ಫಿಫಾ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಅರ್ಜೆಂಟಿನಾಗೆ ಜಯ, ಕ್ವಾರ್ಟರ್ ಫೈನಲ್‌ಗೆ ಮೆಸ್ಸಿ ಬಳಗ

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟಿನಾ ತಂಡ ಮತ್ತೊಂದು ಮಹತ್ವದ ಗೆಲುವು ಸಾಧಿಸಿದ್ದು, ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವಿನ ಮೂಲಕ ಟೂರ್ನಿಯ ಕ್ವಾರ್ಟರ್ ಫೈನಲ್‌ ಹಂತ ಪ್ರವೇಶಿಸಿದೆ. ದೋಹಾ: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟಿನಾ ತಂಡ ಮತ್ತೊಂದು ಮಹತ್ವದ ಗೆಲುವು ಸಾಧಿಸಿದ್ದು, ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವಿನ ಮೂಲಕ ಟೂರ್ನಿಯ ಕ್ವಾರ್ಟರ್ ಫೈನಲ್‌ ಹಂತ ಪ್ರವೇಶಿಸಿದೆ. ಅರ್ಜೆಂಟಿನಾ ಸ್ಟಾರ್ ಆಟಗಾರ ಲಯೊನೆಲ್‌ ಮೆಸ್ಸಿ ಅವರು ತಮ್ಮ ವೃತ್ತಿಜೀವನದ 1000ನೇ ಪಂದ್ಯದಲ್ಲಿ ಎಲ್ಲರನ್ನೂ ಗೋಲು ಗಳಿಸುವ ಮೂಲಕ ಮಂತ್ರಮುಗ್ಧಗೊಳಿಸಿದರು. ಫಿಫಾ ವಿಶ್ವಕಪ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾನುವಾರ ಅರ್ಜೆಂಟೀನಾ  2-1 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿತು. ಇದನ್ನೂ ಓದಿ: 4 ಬಾರಿ ಚಾಂಪಿಯನ್ ಜರ್ಮನಿಯನ್ನು ವಿಶ್ವಕಪ್ ಟೂರ್ನಿಯಿಂದಲೇ ಹೊರದಬ್ಬಿದ ಜಪಾನ್‌ ಅಚ್ಚರಿ ಗೋಲು! ಅಹಮದ್‌ ಬಿನ್‌ ಅಲಿ ಕ್ರೀಡಾಂಗಣದಲ್ಲಿ ಲಯೊನೆಲ್‌ ಮೆಸ್ಸಿ ಮೋಡಿ ಮಾಡಿದರು. 35ನೇ ನಿಮಿಷದಲ್ಲಿ ಮೆಸ್ಸಿ ಮನಮೋಹಕ ಗೋಲು ಬಾರಿಸಿ ಗಮನ ಸೆಳೆದರು. ಇತ್ತ 57ನೇ ನಿಮಿಷದಲ್ಲಿ ಜೂಲಿಯನ್‌ ಅಲ್ವಾರೆಜ್‌ ಮತ್ತೊಂದು ಗೋಲು ತಂದುಕೊಟ್ಟು ಗೆಲುವಿಗೆ ಕಾರಣರಾದರು.  ಇದನ್ನೂ ಓದಿ: ಫೀಫಾ ವಿಶ್ವಕಪ್ 2022: ಅಮೆರಿಕಾವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನೆದರ್ಲ್ಯಾಂಡ್ ಈ ಮೂಲಕ ಮೆಸ್ಸಿ ಈ ಟೂರ್ನಿಯಲ್ಲಿ ಗಳಿಸಿದ ಮೂರು ಗೋಲುಗಳು ಸೇರಿದಂತೆ ವಿಶ್ವಕಪ್‌ನಲ್ಲಿ ಒಟ್ಟು ಒಂಬತ್ತು ಗೋಲು ಬಾರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.  

ಫಿಫಾ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಅರ್ಜೆಂಟಿನಾಗೆ ಜಯ, ಕ್ವಾರ್ಟರ್ ಫೈನಲ್‌ಗೆ ಮೆಸ್ಸಿ ಬಳಗ
Linkup
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟಿನಾ ತಂಡ ಮತ್ತೊಂದು ಮಹತ್ವದ ಗೆಲುವು ಸಾಧಿಸಿದ್ದು, ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವಿನ ಮೂಲಕ ಟೂರ್ನಿಯ ಕ್ವಾರ್ಟರ್ ಫೈನಲ್‌ ಹಂತ ಪ್ರವೇಶಿಸಿದೆ. ದೋಹಾ: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟಿನಾ ತಂಡ ಮತ್ತೊಂದು ಮಹತ್ವದ ಗೆಲುವು ಸಾಧಿಸಿದ್ದು, ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಗೆಲುವಿನ ಮೂಲಕ ಟೂರ್ನಿಯ ಕ್ವಾರ್ಟರ್ ಫೈನಲ್‌ ಹಂತ ಪ್ರವೇಶಿಸಿದೆ. ಅರ್ಜೆಂಟಿನಾ ಸ್ಟಾರ್ ಆಟಗಾರ ಲಯೊನೆಲ್‌ ಮೆಸ್ಸಿ ಅವರು ತಮ್ಮ ವೃತ್ತಿಜೀವನದ 1000ನೇ ಪಂದ್ಯದಲ್ಲಿ ಎಲ್ಲರನ್ನೂ ಗೋಲು ಗಳಿಸುವ ಮೂಲಕ ಮಂತ್ರಮುಗ್ಧಗೊಳಿಸಿದರು. ಫಿಫಾ ವಿಶ್ವಕಪ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾನುವಾರ ಅರ್ಜೆಂಟೀನಾ  2-1 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿತು. ಇದನ್ನೂ ಓದಿ: 4 ಬಾರಿ ಚಾಂಪಿಯನ್ ಜರ್ಮನಿಯನ್ನು ವಿಶ್ವಕಪ್ ಟೂರ್ನಿಯಿಂದಲೇ ಹೊರದಬ್ಬಿದ ಜಪಾನ್‌ ಅಚ್ಚರಿ ಗೋಲು! ಅಹಮದ್‌ ಬಿನ್‌ ಅಲಿ ಕ್ರೀಡಾಂಗಣದಲ್ಲಿ ಲಯೊನೆಲ್‌ ಮೆಸ್ಸಿ ಮೋಡಿ ಮಾಡಿದರು. 35ನೇ ನಿಮಿಷದಲ್ಲಿ ಮೆಸ್ಸಿ ಮನಮೋಹಕ ಗೋಲು ಬಾರಿಸಿ ಗಮನ ಸೆಳೆದರು. ಇತ್ತ 57ನೇ ನಿಮಿಷದಲ್ಲಿ ಜೂಲಿಯನ್‌ ಅಲ್ವಾರೆಜ್‌ ಮತ್ತೊಂದು ಗೋಲು ತಂದುಕೊಟ್ಟು ಗೆಲುವಿಗೆ ಕಾರಣರಾದರು.  ಇದನ್ನೂ ಓದಿ: ಫೀಫಾ ವಿಶ್ವಕಪ್ 2022: ಅಮೆರಿಕಾವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನೆದರ್ಲ್ಯಾಂಡ್ ಈ ಮೂಲಕ ಮೆಸ್ಸಿ ಈ ಟೂರ್ನಿಯಲ್ಲಿ ಗಳಿಸಿದ ಮೂರು ಗೋಲುಗಳು ಸೇರಿದಂತೆ ವಿಶ್ವಕಪ್‌ನಲ್ಲಿ ಒಟ್ಟು ಒಂಬತ್ತು ಗೋಲು ಬಾರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.   ಫಿಫಾ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಅರ್ಜೆಂಟಿನಾಗೆ ಜಯ, ಕ್ವಾರ್ಟರ್ ಫೈನಲ್‌ಗೆ ಮೆಸ್ಸಿ ಬಳಗ