ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಕೋವಿಶೀಲ್ಡ್ ಒಂದು ಡೋಸ್ ಶೇ 61ರಷ್ಟು ಪರಿಣಾಮಕಾರಿ

ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್, ಡೆಲ್ಟಾ ರೂಪಾಂತರದ ವಿರುದ್ಧ ಶೇ 61ರಷ್ಟು ಪರಿಣಾಮಕಾರಿಯಾಗಿದೆ ಎಂದು ಎನ್‌ಟಿಎಜಿಐ ಅಧ್ಯಕ್ಷ ಡಾ. ಎನ್‌ಕೆ ಅರೋರಾ ಹೇಳಿದ್ದಾರೆ.

ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಕೋವಿಶೀಲ್ಡ್ ಒಂದು ಡೋಸ್ ಶೇ 61ರಷ್ಟು ಪರಿಣಾಮಕಾರಿ
Linkup
ಹೊಸದಿಲ್ಲಿ: ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಿರುವುದು ಮತ್ತೊಮ್ಮೆ ವಿವಾದ ಸೃಷ್ಟಿಸಿದೆ. ಶಿಫಾರಸಿನ ಬಗ್ಗೆ ಸೂಕ್ತವಾಗಿ ಪರಿಶೀಲಿಸದೆಯೇ ಸರಕಾರ ಡೋಸ್‌ಗಳ ನಡುವಿನ ಅಂತರವನ್ನು 12 ವಾರಗಳಿಗೂ ಮೇಲ್ಪಟ್ಟ ವಿಸ್ತರಿಸಿದೆ ಎಂದು ಅನೇಕ ವಿಜ್ಞಾನಿಗಳು ಆರೋಪಿಸಿದ್ದಾರೆ. ಈ ನಡುವೆ ರಾಷ್ಟ್ರೀಯ ಲಸಿಕಾ ಅಭಿಯಾನ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಮುಖ್ಯಸ್ಥ , ಮಾರಕ ಡೆಲ್ಟಾ ರೂಪಾಂತರದ ವಿರುದ್ಧ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಶೇ 61ರಷ್ಟು ಪರಿಣಾಮಕಾರಿ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಲಸಿಕಾ ಅಭಿಯಾನವು ನಾಲ್ಕು ವಾರಗಳ ಮಧ್ಯಂತರದ ಬಳಿಕ ಆರಂಭವಾಗಿತ್ತು. ದತ್ತಾಂಶಗಳಲ್ಲಿ ತೋರಿಸಿರುವಂತೆ ಪ್ರತಿರಕ್ಷಣಾ ಸ್ಪಂದನೆಯು ಅತ್ಯುತ್ತಮವಾಗಿದೆ. ಬ್ರಿಟನ್‌ನಲ್ಲಿ ಮಧ್ಯಂತರದ ಅವಧಿಯನ್ನು 12 ವಾರಗಳಿಗೆ ಆಗಲೇ ಹೆಚ್ಚಳ ಮಾಡಲಾಗಿತ್ತು ಎಂದು ಅರೋರಾ ಹೇಳಿದ್ದಾರೆ. ಲಸಿಕೆಯ ಡೋಸ್‌ಗಳ ನಡುವೆ 6-8 ವಾರಗಳ ಅಂತರ ಸೂಕ್ತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ ತಾಂತ್ರಿಕ ಸಮಿತಿಯು ಬ್ರಿಟನ್‌ನಿಂದ ಬರುವ ವಾಸ್ತವ-ಜೀವನ ದತ್ತಾಂಶವನ್ನು ಪರಿಶೀಲಿಸಲು ಬಯಸಿದೆ ಎಂದು ಅರೋರಾ ತಿಳಿಸಿದ್ದಾರೆ. ಬ್ರಿಟನ್‌ನಲ್ಲಿ ನಡೆಸಿರುವ ಅಧ್ಯಯನದ ವಿವರವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದ ತಾಂತ್ರಿಕ ತಂಡವು, ವೆಲ್ಲೋರ್‌ನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ಸಂಶೋಧನೆಯ ವಿವರಗಳನ್ನು ಪರಿಶೀಲಿಸಿದೆ. ಡೆಲ್ಟಾ ರೂಪಾಂತರದ ಪ್ರಭಾವ ಅಧಿಕವಾಗಿದ್ದಾಗ ಸಾವಿರಾರು ಮಾದರಿಗಳನ್ನು ಸಂಗ್ರಹಿಸಿ ನಡೆಸಲಾದ ಸಂಶೋಧನೆಯು ಕೋವಿಶೀಲ್ಡ್‌ನ ಒಂದು ಡೋಸ್ ಲಸಿಕೆಯು ಶೇ 61ರಷ್ಟು ಪ್ರಭಾವಶಾಲಿಯಾಗಿದ್ದು, ಎರಡು ಡೋಸ್‌ನಿಂದ ಶೇ 65ರಷ್ಟು ರಕ್ಷಣೆ ಒದಗಿಸುತ್ತದೆ ಎಂದು ತಿಳಿದುಬಂದಿದೆ.