ದೇಶದ ಅತ್ಯಂತ ಭಾರದ ಎಲ್ ವಿಎಂ3 ರಾಕೆಟ್ ಎಂಜಿನ್ ಪರೀಕ್ಷೆ ಯಶಸ್ವಿ, ಪೇಲೋಡ್ ಸಾಮರ್ಥ್ಯ ಹೆಚ್ಚಳ

ಯಶಸ್ವಿ ಎಂಜಿನ್ ಪರೀಕ್ಷೆಯೊಂದಿಗೆ ದೇಶದ ಅತ್ಯಂತ ಭಾರವಾದ ಎಲ್ ವಿಎಂ3 ರಾಕೆಟ್ ನ ಪೇಲೋಡ್ ಸಾಮರ್ಥ್ಯವನ್ನು 450 ಕೆಜಿಯವರೆಗೂ ಹೆಚ್ಚಿಸಲಾಗಿದೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ. ಬೆಂಗಳೂರು: ಯಶಸ್ವಿ ಎಂಜಿನ್ ಪರೀಕ್ಷೆಯೊಂದಿಗೆ ದೇಶದ ಅತ್ಯಂತ ಭಾರವಾದ ಎಲ್ ವಿಎಂ3 ರಾಕೆಟ್ ನ ಪೇಲೋಡ್ ಸಾಮರ್ಥ್ಯವನ್ನು 450 ಕೆಜಿಯವರೆಗೂ ಹೆಚ್ಚಿಸಲಾಗಿದೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ.
ಉಡಾವಣಾ ವಾಹಕ ಎಲ್ ವಿಎಂ 3 ರಾಕೆಟ್ ಗಾಗಿ ಅಭಿವೃದ್ಧಿಪಡಿಸಿರುವ ಸ್ವದೇಶಿ ಸಿಇ20 ಕ್ರಯೋಜೆನಿಕ್ ಇಂಜಿನ್ ನ್ನು ನವೆಂಬರ್ 9 ರಂದು ಮೊದಲು 218 ಟನ್‌ಗಳ ಭಾರದೊಂದಿಗೆ ಯಶಸ್ವಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದು ಹೆಚ್ಚುವರಿ ಪ್ರೊಪೆಲ್ಹಾಂಟ್ ಲೋಡಿಂಗ್ ನೊಂದಿಗೆ ಎಲ್ ವಿಎಂ3 ಪೇಲೋಡ್ ಸಾಮರ್ಥ್ಯವನ್ನು 450 ಕೆಜಿಗೆ ಹೆಚ್ಚಿಸಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಇದನ್ನೂ ಓದಿ: ಭಾರೀ ತೂಕದ ರಾಕೆಟ್ ಇಂಜಿನ್‌ನ ಪರೀಕ್ಷೆ ನಡೆಸಿದ ಇಸ್ರೋ
ಇದರೊಂದಿಗೆ 3ಡಿ ಮುದ್ರಿತ ಎಲ್ ಒಎಕ್ಸ್ ಮತ್ತು ಎಲ್ ಹೆಚ್ 2 ಟರ್ಬೈನ್ ಎಕ್ಸಾಸ್ಟ್ ಕೇಸಿಂಗ್‌ಗಳನ್ನು ಇದೇ ಮೊದಲ ಬಾರಿಗೆ ಎಂಜಿನ್ ನಲ್ಲಿ ಅಳವಡಿಸಲಾಗಿದೆ. ಪರೀಕ್ಷೆ ವೇಳೆ ಎಂಜಿನ್ ಮತ್ತು ಸೌಲಭ್ಯದ ಕಾರ್ಯಕ್ಷಮತೆ ಸಾಮಾನ್ಯವಾಗಿದೆ ಮತ್ತು ಅಗತ್ಯವಿರುವ ನಿಯತಾಂಕಗಳನ್ನು ಸಾಧಿಸಲಾಗಿದೆ ಎಂದು ಅದು ಹೇಳಿದೆ.
ಮೂರು ಹಂತದ ಎಲ್ ವಿಎಂ 3 ರಾಕೆಟ್ ನಾಲ್ಕು ಟನ್ ಗಳ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.