ಪರಿಚಯವೇ ಇಲ್ಲದ ಯೋಗಿಯ ಮಾತಿನಂತೆ ಎನ್​ಎಸ್​ಇಯಲ್ಲಿ ನಿರ್ಧಾರ ಕೈಗೊಂಡಿದ್ದ ಚಿತ್ರಾ ರಾಮಕೃಷ್ಣ!

ಭಾರತದ 'ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE)ದ ಮಾಜಿ CEO ಹಾಗೂ MD ಚಿತ್ರಾ ರಾಮಕೃಷ್ಣ(Chitra Ramkrishna) ಅವರ ಎಲ್ಲ ಪ್ರಮುಖ ನಿರ್ಧಾರಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬರ ಪ್ರಭಾವ ಇತ್ತು ಎಂಬ ವಿಷಯ ಸೆಬಿ ತನಿಖೆಯಿಂದ ಬೆಳಕಿಗೆ ಬಂದಿದೆ.

ಪರಿಚಯವೇ ಇಲ್ಲದ ಯೋಗಿಯ ಮಾತಿನಂತೆ ಎನ್​ಎಸ್​ಇಯಲ್ಲಿ ನಿರ್ಧಾರ ಕೈಗೊಂಡಿದ್ದ ಚಿತ್ರಾ ರಾಮಕೃಷ್ಣ!
Linkup
ಹೊಸದಿಲ್ಲಿ: ಭಾರತದ 'ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ()ದ ಮಾಜಿ CEO ಹಾಗೂ MD ಚಿತ್ರಾ ರಾಮಕೃಷ್ಣ() ಅವರ ಎಲ್ಲ ಪ್ರಮುಖ ನಿರ್ಧಾರಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬರ ಪ್ರಭಾವ ಇತ್ತು ಎಂಬ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ. ಅವರು ಅಪರಿಚಿತ ಹಾಗೂ - ಮುಖಗುರುತು ಇಲ್ಲದ ಹಿಮಾಲಯನ್‌ ಯೋಗಿಯೊಬ್ಬರ ಮಾತಿಗೆ ಕಟ್ಟು ಬಿದ್ದಿದ್ದರು. ಸುಮಾರು 20 ವರ್ಷಗಳಿಂದ ಚಿತ್ರಾ ರಾಮಕೃಷ್ಣ ಅವರು ಯೋಗಿಯೊಂದಿಗೆ ಇಮೇಲ್ ಮೂಲಕ ಸಂವಹನ ನಡೆಸಿದ್ದರು. ಆ ಯೋಗಿಯೇ ಆನಂದ್ ಸುಬ್ರಮಣಿಯನ್ ಅವರ ನೇಮಕಕ್ಕೆ ಚಿತ್ರಾಗೆ ಮಾರ್ಗದರ್ಶನ ನೀಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. 2014ರ ಮಾರ್ಚ್ನಲ್ಲಿ ಚಿತ್ರಾ ರಾಮಕೃಷ್ಣ ಅವರು ಸುಬ್ರಮಣಿಯನ್ ಅವರಿಗೆ ಶೇಕಡಾ 20ರಷ್ಟು ಹೆಚ್ಚಳವನ್ನು ಅನುಮೋದಿಸಿದರು ಮತ್ತು ಅವರ ವೇತನವನ್ನು ರೂ. 2.01 ಕೋಟಿಗೆ ಪರಿಷ್ಕರಿಸಲಾಯಿತು. ಐದು ವಾರಗಳ ನಂತರ, ಸುಬ್ರಮಣಿಯನ್ ಅವರ ಸಂಬಳವನ್ನು ಮತ್ತೆ ಶೇಕಡಾ 15ರಷ್ಟು ಮೇಲೇರಿಸಿ, ರೂ. 2.31 ಕೋಟಿಗೆ ಪರಿಷ್ಕರಿಸಲಾಯಿತು. ಏಕೆಂದರೆ ಚಿತ್ರಾ ರಾಮಕೃಷ್ಣ ಅವರು ಸುಬ್ರಮಣಿಯನ್ ಕಾರ್ಯಕ್ಷಮತೆಯನ್ನು A+ (ಅಸಾಧಾರಣ) ಎಂದು ಕರೆದಿದ್ದರು. 2015ರ ಹೊತ್ತಿಗೆ ಅವರ ಸಿಟಿಸಿ (ಕಾಸ್ಟ್ ಟು ಕಂಪೆನಿ) 5 ಕೋಟಿ ರೂಪಾಯಿಗೆ ಏರಿತು. ಅವರಿಗೆ ಚಿತ್ರಾ ಪಕ್ಕದಲ್ಲಿ ಕ್ಯಾಬಿನ್ ನೀಡಲಾಯಿತು ಮತ್ತು ಪ್ರಥಮ ದರ್ಜೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣವನ್ನು ನೀಡಲಾಯಿತು. ಇವೆಲ್ಲವೂ ಯೋಗಿಯ ಸೂಚನೆಯಂತೆಯೇ ಇತ್ತು. ಭಾರತದ ಅತಿದೊಡ್ಡ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಚಿತ್ರಾ ಅಸಮರ್ಥ ತೀರ್ಮಾನ ಕೈಗೊಂಡಿರುವುದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಚಿತ್ರಾ ರಾಮಕೃಷ್ಣ ಮೇಲೆ ₹3 ಕೋಟಿ, ಶ್ರೀ ನರೇನ್ (Nareen) ಮತ್ತು ಶ್ರೀ ಸುಬ್ರಮಣಿಯನ್ (Subramanian) ಮೇಲೆ ತಲಾ ₹2 ಕೋಟಿ ಮತ್ತು ಮುಖ್ಯ ನಿಯಂತ್ರಣ ಅಧಿಕಾರಿ ಹಾಗೂ ಮುಖ್ಯ ಅನುಸರಣೆ ಅಧಿಕಾರಿಯಾಗಿದ್ದ ನರಸಿಂಹನ್‌ಗೆ ₹6 ಲಕ್ಷ ದಂಡ ವಿಧಿಸಿ ಸೆಬಿ ಆದೇಶಸಿದೆ. ಆನಂದ್ ಸುಬ್ರಮಣಿಯನ್ ಅವರನ್ನು ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಎಂಡಿ ಸಲಹೆಗಾರರನ್ನಾಗಿ ನೇಮಿಸಿದ ಪ್ರಕರಣದಲ್ಲಿ ಸೆಕ್ಯುರಿಟೀಸ್ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫೆಬ್ರವರಿ 11 ರಂದು ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಣ್ ಮತ್ತು ಇತರರಿಗೆ ಸೆಬಿ ದಂಡ ವಿಧಿಸಿತು. ಚಿತ್ರಾ ಮೇಲೆ ಹಿಮಾಲಯ ಯೋಗಿ ಪ್ರಭಾವ ಚಿತ್ರಾ ರಾಮಕೃಷ್ಣ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದೆ. ಉದ್ಯಮದಲ್ಲಿ ಅಷ್ಟಾಗಿ ತಿಳಿದಿಲ್ಲದ ಆನಂದ್ ಸುಬ್ರಮಣಿಯನ್ ನೇಮಿಸಲು ಹಿಮಾಲಯದಲ್ಲಿ ನೆಲೆಸಿರುವ ಯೋಗಿ ಮಾರ್ಗದರ್ಶನ ಪಡೆದಿದ್ದಾರೆ. ಸುಬ್ರಮಣಿಯನ್ ಅವರನ್ನು ಏಪ್ರಿಲ್ 2015 ರಿಂದ ಗ್ರೂಪ್ ಎಕ್ಸಿಕ್ಯೂಟಿವ್ ಆಫೀಸರ್ ಮತ್ತು ಎಂಡಿ ಸಲಹೆಗಾರ ಎಂದು ಚಿತ್ರಾ ರಾಮಕೃಷ್ಣ ಮರು ನೇಮಕಾತಿ ಮಾಡಿಕೊಂಡಿದ್ದಾರೆ. ಯೋಗಿ ಜೊತೆ 20 ವರ್ಷಗಳಿಂದ ಇಮೇಲ್ ಸಂವಹನ ಸುಮಾರು 20 ವರ್ಷಗಳಿಂದ ಚಿತ್ರಾ ರಾಮಕೃಷ್ಣ ಎಂದಿಗೂ ಭೇಟಿಯಾಗದ ಯೋಗಿಯೊಂದಿಗೆ ಇಮೇಲ್ ಮೂಲಕ ಸಂವಹನ ನಡೆಸಿದ್ದರು. ಸುಬ್ರಮಣಿಯನ್ನನ್ನು ಎನ್‌ಎಸ್‌ಇಯಲ್ಲಿ ಎರಡನೇ ಕಮಾಂಡ್ ಆಗಿ ನೇಮಿಸಲು ಮಾರ್ಗದರ್ಶನ ನೀಡಿದರು ಎಂದು ಸೆಬಿಯ ತನಿಖೆಯು ಬಹಿರಂಗಪಡಿಸಿತು. ಚಿತ್ರಾ ರಾಮಕೃಷ್ಣ ಅಪರಿಚಿತ ಯೋಗಿಯನ್ನು "ಸಿರೋನ್ಮಣಿ" ಎಂದು ಉಲ್ಲೇಖಿಸಿದ್ದಾರೆ. NSEನ 5 ವರ್ಷಗಳ ಹಣಕಾಸು ಡೇಟಾ, ಲಾಭಾಂಶ ಅನುಪಾತ, ವ್ಯವಹಾರ ಯೋಜನೆಗಳು, ಮಂಡಳಿಯ ಸಭೆಯ ಕಾರ್ಯಸೂಚಿಯಂತಹ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡರು ಮತ್ತು ಉದ್ಯೋಗಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನಗಳ ಬಗ್ಗೆ ಕೂಡ ಸಹ ಸಲಹೆ ಪಡೆದಿದ್ದಾರೆ ಅಂತ ಸೆಬಿ ತಿಳಿಸಿದೆ. ಇನ್ನು ಈ ಬಗ್ಗೆ ವಿಚಾರಣೆ ವೇಳೆ ಮಾತಾಡಿದ ಚಿತ್ರಾ ಯೋಗಿ ಆಧ್ಯಾತ್ಮಿಕ ಶಕ್ತಿ ಎಂದಿದ್ದಾರೆ. ಇಮೇಲ್‌ನ ವಿಷಯಗಳನ್ನು ಅವರು ನಿರಾಕರಿಸಿದ್ದಾರೆ. ಚಿತ್ರಾ ರಾಮಕೃಷ್ಣನ್ ಹಗರಣ ಸುಬ್ರಮಣಿಯನ್ ಅವರ ನೇಮಕಾತಿ ಮತ್ತು ಆಲ್ಗೋ ಟ್ರೇಡಿಂಗ್ ಹಗರಣ ಮತ್ತು ಅಧಿಕಾರ ದುರುಪಯೋಗದ ಸಂಬಂಧ 2016ರಲ್ಲಿ ಚಿತ್ರಾ ರಾಮಕೃಷ್ಣ ಅವರನ್ನು ಎನ್‌ಎಸ್‌ಇಯಿಂದ ಹೊರಹಾಕಲಾಗಿತ್ತು. ರಾಮಕೃಷ್ಣ ಅವರು ನಿರ್ಭಯವಾಗಿ ಹಗರಣ ನಡೆಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ದೊಡ್ಡ ಸರ್ಕಾರಿ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳನ್ನು ಒಳಗೊಂಡಿರುವ ಹಿರಿಯ ಆಡಳಿತ ಮಂಡಳಿ ಸದಸ್ಯರು ಯಾರೂ ಆಕೆಯ ನಿರ್ಧಾರಗಳನ್ನು ಎಂದಿಗೂ ವಿರೋಧಿಸಲಿಲ್ಲ. ಚಿತ್ರಾ ರಾಮಕೃಷ್ಣನ್ಗೆ ಸೆಬಿ ಶಿಕ್ಷೆ ಚಿತ್ರಾ ರಾಮಕೃಷ್ಣ ಅವರನ್ನು ಈಗ 3 ವರ್ಷಗಳ ಕಾಲ ಬಂಡವಾಳ ಮಾರುಕಟ್ಟೆಯಿಂದ ನಿರ್ಬಂಧಿಸಲಾಗಿದೆ. 1.54 ಕೋಟಿ ಹೆಚ್ಚುವರಿ ರಜೆ ಎನ್‌ಕ್ಯಾಶ್‌ಮೆಂಟ್ ಮತ್ತು ₹ 2.83 ಕೋಟಿಗಳ ಮುಂದೂಡಲ್ಪಟ್ಟ ಬೋನಸ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶಿಸಿದೆ.