ನಾನಲ್ಲಿ ಇದ್ದಿದ್ರೆ ಉದ್ಧವ್‌ ಠಾಕ್ರೆಗೆ ಕಪಾಳ ಮೋಕ್ಷ ಮಾಡುತ್ತಿದ್ದೆ: ಕೇಂದ್ರ ಸಚಿವ ನಾರಾಯಣ್‌ ರಾಣೆ ವಿವಾದ

ಕೇಂದ್ರ ಸಚಿವ ನಾರಾಯಣ್‌ ರಾಣೆ ನೀಡಿದ ವಿವಾದಿತ ಹೇಳಿಕೆ ಮಹಾರಾಷ್ಟ್ರದಲ್ಲಿ ಕಿಡಿ ಹೊತ್ತಿಸಿದೆ. ಹೌದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಕಪಾಳ ಮೋಕ್ಷ ಮಾಡುತ್ತೇನೆ ಎಂದು ನಾರಾಯಣ್‌ ರಾಣೆ ಸೋಮವಾರ ಹೇಳಿದ್ದರು. ಈಗ ಅವರ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ನಾರಾಯಣ್‌ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾನಲ್ಲಿ ಇದ್ದಿದ್ರೆ ಉದ್ಧವ್‌ ಠಾಕ್ರೆಗೆ ಕಪಾಳ ಮೋಕ್ಷ ಮಾಡುತ್ತಿದ್ದೆ: ಕೇಂದ್ರ ಸಚಿವ ನಾರಾಯಣ್‌ ರಾಣೆ ವಿವಾದ
Linkup
ಮುಖ್ಯಮಂತ್ರಿ ಅವರಿಗೆ ಕಪಾಳ ಮೋಕ್ಷ ಮಾಡುತ್ತೇನೆ ಎಂದು ಕೇಂದ್ರ ಸಚಿವ ಹೇಳಿದ್ದಾರೆ. ಇದು ಈಗ ಭಾರೀ ವಿವಾದ ಸೃಷ್ಟಿಸಿದ್ದು, ಸಿಎಂ ವಿರುದ್ಧ ಟೀಕೆ ಮಾಡಿರುವುದಕ್ಕೆ ನಾರಾಯಣ್‌ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ನಾರಾಯಣ್‌ ರಾಣೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸೋಮವಾರ ರಾಯಘಡ ಜಿಲ್ಲೆಯಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ನಾರಾಯಣ್‌ ರಾಣೆ, ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಬಂದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ತಮ್ಮ ಭಾಷಣದ ವೇಳೆ ಎಷ್ಟನೇ ಸ್ವಾತಂತ್ರ್ಯೋತ್ಸವ ಎಂದು ಕೇಳಲು ಹಿಂದಕ್ಕೆ ವಾಲಿದ್ದರು. ನಾನು ಅಲ್ಲಿದ್ದರೆ, ಕಪಾಳ ಮೋಕ್ಷ ಮಾಡುತ್ತಿದ್ದೆ ಎಂದು ಹೇಳಿದ್ದರು. ಉದ್ಧವ್‌ ಠಾಕ್ರೆ ತಮ್ಮ ಆಗಸ್ಟ್‌ 15ರ ಭಾಷಣದ ವೇಳೆ ಸ್ವಾತಂತ್ಯ ಬಂದ ವರ್ಷವನ್ನು ಮರೆತಿದ್ದಾರೆ. ಭಾಷಣದ ನಡುವೆ ಸ್ವಾತಂತ್ರ್ಯದ ವರ್ಷವನ್ನು ಪರಿಶೀಲಿಸಿದ್ದಾರೆ ಎಂದು ಶಿವಸೇನೆಯ ಮಾಜಿ ನಾಯಕ, ಮಾಜಿ ಸಿಎಂ ಆಗಿರುವ ನಾರಾಯಣ್‌ ರಾಣೆ ಹೇಳಿದ್ದಾರೆ. ಈಗ ಈ ಹೇಳಿಕೆ ಮಹಾರಾಷ್ಟ್ರದಲ್ಲಿ ಭಾರೀ ವಿವಾದ ಸೃಷ್ಟಿಸಿದೆ. ಶಿವಸೇನೆ ಕಾರ್ಯಕರ್ತರು ರಾಣೆ ಹೇಳಿಕೆಯನ್ನು ಖಂಡಿಸಿದ್ದು, ಸೇರಿ ಅನೇಕ ನಗರಗಳಲ್ಲಿ ಕೋಳಿ ಕಳ್ಳ ಎಂಬ ಪೋಸ್ಟರ್‌ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ನಾರಾಯಣ್‌ ರಾಣೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ರತ್ನಗಿರಿ-ಸಿಂಧೂದುರ್ಗನ ಶಿವಸೇನೆ ಸಂಸದ ವಿನಾಯಕ್‌ ರಾವತ್‌ ಟೀಕಿಸಿದ್ದಾರೆ. ಬಿಜೆಪಿ ನಾಯಕರನ್ನು ಮೆಚ್ಚಿಸಲು ನಾರಾಯಣ್‌ ರಾಣೆ ಶಿವಸೇನೆ ಹಾಗೂ ಅದರ ನಾಯಕರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸೇರಿದ ಬಳಿಕ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮೋದಿ ರಾಣೆ ಅವರನ್ನು ಸಂಪುಟದಿಂದ ಕೈಬಿಡಬೇಖು ಎಂದು ಒತ್ತಾಯಿಸಿದ್ದಾರೆ. ಇನ್ನು, ಸಿಎಂ ವಿರುದ್ಧ ಟೀಕೆ ಮಾಡಿರುವುದಕ್ಕೆ ನಾರಾಯಣ್‌ ರಾಣೆ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಸಿಕ್‌ ಪೊಲೀಸರ ತಂಡ ಈಗಾಗಲೇ ಕೊಂಕಣ ಪ್ರದೇಶದ ಚಿಪ್ಪುನ್‌ಗೆ ಹೊರಟಿದೆ. ಸದ್ಯ ನಾರಾಯಣ್‌ ರಾಣೆ ಅಲ್ಲಿಯೇ ಇದ್ದಾರೆ ಎಂಬ ಮಾಹಿತಿ ಇದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಪೊಲೀಸರು ನೀಡಿಲ್ಲ.