ದೇಶದ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಯಾವತ್ತಿಗೂ ಮಾಡುವುದಿಲ್ಲ: ದೀಪಾ ಕರ್ಮಕರ್

ಸ್ಪರ್ಧೆಯಿಂದ 21 ತಿಂಗಳ ನಿಷೇಧ ಎಂಬ ಸುದ್ದಿ ಹೊರಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಭಾರತೀಯ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಕರ್, ದೇಶದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ನವದೆಹಲಿ: ಸ್ಪರ್ಧೆಯಿಂದ 21 ತಿಂಗಳ ನಿಷೇಧ ಎಂಬ ಸುದ್ದಿ ಹೊರಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಭಾರತೀಯ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಕರ್, ದೇಶದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ದೀಪಾ ಕರ್ಮಕರ್ ಅವರಿಗೆ ಹೇರಲಾಗಿರುವ ನಿಷೇಧ ಜುಲೈ 10ಕ್ಕೆ ಮುಕ್ತಾಯವಾಗುತ್ತದೆ. ಪರೀಕ್ಷಾ ವರದಿಯಲ್ಲಿ ದೀಪಾ ನಿಷೇಧಿತ ವಸ್ತುವಾದ ಹೈಜೆನಮೈನ್ ಸೇವಿಸಿರುವುದು ಪತ್ತೆಯಾಗಿದೆ.ಪಾಸಿಟಿವ್ ಸ್ಯಾಂಪಲ್ ನ್ನು ಅಕ್ಟೋಬರ್ 11, 2021ರಲ್ಲಿ ಸಂಗ್ರಹಿಸಲಾಗಿತ್ತು.
ಈ ಕುರಿತು ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿರುವ ಅವರು, ನನ್ನ ವೃತ್ತಿಜೀವನದಲ್ಲಿ ಅತಿ ದೀರ್ಘಕಾಲ ನಡೆಸಿದ ಹೋರಾಟಕ್ಕೆ ಇಂದು ಅಂತ್ಯ ಸಿಕ್ಕಿದೆ. 2021ರ ಅಕ್ಟೋಬರ್ ನಲ್ಲಿ ಸ್ಪರ್ಧೆಯ ಸಂದರ್ಭದಲ್ಲಿ ನನ್ನ ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿತ್ತು. ಪಾಸಿಟಿವ್ ಎಂದು ಬಂದಿತು. ಅದು ನನ್ನ ಅರಿವಿಗೆ ಬಾರದೇ ನಾನು ಸೇವಿಸಿದ್ದು ಎಲ್ಲಿಂದ ಬಂತು, ಹೇಗೆ ಸೇವಿಸಿದೆ ಎಂದು ಗೊತ್ತಾಗಲಿಲ್ಲ. ಕೂಡಲೇ ನಾನು ಸಾಧ್ಯತಾ ಅಮಾನತು ತೆಗೆದುಕೊಳ್ಳಲು ನಿರ್ಧರಿಸಿ ಅಂತಾರಾಷ್ಟ್ರೀಯ ಫೆಡರೇಷ್ ನಲ್ಲಿ ಹೋರಾಡಲು ಮುಂದಾದೆ ಎಂದರು.
29 ವರ್ಷದ ದೀಪಾ ಕರ್ಮಕರ್ ಅವರ ಶಿಕ್ಷೆಯ ಪ್ರಮಾಣವನ್ನು ಇದೀಗ 3 ತಿಂಗಳು ಕಡಿತಗೊಳಿಸಲಾಗಿದೆ. ಸೌಹಾರ್ದಯುತವಾಗಿ ಕೇಸು ಬಗೆಹರಿದಿದೆ. ಜುಲೈಯಲ್ಲಿ ನಾನು ಆಟಕ್ಕೆ ಮರಳಬಹುದು ಎಂದರು.
ಇದನ್ನೂ ಓದಿ: ನಿಷೇಧಿತ ವಸ್ತು ಬಳಕೆ; ಜಿಮ್ನಾಸ್ಟ್ ದೀಪಾ ಕರ್ಮಾಕರ್ 21 ತಿಂಗಳು ಅಮಾನತು
ಮಾಧ್ಯಮಗಳಲ್ಲಿ ತಪ್ಪು ವರದಿ: ನನ್ನನ್ನು ಎರಡು ವರ್ಷಗಳ ಕಾಲ ಅಮಾನತು ಮಾಡಲಾಗಿದೆ ಎಂದು ಹಲವು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಸತ್ಯಕ್ಕೆ ದೂರವಾಗಿದೆ. ನನ್ನ ವೃತ್ತಿಬದುಕಿನಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವಿಸುವ ಯೋಚನೆಯೇ ನನಗೆ ಬಂದಿಲ್ಲ. ನನ್ನ ತಲೆಯಲ್ಲಿ ಜಿಮ್ನಾಸ್ಟ್ ಇದ್ದು ದೇಶದ ಗೌರವಕ್ಕೆ ಚ್ಯುತಿ ಬರುವಂತೆ ನಾನು ನಡೆದುಕೊಳ್ಳುವುದಿಲ್ಲ, ಸದ್ಯದಲ್ಲಿಯೇ ಮೊದಲಿನಂತೆ ಆಟಕ್ಕೆ ಮರಳಲು ನೋಡುತ್ತೇನೆ ಎಂದರು.
pic.twitter.com/LolR80zayc
— Dipa Karmakar (@DipaKarmakar) February 4, 2023
2016ರ ರಿಯೊ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದು ದೀಪಾ ಕರ್ಮಕರ್ ಹೆಸರು ಮಾಡಿದ್ದರು.