ದೇವರ ನಾಡಿನಲ್ಲಿ ವರುಣನ ಮುನಿಸು..! ಕೊಟ್ಟಾಯಂ, ಇಡುಕ್ಕಿ, ಅಲಪ್ಪುಳದಲ್ಲಿ ಭೂ ಕುಸಿತ

​​ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಕೊಟ್ಟಾಯಂ, ಇಡುಕ್ಕಿ, ಅಲಪ್ಪುಳ, ಪಥನಂತಿಟ್ಟ ಜಿಲ್ಲೆಗಳಂತೂ ಭೂಕುಸಿತಗಳಿಂದ ತತ್ತರಿಸಿ ಹೋಗಿವೆ. ನೂರಾರು ಮನೆಗಳು ನೆಲಸಮಗೊಂಡಿವೆ. ಡಜನ್‌ಗೂ ಅಧಿಕ ಜನ ಕಣ್ಮರೆಯಾಗಿದ್ದು, ಅವರ ಶೋಧ ಕಾರ್ಯ ತೀವ್ರಗೊಂಡಿದೆ.

ದೇವರ ನಾಡಿನಲ್ಲಿ ವರುಣನ ಮುನಿಸು..! ಕೊಟ್ಟಾಯಂ, ಇಡುಕ್ಕಿ, ಅಲಪ್ಪುಳದಲ್ಲಿ ಭೂ ಕುಸಿತ
Linkup
ತಿರುವನಂತಪುರಂ (): ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸಂಭವಿಸಿದ ಭೂ ಕುಸಿತಗಳಲ್ಲಿ ಕೊಚ್ಚಿ ಹೋದವರನ್ನು ಪತ್ತೆ ಮಾಡುವುದೇ ರಕ್ಷಣಾ ತಂಡಗಳಿಗೆ ಸವಾಲಾಗಿದೆ. ಕೇರಳದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಬೀಳುತ್ತಿದೆ. ಅದರಲ್ಲಿಯೂ ಕೇಂದ್ರ ಮತ್ತು ದಕ್ಷಿಣ ಭಾಗದಲ್ಲಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನ 2018ರಲ್ಲಿ ಸಂಭವಿಸಿದ ಪ್ರವಾಹ ನೆನೆದು ಭೀತಿಗೆ ಒಳಗಾಗಿದ್ದಾರೆ. ಬಹುತೇಕ ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ಪ್ರಮುಖ ಸೇತುವೆಗಳು ಕುಸಿದು ಬಿದ್ದಿವೆ. ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ , , ಅಲಪ್ಪುಳ, ಪಥನಂತಿಟ್ಟ ಜಿಲ್ಲೆಗಳಂತೂ ಭೂಕುಸಿತಗಳಿಂದ ತತ್ತರಿಸಿ ಹೋಗಿವೆ. ನೂರಾರು ಮನೆಗಳು ನೆಲಸಮಗೊಂಡಿವೆ. ಡಜನ್‌ಗೂ ಅಧಿಕ ಜನ ಕಣ್ಮರೆಯಾಗಿದ್ದು, ಅವರ ಶೋಧ ಕಾರ್ಯ ತೀವ್ರಗೊಂಡಿದೆ. 'ಮನೆ, ಜಮೀನು, ವಾಹನ ಎಲ್ಲವನ್ನೂ ಕಳೆದುಕೊಂಡೆವು' ಎಂದು ಜನ ಗೋಳಿಡುತ್ತಿರುವ ದೃಶ್ಯ ಈ ಜಿಲ್ಲೆಗಳಲ್ಲಿ ಸಾಮಾನ್ಯವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌), ಸೇನೆಯ ಮೂರೂ ಪಡೆಗಳು ಬಿರುಸಿನ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಎನ್‌ಡಿಆರ್‌ಎಫ್‌ನ 11 ತಂಡಗಳನ್ನು ನಿಯೋಜನೆ ಮಾಡಲಾಗಿದ್ದು, ಪ್ರವಾಹದಲ್ಲಿ ಸಿಲುಕಿರುವವರನ್ನು ಪರಿಹಾರ ಕೇಂದ್ರಗಳಿಗೆ ಸಾಗಿಸಲಾಗುತ್ತಿದೆ. ಇದುವರೆಗೆ ಮಹಿಳೆಯರು, ಮಕ್ಕಳು ಸೇರಿ 33 ಜನರನ್ನು ರಕ್ಷಣೆ ಮಾಡಲಾಗಿದೆ. ರಾಜ್ಯ ಸರಕಾರವು ರಾಜ್ಯಾದ್ಯಂತ 105 ಪುನರ್ವಸತಿ ಕೇಂದ್ರಗಳನ್ನು ತೆರೆದಿದೆ. ಅಗತ್ಯ ಬಿದ್ದರೆ ಮತ್ತಷ್ಟು ಕೇಂದ್ರಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭರವಸೆ ನೀಡಿದ್ದಾರೆ. ಕೊಚ್ಚಿ ಕಡಲ ತೀರದಲ್ಲಿರುವ ಸಮರ ನೌಕೆ ಐಎನ್‌ಎಸ್‌ ಗರುಡದಲ್ಲಿ ನಿಯೋಜಿಸಲಾಗಿರುವ ಹೆಲಿಕಾಪ್ಟರ್‌ಗಳ ಮೂಲಕ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ವಾಯು ಪಡೆಯ ಎರಡು ಎಂಐ-17 ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಬೆಂಗಳೂರಿನ ಎಂಜಿನಿಯರಿಂಗ್‌ ಟಾಸ್ಕ್‌ಫೋರ್ಸ್‌ ಸಹ ಕೇರಳ ತಲುಪಿದೆ. ಪಥನಂತಿಟ್ಟ, ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶ್ಶೂರ್‌, ಪಾಲಕ್ಕಾಡ್‌, ಮಲಪ್ಪುರಂ, ಕೋಯಿಕ್ಕೋಡ್‌ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ (7.5 ಮಿ.ಮೀನಿಂದ 15 ಮಿ.ಮೀ ಮಳೆ ಸುರಿದು ಅಪಾಯವಾಗುವ ಸಾಧ್ಯತೆ) ಘೋಷಿಸಲಾಗಿದೆ. ಇನ್ನೂ ಮೂರು ದಿನ ವರ್ಷಧಾರೆ: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕೇರಳ ಸೇರಿ ಕೆಲವು ರಾಜ್ಯಗಳಲ್ಲಿ ಇನ್ನೂ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೇರಳ, ಕರ್ನಾಟಕ, ತಮಿಳುನಾಡು, ಪುದುಚೇರಿ ಸೇರಿ ಹಲವೆಡೆ ಅಕ್ಟೋಬರ್‌ 21ರವರೆಗೆ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ಪಿಣರಾಯಿ ಜತೆ ಮೋದಿ ಚರ್ಚೆ: ಮಳೆ ಹಾಗೂ ಭೂಕುಸಿತ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ. 'ಕೇರಳ ಪರಿಸ್ಥಿತಿ ಕುರಿತು ಪಿಣರಾಯಿ ವಿಜಯನ್‌ ಅವರೊಂದಿಗೆ ಚರ್ಚಿಸಿದ್ದೇನೆ. ಸಂತ್ರಸ್ತರ ನೆರವಿಗೆ ರಕ್ಷಣಾ ಸಿಬ್ಬಂದಿ ಧಾವಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ' ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ. 'ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಪ್ರವಾಹದ ಕುರಿತು ಕೇಂದ್ರ ಸರಕಾರ ಸತತ ನಿಗಾ ಇರಿಸಿದೆ. ರಕ್ಷಣಾ ಕಾರ್ಯಾಚರಣೆಗೆ ಕೇಂದ್ರದಿಂದ ಎಲ್ಲ ಸಹಕಾರ, ನೆರವು ನೀಡಲಾಗುತ್ತದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. 2018ರಲ್ಲಿಏನಾಗಿತ್ತು? ಜುಲೈ, ಆಗಸ್ಟ್‌ನಲ್ಲಿ ಶತಮಾನದಲ್ಲೇ ಕಂಡಿರಿಯದ ಮಳೆಗೆ ಕೇರಳ ಸಾಕ್ಷಿಯಾಯಿತು. ಮಳೆಯಿಂದ ಸಂಭವಿಸಿದ ದುರ್ಘಟನೆಗಳಲ್ಲಿ 483 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾದರು. ಸುಮಾರು 4 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ದಿಲ್ಲಿ, ಹರಿಯಾಣ, ಉತ್ತರ ಪ್ರದೇಶದಲ್ಲೂ ಮಳೆ ಕೇರಳದ ಜತೆಗೆ ದಿಲ್ಲಿ, ಉತ್ತರ ಪ್ರದೇಶ ಹಾಗೂ ಹರಿಯಾಣದ ಕೆಲವು ಪ್ರದೇಶಗಳಲ್ಲೂ ಭಾನುವಾರ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು. ಹಾಗೆಯೇ, ಸಂಚಾರ ದಟ್ಟಣೆಯಿಂದ ಜನ ಪರದಾಡುವಂತಾಯಿತು. ಲೋನಿ ದೆಹತ್‌, ಹಿಂಡನ್‌ ವಾಯು ನೆಲೆ, ಘಾಜಿಯಾಬಾದ್‌ ಸೇರಿ ಹಲವೆಡೆ ಇನ್ನೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ 24 ಗಂಟೆಯಲ್ಲಿ ಮೂರು ಮಿಲಿ ಮೀಟರ್‌ ಮಳೆಯಾಗಿದೆ. ಉತ್ತರಾಖಂಡದಲ್ಲೂ ಭಾನುವಾರ ಭಾರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಚಾರ್‌ಧಾಮ್‌ ಯಾತ್ರೆ ಸ್ಥಗಿತಗೊಳಿಸಲಾಗಿದೆ. ಚಾರ್‌ಧಾಮ್‌ ಪ್ರದೇಶದಲ್ಲಿ ಅಕ್ಟೋಬರ್‌ 18ರವರೆಗೆ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಯಾತ್ರೆಗೆ ನಿರ್ಬಂಸಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಪಡೆಗಳಿಗೆ ಯಾವುದೇ ಪರಿಸ್ಥಿತಿ ಎದುರಾದರೂ ರಕ್ಷಣೆಗೆ ಸಿದ್ಧವಿರುವಂತೆ ಸೂಚಿಸಲಾಗಿದೆ. ರೆಡ್‌ ಅಲರ್ಟ್‌ ಸಹ ಘೋಷಿಸಲಾಗಿದೆ.