಜೆಂಟೀನಾದಲ್ಲಿ ಅದನ್ನು ಎಷ್ಟು ಆನಂದಿಸಲಾಗಿದೆ ಎಂಬುದನ್ನು ನೋಡಿದ್ದೇನೆ’ಎಂದು ತಿಳಿಸಿದರು.
ಇದನ್ನೂ ಓದಿ: ಫಿಫಾ ವಿಶ್ವಕಪ್ ಫುಟ್ಬಾಲ್: ಹೋಟೆಲ್, ಕ್ಲಬ್, ಬಾರ್, ರೆಸ್ಟೋರೆಂಟ್ ವ್ಯಾಪಾರದ ಅವಧಿ ವಿಸ್ತರಿಸಿದ ಬೆಂಗಳೂರು ಪೊಲೀಸ್
ಹಲವು ವರ್ಷಗಳ ಬಳಿಕ ಮುಂದಿನ ವಿಶ್ವಕಪ್ ನಡೆಯುತ್ತದೆ. ಅಲ್ಲಿ ಇಂತಹ ಸಾಧನೆ ಮಾಡಲಾಗುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ. ಈ ರೀತಿ ವಿದಾಯ ಹೇಳುವುದು ಅತ್ಯುತ್ತಮ ಎನಿಸುತ್ತದೆ. ದಾಖಲೆಗಳನ್ನು ಮಾಡುವುದು ಓಕೆ. ಆದರೆ, ಒಂದು ತಂಡವಾಗಿ ಸಾಧಿಸುವುದು ಅತ್ಯಂತ ಪ್ರಮುಖ. ತಂಡದ ಎಲ್ಲರಿಗೂ ಅದೊಂದು ಸುಂದರವಾದ ವಿಷಯ. ಸತತ ಪರಿಶ್ರಮದ ಬಳಿಕ ನಾವು ದೊಡ್ಡ ಸಾಧನೆಗೆ ಇನ್ನೊಂದು ಹೆಜ್ಜೆ ದೂರದಲ್ಲಿದ್ದೇವೆ. ಅದಕ್ಕಾಗಿ ಎಲ್ಲ ಪ್ರಯತ್ನ ಮಾಡುತ್ತೇವೆ’ಎಂದು ಮೆಸ್ಸಿ ಹೇಳಿದರು.