ತಮಿಳುನಾಡು ಆರ್ಥಿಕ ಸಲಹಾ ಸಮಿತಿಯಲ್ಲಿ ರಘುರಾಮ್‌ ರಾಜನ್‌, ನೊಬೆಲ್‌ ವಿಜೇತೆ ಎಸ್ತರ್‌ ಡುಫ್ಲೋ

ತಮಿಳುನಾಡು ಸರಕಾರ 5 ಸದಸ್ಯರ ಆರ್ಥಿಕ ಸಲಹಾ ಸಮಿತಿಯನ್ನು ರಚಿಸಿದ್ದು, ಇದರಲ್ಲಿ ಆರ್‌ಬಿಐ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌, ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞೆ ಎಸ್ತರ್‌ ಡುಫ್ಲೋ ಸೇರಿ ಹಲವು ಘಟಾನುಘಟಿಗಳಿದ್ದಾರೆ.

ತಮಿಳುನಾಡು ಆರ್ಥಿಕ ಸಲಹಾ ಸಮಿತಿಯಲ್ಲಿ ರಘುರಾಮ್‌ ರಾಜನ್‌, ನೊಬೆಲ್‌ ವಿಜೇತೆ ಎಸ್ತರ್‌ ಡುಫ್ಲೋ
Linkup
ಚೆನ್ನೈ: ಸರಕಾರ ಐವರು ಸದಸ್ಯರ ಆರ್ಥಿಕ ಸಲಹಾ ಸಮಿತಿಯನ್ನು ರಚಿಸಿದ್ದು, ಇದರಲ್ಲಿ ಆರ್‌ಬಿಐ ಮಾಜಿ ಗವರ್ನರ್‌ , ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞೆ ಇದ್ದಾರೆ. ಈ ತಂಡ ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರಿಗೆ ರಾಜ್ಯದ ಹಣಕಾಸು ಮತ್ತು ಸಾಮಾಜಿಕ ನೀತಿಗಳನ್ನು ರೂಪಿಸಲು ಸಹಾಯ ಮಾಡಲಿದೆ. ಮಾಜಿ ಮುಖ್ಯ ಹಣಕಾಸು ಸಲಹೆಗಾರ ಅರವಿಂದ ಸುಬ್ರಮಣಿಯನ್‌, ಅರ್ಥಶಾಸ್ತ್ರಜ್ಞ ಹಾಗೂ ಸಾಮಾಜಿಕ ವಿಜ್ಞಾನಿ ಜೀನ್‌ ಡ್ರೇಜ್‌ ಹಾಗೂ ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ಎಚ್‌ ನಾರಾಯಣ್‌ ಈ ತಂಡದಲ್ಲಿರುವ ಇತರ ಸದಸ್ಯರಾಗಿದ್ದಾರೆ. "ತಮಿಳುನಾಡಿನ ಹಣಕಾಸಿನ ಪರಿಸ್ಥಿತಿಯು ಅನಿಶ್ಚಿತವಾಗಿದೆ. ನಿರಂತರವಾದ ಹೆಚ್ಚಿನ ಆದಾಯವಿದ್ದೂ, ಹಣಕಾಸಿನ ಕೊರತೆ ಮತ್ತು ದೊಡ್ಡ ಪ್ರಮಾಣದ ಸಾಲದೊಂದಿಗೆ ಈ ಅನಿಶ್ಚಿತತೆ ಸೃಷ್ಟಿಯಾಗಿದೆ. ಇದೇ ವೇಳೆ ಜನರ ನಿರೀಕ್ಷೆಗಳು ತುಂಬಾ ಹೆಚ್ಚಿವೆ. ಸರಕಾರವು ವೇಗವಾಗಿ ಆರ್ಥಿಕ ಬೆಳವಣಿಗೆ ಸಾಧಿಸಲಿರುವುದಲ್ಲದೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ತಲುಪಿಸುವ ಕೆಲಸ ಮಾಡಲಿದೆ," ತಮಿಳುನಾಡು ಸರಕಾರ ಹೇಳಿದೆ. ಆರ್ಥಿಕ ಸಲಹಾ ಸಮಿತಿಯು ಆರ್ಥಿಕ ಮತ್ತು ಸಾಮಾಜಿಕ ನೀತಿ, ಸಾಮಾಜಿಕ ನ್ಯಾಯ ಮತ್ತು ಮಾನವ ಅಭಿವೃದ್ಧಿ ಸಂಬಂಧಿತ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಿದೆ. ಜತೆಗೆ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಖಾತರಿಪಡಿಸುವುದು ಮತ್ತು ತುಳಿತಕ್ಕೊಳಗಾದ ಸಮುದಾಯಗಳ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿಯೂ ಸಲಹೆ-ಸೂಚನೆಗಳನ್ನು ನೀಡಲಿದೆ ಎಂದು ಸರಕಾರ ಹೇಳಿದೆ. ಇದರ ಜತೆಗೆ ಎಲ್ಲಾ ಕ್ಷೇತ್ರಗಳಲ್ಲೂ ಬೆಳವಣಿಗೆ, ಉದ್ಯೋಗ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಲಹೆಗಳನ್ನು ನೀಡುತ್ತದೆ. ಜೊತೆಗೆ ಅಭಿವೃದ್ಧಿಗಿರುವ ಅಡೆ ತಡೆಗಳನ್ನು ಪರಿಹರಿಸುವಂತಹ ವಿಚಾರಗಳಲ್ಲೂ ಉಪಯುಕ್ತ ಸಲಹೆ -ನೀಡಲಿದೆ. ಸಮಿತಿಯು ನೇರವಾಗಿ ಅಥವಾ ವರ್ಚುವಲ್‌ ಸಭೆ ಸೇರಬಹುದು. ಮತ್ತು ತನ್ನ ಗುರಿ ಮುಟ್ಟಲು ತನ್ನದೇ ಮಾರ್ಗವನ್ನು ಆಯ್ದುಕೊಳ್ಳಬಹುದು ಎಂದು ಸರಕಾರ ಹೇಳಿದೆ.